ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ವೈರಸ್ ವಿರುದ್ದ ಹೋರಾಡಲು ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಭಾರತದಲ್ಲಿ ವೈರಸ್ ವಿರುದ್ದದ ಹೋರಾಟಕ್ಕಾಗಿ ತನ್ನ ಗ್ರಾಹಕರಿಗೆ ಹೊಸ ಉತ್ಪನ್ನವೊಂದನ್ನು ಪರಿಚಯಿಸಿದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಕೋವಿಡ್ ಪರಿಣಾಮ ವೈರಸ್‌ನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ಸಾಧ್ಯವಿರುವ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ವಾಹನಗಳ ಪ್ರಯಾಣದ ವೇಳೆ ಕೋವಿಡ್ ಹರಡುವಿಕೆ ತಡೆಯಲು ಹಲವಾರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಹೋಂಡಾ ಕಾರ್ಸ್ ಕಂಪನಿಯು ಈ ನಿಟ್ಟಿನಲ್ಲಿ ಹೊಸ ಪ್ರಯೋಗದೊಂದಿಗೆ ಯಶಸ್ವಿ ಕ್ರಮವೊಂದನ್ನು ಅಳವಡಿಸಿಕೊಳ್ಳುವ ಮೂಲಕ ಕಾರು ಪ್ರಯಾಣವನ್ನು ಸುರಕ್ಷಿತವಾಗಿಸುವಲ್ಲಿ ಹೊಸ ಪ್ರಯತ್ನ ಮಾಡಿದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಿಡಿಭಾಗಗಳ ಪೂರೈಕೆ ಕಂಪನಿಗಳೊಂದಿಗೆ ಜೊತೆಗೂಡಿ ಹೊಸದಾಗಿ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಉತ್ಪನ್ನವನ್ನು ಪರಿಚಯಿಸಿದ್ದು, ಹೊಸ ಏರ್ ಫಿಲ್ಟರ್ ಉತ್ಪನ್ನವು ಕಾರಿನ ಕ್ಯಾಬಿನ್ ವಾತಾವರಣವನ್ನು ಕೆಲವೇ ನಿಮಿಷಗಳಲ್ಲಿ ಶುದ್ದಗೊಳಿಸುವುದಲ್ಲದೆ ಅಪಾಯಕಾರಿ ವೈರಸ್‌ಗಳನ್ನು ಸಹ ಮಟ್ಟಹಾಕಬಲ್ಲದು.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಹೊಸದಾಗಿ ಬಿಡುಗಡೆ ಮಾಡಲಾಗಿರುವ ಪಿ.ಎಂ 2.5 ಏರ್ ಫಿಲ್ಟರ್ ಸೌಲಭ್ಯವು ಕಾರಿನ ಕ್ಯಾಬಿನ್‌ನಲ್ಲಿರುವ ಹಾನಿಕಾರಕ ಪರಿಸರ ಅನಿಲಗಳನ್ನು ಯಶಸ್ವಿಯಾಗಿ ಫಿಲ್ಟರ್ ಮಾಡಿ ಸೆರೆಹಿಡಿಯುತ್ತವೆ ಹಾಗೂ ಅಜೈವಿಕ ಮತ್ತು ಸಾವಯವ ಕಣಗಳು ಮತ್ತು ಏರೋಸಾಲ್‌ಗಳನ್ನು ಕಡಿಮೆಗೊಳಿಸುತ್ತವೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಹಾನಿಕಾರಕ ರೋಗಾಣುಗಳು, ಅಲರ್ಜಿ ಉಂಟುಮಾಡಬಹುದಾದ ಧೂಳಿನ ಕಣಗಳು ಮತ್ತು ಗಮನಾರ್ಹವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ವೈರಸ್‌ಗಳನ್ನು ಸೆರೆಹಿಡಿಯಿಲ್ಲಿದ್ದು, ರೋಗಾಣುಗಳು ಮತ್ತು ವೈರಸ್‌ಗಳ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚುತ್ತಿರುವ ಪ್ರಸ್ತುತ ಸಮಯದಲ್ಲಿ ಈ ವೈಶಿಷ್ಟ್ಯವು ಬಹಳ ಮಹತ್ವದ್ದಾಗಿದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಏರ್ ಫಿಲ್ಟರ್‌ನಲ್ಲಿರುವ ವಿವಿಧ ಪದರಗಳು ಎಲೆ ಸಾರದೊಂದಿಗೆ ಸಕ್ರಿಯವಾಗಿರುವ ಇಂಗಾಲ, ಅಲ್ಟ್ರಾ ಫೈನ್ ಏರೋಸಾಲ್‌ಗಳು ಧೂಳಿನ ಕಣಗಳನ್ನು ಮತ್ತು ವೈರಸ್ ಅನ್ನು ಆಕರ್ಷಿಸುವ ಮೂಲಕ ನಿಷ್ಕ್ರಿಯಗೊಳಿಸುತ್ತದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಈ ಮೂಲಕ ಕ್ಯಾಬಿನ್ ಗಾಳಿಯ ಗುಣಮಟ್ಟವನ್ನು ಹೆಚ್ಚಿಸುವ ಹೊಸ ಏರ್ ಫಿಲ್ಟರ್ ಸೌಲಭ್ಯವು ಕಾರು ಪ್ರಮಾಣದ ವೇಳೆ ಸೋಂಕು ಹರಡುವಿಕೆಯನ್ನು ಪರಿಣಾಮಕಾಗಿಯಾಗಿ ತಡೆಗಟ್ಟಲಿದ್ದು, ಹೊಸ ಏರ್ ಫಿಲ್ಟರ್ ಸೌಲಭ್ಯವು ಹೋಂಡಾ ಕಾರ್ಸ್ ಅಧಿಕೃತ ಶೋರೂಂಗಳಲ್ಲಿ ಈಗಾಗಲೇ ಖರೀದಿಗೆ ಲಭ್ಯವಿದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಇನ್ನು ಕೋವಿಡ್ ನಂತರ ವಾಣಿಜ್ಯ ಚಟುವಟಿಕೆಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕೂಡಾ ಹಲವಾರು ಸುರಕ್ಷಾ ಮಾರ್ಗಸೂಚಿಗಳೊಂದಿಗೆ ತನ್ನ ಕಾರು ಮಾರಾಟವನ್ನು ಸುರಕ್ಷಿತ ಮಾರ್ಗಗಳೊಂದಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಸುರಕ್ಷಿತ ಕಾರು ಮಾರಾಟಕ್ಕಾಗಿ ಹೆಚ್ಚು ಒತ್ತು ನೀಡುತ್ತಿರುವ ಹೋಂಡಾ ಕಾರ್ಸ್ ಕಂಪನಿಯು ಕಾರುಗಳ ಮಾರಾಟಕ್ಕಾಗಿ ಪ್ರತ್ಯೇಕವಾದ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ತಮ್ಮ ಇಷ್ಟದ ಕಾರು ಮಾದರಿಯನ್ನು ಆನ್‌ಲೈನ್ ಮೂಲಕವೇ ವಿಕ್ಷಣೆ ಮಾಡುವ ಅವಕಾಶ ನೀಡುತ್ತಿದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ವರ್ಚುವಲ್ ಶೋರೂಂನಲ್ಲಿ ಹೋಂಡಾ ನಿರ್ಮಾಣದ ಎಲ್ಲಾ ಕಾರು ಮಾದರಿಗಳು ವೀಕ್ಷಣೆಗೆ ಲಭ್ಯವಿದ್ದು, ಇದು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿ ನೀಡಿದ ಅನುಭವವನ್ನೇ ನೀಡುತ್ತದೆ. ಇದು ಸದ್ಯ ಕರೋನಾ ವೈರಸ್ ಪರಿಣಾಮ ಗ್ರಾಹಕರಿಗೂ ಮತ್ತು ಶೋರೂಂ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದ್ದು, ವೈರಸ್ ಹರಡುವಿಕೆಯನ್ನು ತಪ್ಪಿಸಲು ಅನುಕೂಲಕವಾಗಲಿದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಕೈಗೊಳ್ಳುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದ್ದು, 3ಡಿ ತಂತ್ರಜ್ಞಾನದ ಮೂಲಕ ನಿಮ್ಮ ಆಯ್ಕೆ ಕಾರಿನ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.

ವೈರಸ್ ಹರಡುವಿಕೆ ತಡೆಯಬಲ್ಲ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಪರಿಚಯಿಸಿದ Honda Cars

ವರ್ಚುವಲ್ ಶೋರೂಂ ನಲ್ಲಿ ಖರೀದಿಗೆ ಲಭ್ಯವಿರುವ ಕಾರು ಮಾದರಿಯ ವೆರಿಯೆಂಟ್, ತಾಂತ್ರಿಕ ಅಂಶಗಳು, ಬೆಲೆ, ಮತ್ತು ತಾಂತ್ರಿಕ ಅಂಶಗಳನ್ನು ನೇರವಾಗಿ ವೀಕ್ಷಣೆ ಮಾಡಬಹುದಾಗಿದ್ದು, ಸದ್ಯ ವರ್ಚುವಲ್ ಶೋರೂಂನಲ್ಲಿ ಎಲ್ಲಾ ಕಾರು ಮಾದರಿಗಳನ್ನು ವೀಕ್ಷಣೆ ಮಾಡಬಹುದಾಗಿದೆ.

Most Read Articles

Kannada
Read more on ಹೋಂಡಾ honda
English summary
Honda cars india introduced antivirus cabin air filter details
Story first published: Tuesday, October 19, 2021, 23:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X