ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಬಹುತೇಕ ಕಾರು ಕಂಪನಿಗಳು ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಏರಿಕೆಗೆ ಸಿದ್ದವಾಗಿದೆ.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿರುವುದು ವಾಹನ ಮಾಲೀಕತ್ವವು ದುಬಾರಿಯಾಗಿ ಪರಿಣಮಿಸಿದೆ.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 70 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಕಳೆದ ಜನವರಿ ಮತ್ತು ಏಪ್ರಿಲ್‌ನಲ್ಲಿ ದರ ಹೆಚ್ಚಳ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಅಗಸ್ಟ್ 1ರಿಂದ ಮತ್ತೆ ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ಶೇ.1.50ರಿಂದ ಶೇ.2ರಷ್ಟು ದುಬಾರಿಯಾಗಿವೆ.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಕಳೆದ ಏಪ್ರಿಲ್‌ನಲ್ಲಿ ದರ ಹೆಚ್ಚಳವಾದ ನಂತರ ಅಮೇಜ್ ಕಾರು ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.6.12 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.99 ಲಕ್ಷ ಬೆಲೆಯಿಂದ ಹೊಂದಿದ್ದು, ಆರಂಭಿಕವಾಗಿ ರೂ.7.55 ಲಕ್ಷಕ್ಕೆ ಟಾಪ್ ಎಂಡ್ ಮಾದರಿಯು ರೂ. 9.76 ಲಕ್ಷ ಬೆಲೆ ಪಡೆದುಕೊಂಡಿತ್ತು.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಡಬ್ಲ್ಯುಆರ್-ವಿ ಬೆಲೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.62 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.50 ಲಕ್ಷ ಬೆಲೆ ಹೊಂದಿದ್ದು, ಸಿಟಿ ಸೆಡಾನ್ ಕೂಡಾ ದುಬಾರಿ ಬೆಲೆ ಪಡೆದುಕೊಂಡಿತ್ತು.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಹೊಸ ದರ ಪಟ್ಟಿ ನಂತರ ಸಿಟಿ ಸೆಡಾನ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.94 ಲಕ್ಷ ಬೆಲೆ ಹೊಂದಿದ್ದು, ಬಹುತೇಕ ಕಾರು ಮಾದರಿಗಳ ಬೆಲೆಯಲ್ಲಿ ಸರಾಸರಿಯಾಗಿ ಶೇ. 1.50 ರಿಂದ ಶೇ.2 ರಷ್ಟು ದುಬಾರಿಯಾಗಿದೆ.

ಅಗಸ್ಟ್ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಹೋಂಡಾ ಕಾರ್ಸ್

ಇದೀಗ ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ಬೆಲೆ ಹೆಚ್ಚಿಸಲಾಗುತ್ತಿದ್ದು, ಕಾರು ಮಾಲೀಕತ್ವವು ಸಾಕಷ್ಟು ದುಬಾರಿಯಾಗುತ್ತಿದೆ. ಹೊಸ ವಾಹನ ಬಿಡಿಭಾಗಗಳ ಉತ್ಪಾದನೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದ್ದು, ನಿರಂತರ ಬೆಲೆ ಹೆಚ್ಚಳದಿಂದಲೂ ಕಾರು ಮಾರಾಟವು ಸಾಕಷ್ಟು ಕುಸಿತ ಕಾಣಲು ಆರಂಭಿಸುತ್ತಿದೆ.

Most Read Articles

Kannada
Read more on ಹೋಂಡಾ honda
English summary
Honda Cars India Planning To Price Hike From August. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X