Just In
- 11 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 13 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 15 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 1 day ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- News
ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.114ರಷ್ಟು ಹೆಚ್ಚಳ
ಹೋಂಡಾ ಕಾರ್ಸ್ ಕಂಪನಿಯು ನ್ಯೂ ಜನರೇಷನ್ ಸಿಟಿ ಸೆಡಾನ್ ಮೂಲಕ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಕಳೆದ ವರ್ಷದ ಜನವರಿಯಲ್ಲಿನ ಕಾರು ಮಾರಾಟಕ್ಕಿಂತ ಈ ವರ್ಷದ ಜನವರಿ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ. 114 ರಷ್ಟು ಬೆಳವಣಿಗೆ ಸಾಧಿಸಿದೆ.

2021ರ ಜನವರಿ ಅವಧಿಯಲ್ಲಿ ಹೋಂಡಾ ಕಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 11,319 ಯುನಿಟ್ಗಳನ್ನು ಮಾರಾಟಗೊಳಿಸಿದ್ದು, 2020ರ ಜನವರಿ ತಿಂಗಳಿನಲ್ಲಿ ಕೇವಲ 5,299 ಯುನಿಟ್ಗಳನ್ನು ಮಾತ್ರ ಮಾರಾಟಗೊಳಿಸಿತ್ತು. ವರ್ಷದ ಆರಂಂಭದಲ್ಲೇ ಹೋಂಡಾ ಕಾರ್ಸ್ ಕಂಪನಿಯ ವಿವಿಧ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗಿದ್ದು, ಕಳೆದ ವರ್ಷದ ಜನವರಿ ಅವಧಿಯಲ್ಲಿನ ಕಾರು ಮಾರಾಟಕ್ಕಿಂತ ಈ ವರ್ಷದ ಜನವರಿ ಅವಧಿಯಲ್ಲಿ ಶೇ. 114 ರಷ್ಟು ಬೆಳವಣಿಗೆ ಸಾಧಿಸಿದೆ.

ಹೋಂಡಾ ಕಾರ್ಸ್ ಕಂಪನಿಯು ವಿವಿಧ ಹೊಸ ಕಾರು ಮಾದರಿಗಳೊಂದಿಗೆ ಪ್ರಯಾಣಿಕ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೋಂಡಾ ಕಾರ್ಸ್ ಕಂಪನಿಯು ಕಳೆದ ಡಿಸೆಂಬರ್ನಲ್ಲೂ ಕೂಡಾ ವಾರ್ಷಿಕ ಕಾರು ಮಾರಾಟದಲ್ಲೂ ಉತ್ತಮ ಬೆಳವಣಿಗೆಯನ್ನು ಸಾಧಿಸಿತ್ತು.

ದಸರಾ ಮತ್ತು ದೀಪಾವಳಿ ನಂತರ ಹೊಸ ವಾಹನಗಳ ಮಾರಾಟವು ಸಾಮಾನ್ಯವಾಗಿ ತಗ್ಗಿದ್ದರೂ ಕೂಡಾ ಹೊಸ ವರ್ಷದ ಆರಂಭದಲ್ಲೇ ಹೋಂಡಾ ಕಾರು ಮಾರಾಟದಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಯಿದೆ.

ಇನ್ನು ಉತ್ಪಾದನಾ ವೆಚ್ಚಗಳ ನಿರ್ವಹಣೆಗಾಗಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದೆ. ಹೋಂಡಾ ಕಾರ್ಸ್ ಕಂಪನಿಯು ಫೆಬ್ರುವರಿ 1ರಿಂದಲೇ ಹೊಸ ಕಾರುಗಳ ಬೆಲೆ ಏರಿಕೆಯಾಗುವಂತೆ ಹೊಸ ದರ ನಿಗದಿಪಡಿಸಲಾಗಿದ್ದು, ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಪೆಟ್ರೋಲ್ ಮಾದರಿಯ ಬೆಲೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಕಾರುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ.

ಹೊಸ ದರ ಪಟ್ಟಿಯಲ್ಲಿ ಆರಂಭಿಕ ಕಾರು ಮಾದರಿಯಾದ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಕನಿಷ್ಠ ರೂ. 5 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.22ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.99 ಲಕ್ಷ ಬೆಲೆ ಹೊಂದಿದೆ.

ಜಾಝ್ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರು ಮಾದರಿಯು ಹೊಸದರಪಟ್ಟಿಯಲ್ಲಿ ಕನಿಷ್ಠ ರೂ. 5 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.79 ಲಕ್ಷ ಬೆಲೆ ಹೊಂದಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಯು ಹೊಸದರಪಟ್ಟಿಯಲ್ಲಿ ರೂ. 5 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.05 ಲಕ್ಷ ಬೆಲೆ ಹೊಂದಿದೆ.

ಇನ್ನು ಹೊಸದರಪಟ್ಟಿಯಲ್ಲಿ 5ನೇ ತಲೆಮಾರಿನ ಸಿಟಿ ಕಾರು ಮಾದರಿಯು ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ರೂ. 10 ಸಾವಿರದಿಂದ ರೂ.20 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.14.89 ಲಕ್ಷ ಬೆಲೆ ಹೊಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೋಂಡಾ ಕಾರ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಸದ್ಯ 5ನೇ ತಲೆಮಾರಿನ ಸಿಟಿ ಸೆಡಾನ್ ಮಾರಾಟ ಹೊಂದಿದ್ದರು ಈ ಹಿಂದಿನ 4ನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯ ಪೆಟ್ರೋಲ್ ಆವೃತ್ತಿಯ ಮಾರಾಟವನ್ನು ಮುಂದುವರಿಸಿದ್ದು, ನಾಲ್ಕನೇ ತಲೆಮಾರಿನ ಆವೃತ್ತಿಯಲ್ಲಿ ಯಾವುದೇ ಬೆಲೆ ಬದಲಾವಣೆ ತರಲಾಗಿಲ್ಲ.