ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ತನ್ನ 5ನೇ ತಲೆಮಾರಿನ ಹೋಂಡಾ ಸಿಟಿ ಕಾರ್ ಅನ್ನು ಎಡಗೈ ಡ್ರೈವ್ ದೇಶಗಳಿಗೆ ರಫ್ತು ಮಾಡುವುದಾಗಿ ತಿಳಿಸಿದೆ. ರಫ್ತು ಮಾಡುವ ಸಲುವಾಗಿಯೇ ಕಂಪನಿಯು ಎಡಗೈ ಡ್ರೈವ್ ಮಾದರಿಗಳ ಉತ್ಪಾದನೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಆರಂಭಿಸಿದೆ.

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಕಂಪನಿಯ ಈ ಯೋಜನೆಯು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ. ಕಂಪನಿಯು 5ನೇ ತಲೆಮಾರಿನ ಹೋಂಡಾ ಸಿಟಿ ಕಾರ್ ಅನ್ನು ಮಧ್ಯಪ್ರಾಚ್ಯ ದೇಶಗಳಿಗೆ ಗುಜರಾತ್‌ನ ಪಿಪಾವವ್ ಬಂದರು ಹಾಗೂ ಚೆನ್ನೈನ ಎನ್ನೋರ್ ಬಂದರಿನಿಂದ ರಫ್ತು ಮಾಡಲಿದೆ.

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

2020ರ ಆಗಸ್ಟ್ ತಿಂಗಳಿನಿಂದ ಹೋಂಡಾ ಕಾರ್ಸ್ ಕಂಪನಿಯು ದಕ್ಷಿಣ ಆಫ್ರಿಕಾ ಹಾಗೂ ನಮ್ಮ ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್ ದೇಶಗಳಿಗೆ ಹೊಸ ಸಿಟಿ ರೈಟ್ ಹ್ಯಾಂಡ್ ಡ್ರೈವ್ ಕಾರ್ ಅನ್ನು ರಫ್ತು ಮಾಡುತ್ತಿದೆ. ಈಗ ಕಂಪನಿಯು ತನ್ನ ಲೆಫ್ಟ್ ಹ್ಯಾಂಡ್ ಡ್ರೈವ್ ಕಾರುಗಳನ್ನು ರಫ್ತು ಮಾಡಲು ಮುಂದಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಈ ಬಗ್ಗೆ ಮಾತನಾಡಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಸಿಇಒ ಗಕು ನಕಾನಿಶಿ, ಹೋಂಡಾ ಸಿಟಿ ಭಾರತದಲ್ಲಿ ಸೆಡಾನ್‌ ಕಾರಿನ ಮಾನದಂಡವಾಗಿದೆ. ಭಾರತದ ವ್ಯವಹಾರವನ್ನು ಹೊಸ ತಾಣಗಳಿಗೆ ವಿಸ್ತರಿಸಲು ಸಿಟಿ ಕಾರಿನ ಎಡಗೈ ಡ್ರೈವ್ ಮಾದರಿಯನ್ನು ರಫ್ತು ಮಾಡುವುದು ಒಳ್ಳೆಯ ಅವಕಾಶವಾಗಿದೆ ಎಂದು ಹೇಳಿದರು.

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಬಲಗೈ ಹಾಗೂ ಎಡಗೈ ಡ್ರೈವ್ ಮಾದರಿಗಳನ್ನು ಉತ್ಪಾದಿಸಲು ಸಾಧ್ಯವಾಗುವಂತೆ ವಿಶ್ವ ದರ್ಜೆಯ ಉತ್ಪಾದನಾ ಘಟಕವನ್ನು ನಿರ್ಮಿಸಲು ತಪುಕ್ರಾದಲ್ಲಿ ಹೂಡಿಕೆ ಮಾಡಲಾಗಿದೆ. ಇದರಿಂದ ದೇಶಿಯ ಹಾಗೂ ಅಂತರರಾಷ್ಟ್ರೀಯ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಹೋಂಡಾ ಕಾರ್ಸ್ ಕಂಪನಿಯು ಈಗಾಗಲೇ ಅಮೇಜ್, ಡಬ್ಲ್ಯುಆರ್-ವಿ ಹಾಗೂ ಹೋಂಡಾ ಸಿಟಿ ಕಾರುಗಳನ್ನು ನೇಪಾಳ, ಭೂತಾನ್, ದಕ್ಷಿಣ ಆಫ್ರಿಕಾ ಹಾಗೂ ಎಸ್‌ಎಡಿಸಿ ದೇಶಗಳಿಗೆ ರಫ್ತು ಮಾಡುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ 5ನೇ ತಲೆಮಾರಿನ ಹೋಂಡಾ ಸಿಟಿ ಕಾರ್ ಅನ್ನು ರಫ್ತು ಮಾಡಲಾಗುತ್ತಿದೆ.

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಹೊಸ ಹೋಂಡಾ ಸಿಟಿ ಕಾರು ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಡಿಆರ್'ಎಲ್ ಹಾಗೂ ಎಲ್ಇಡಿ ಟೇಲ್'ಲ್ಯಾಂಪ್ ಗಳನ್ನು ಹೊಂದಿದೆ. ಈ ಕಾರು ಮುಂಭಾಗದಲ್ಲಿ ಕ್ರೋಮ್ ಗ್ರಿಲ್ ಹಾಗೂ ಶಾರ್ಪ್ ಶೋಲ್ಡರ್ ಲೈನ್ ಹೊಂದಿದೆ. ಈ ಲೈನ್ ಹೆಡ್‌ಲೈಟ್‌ನಿಂದ ಟೇಲ್ ಸೆಕ್ಷನ್'ವರೆಗೂ ಸಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಹೊಸ ಹೋಂಡಾ ಸಿಟಿ ಕಾರಿನಲ್ಲಿ 1.5 ಲೀಟರಿನ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರಿನ ಐ-ಡಿಟಿಇಸಿ ಡೀಸೆಲ್ ಎಂಜಿನ್‌ ಅಳವಡಿಸಲಾಗಿದೆ. ಇದರಲ್ಲಿ ಪೆಟ್ರೋಲ್ ಎಂಜಿನ್ 121 ಬಿಹೆಚ್‌ಪಿ ಪವರ್ ಹಾಗೂ 145 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 100 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ

ಹೊಸ ಹೋಂಡಾ ಸಿಟಿ ಕಾರಿನಲ್ಲಿ 4 ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್, ಅಲೆಕ್ಸಾ ಹೊಂದಿರುವ 8.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 7 ಇಂಚಿನ ಸೆಮಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Honda cars India to export made in India left hand drive Honda City cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X