ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ 2021ರ ಏಪ್ರಿಲ್ ತಿಂಗಳಿನ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಹೋಂಡಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 9,072 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಹೋಂಡಾ ಕಂಪನಿಯು 7,103 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.28 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಏಪ್ರಿಲ್ ತಿಂಗಳ ಮಾರಾಟ ಸಂಖ್ಯೆಗಳು ಹಿಂದಿನ ವರ್ಷದ ಮಾರಾಟದೊಂದಿಗೆ ಹೋಲಿಸಲಾಗದ ಕಾರಣ, ಹೋಂಡಾ ಕಂಪನಿಯು 2020ರ ಏಪ್ರಿಲ್‌ನಲ್ಲಿ ಯಾವುದೇ ಕಾರುಗಳ ಯುನಿ‍‍ಟ್‍‍ಗಳನ್ನು ಮಾಡಲಿಲ್ಲ.

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಏಕೆಂದರೆ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲಿತ್ತು. ಕರೋನಾ ಸಂಕಷ್ಟದ ನಡುವೆ ಕಳೆದ ತಿಂಗಳ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಪ್ರಸ್ತುತ ಆರೋಗ್ಯ ವಿಪತ್ತು ಇಡೀ ರಾಷ್ಟ್ರವನ್ನು ಅಪ್ಪಳಿಸಿದೆ ಮತ್ತು ಈ ಸಮಯದಲ್ಲಿ ದೇಶದ ಎಲ್ಲಾ ಪ್ರಜೆಗಳು ಯೋಗಕ್ಷೇಮಕ್ಕಿಂತ ಮುಖ್ಯವಾದುದು ಏನೂ ಇಲ್ಲ. ಆದರೆ ಖಂಡಿತವಾಗಿಯೂ, ಇದು ಮಾರುಕಟ್ಟೆಯಲ್ಲಿನ ವ್ಯಾಪಾರ ಮತ್ತು ವಿತರಣೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕರಾದರಾಜೇಶ್ ಗೋಯೆಲ್ ಅವರು ಹೇಳಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕಾರ್ಸ್ ಕಂಪನಿಯು ಪೂರ್ವ ನಿಗದಿಯೆಂತೆ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯನ್ನು ಕಳೆದ ತಿಂಗಳು ಹೆಚ್ಚಳ ಮಾಡಿದೆ. ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ಶೇ.1.50ರಿಂದ ಶೇ.2ರಷ್ಟು ದುಬಾರಿಯಾಗಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ವಾಹನ ಉತ್ಪಾದನಾ ಕಂಪನಿಗಳು ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದವು. ಆದರೆ ಇದೀಗ ಬಿಡಿಭಾಗಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿವೆ.

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ವಾಹನ ಉತ್ಪಾದನಾ ಕಂಪನಿಗಳು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಳವಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ.50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ. ಹೊಸ ದರಪಟ್ಟಿದಲ್ಲಿ ಹೋಂಡಾ ಕಾರು ಪ್ರಮುಖ ಕಾರು ಮಾದರಿಗಳಾದ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಏಪ್ರಿಲ್ ತಿಂಗಳಿನಲ್ಲಿ 9,072 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಕಾರುಗಳು ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಲ್ಲಿ ಸಿಟಿ ಸೆಡಾನ್ ಮಾದರಿಯು ಮಾರಾಟದಲ್ಲಿ ಹೋಂಡಾ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ.

Most Read Articles

Kannada
Read more on ಹೋಂಡಾ honda
English summary
Honda Posts 28 Percent Rise In Domestic Sales. Read In Kannada.
Story first published: Tuesday, May 4, 2021, 21:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X