ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಹೋಂಡಾ ಕಾರ್ಸ್ ಕಂಪನಿಯು ನ್ಯೂ ಜನರೇಷನ್ ಸಿಟಿ ಸೆಡಾನ್ ಮೂಲಕ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಕಳೆದ ವರ್ಷದ ಫೆಬ್ರುವರಿಯಲ್ಲಿನ ಕಾರು ಮಾರಾಟಕ್ಕಿಂತ ಈ ವರ್ಷದ ಫೆಬ್ರುವರಿ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.28 ರಷ್ಟು ಬೆಳವಣಿಗೆ ಸಾಧಿಸಿದೆ.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

2021ರ ಫೆಬ್ರವರಿ ಅವಧಿಯಲ್ಲಿ ಹೋಂಡಾ ಕಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 9,324 ಯುನಿಟ್‌ ಕಾರುಗಳನ್ನು ಮಾರಾಟಗೊಳಿಸಿದ್ದು, 2020ರ ಫೆಬ್ರವರಿ ತಿಂಗಳಿನಲ್ಲಿ 7,269 ಯುನಿಟ್‌ಗಳನ್ನು ಮಾತ್ರ ಮಾರಾಟಗೊಳಿಸಿತ್ತು. ವರ್ಷದ ಆರಂಂಭದಲ್ಲೇ ಹೋಂಡಾ ಕಾರ್ಸ್ ಕಂಪನಿಯ ವಿವಿಧ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗಿದ್ದು, ಕಳೆದ ವರ್ಷದ ಫೆಬ್ರವರಿ ಅವಧಿಯಲ್ಲಿನ ಕಾರು ಮಾರಾಟಕ್ಕಿಂತ ಈ ವರ್ಷದ ಫೆಬ್ರವರಿ ಅವಧಿಯಲ್ಲಿ ಶೇ.28 ರಷ್ಟು ಬೆಳವಣಿಗೆ ಸಾಧಿಸಿದೆ.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಹೋಂಡಾ ಕಾರ್ಸ್ ಕಂಪನಿಯು ವಿವಿಧ ಹೊಸ ಕಾರು ಮಾದರಿಗಳೊಂದಿಗೆ ಪ್ರಯಾಣಿಕ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೋಂಡಾ ಕಾರ್ಸ್ ಕಂಪನಿಯು ಕಳೆದ ಜನವರಿಯಲ್ಲೂ ಕೂಡಾ ವಾರ್ಷಿಕ ಕಾರು ಮಾರಾಟದಲ್ಲೂ ಉತ್ತಮ ಬೆಳವಣಿಗೆಯನ್ನು ಸಾಧಿಸಿತ್ತು.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಕಾರು ಮಾರಾಟದಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಹೋಂಡಾ ಕಾರ್ಸ್ ಕಂಪನಿಯು ಭಾರತದಲ್ಲಿ ಉತ್ಪಾದನೆಯಾದ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಸೌಲಭ್ಯ ಹೊಂದಿದ್ದು, ಫೆಬ್ರವರಿ ಅವಧಿಯಲ್ಲಿ ಕಂಪನಿಯು ವಿವಿಧ ರಾಷ್ಟ್ರಗಳಿಗೆ ಒಟ್ಟು 987 ಕಾರುಗಳನ್ನು ರಫ್ತುಗೊಳಿಸುವ ಮೂಲಕ ರಫ್ತು ಪ್ರಮಾಣದಲ್ಲೂ ಬೆಳವಣಿಗೆ ಸಾಧಿಸುತ್ತಿದೆ.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ದಸರಾ ಮತ್ತು ದೀಪಾವಳಿ ನಂತರ ಹೊಸ ವಾಹನಗಳ ಮಾರಾಟವು ಸಾಮಾನ್ಯವಾಗಿ ತಗ್ಗಿದ್ದರೂ ಕೂಡಾ ಹೊಸ ವರ್ಷದ ಆರಂಭದಲ್ಲೇ ಹೋಂಡಾ ಕಾರು ಮಾರಾಟದಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಯಿದೆ. ಇನ್ನು ಉತ್ಪಾದನಾ ವೆಚ್ಚಗಳ ನಿರ್ವಹಣೆಗಾಗಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದೆ.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಹೋಂಡಾ ಕಾರ್ಸ್ ಕಂಪನಿಯು ಫೆಬ್ರುವರಿ 1ರಿಂದಲೇ ಹೊಸ ಕಾರುಗಳ ಬೆಲೆ ಏರಿಕೆಯಾಗುವಂತೆ ಹೊಸ ದರ ನಿಗದಿಪಡಿಸಲಾಗಿದ್ದು, ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಪೆಟ್ರೋಲ್ ಮಾದರಿಯ ಬೆಲೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಕಾರುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಹೊಸ ದರ ಪಟ್ಟಿಯಲ್ಲಿ ಆರಂಭಿಕ ಕಾರು ಮಾದರಿಯಾದ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಕನಿಷ್ಠ ರೂ. 5 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.22ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.99 ಲಕ್ಷ ಬೆಲೆ ಹೊಂದಿದೆ.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಹೊಸದರಪಟ್ಟಿಯಲ್ಲಿ ಕನಿಷ್ಠ ರೂ. 5 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.79 ಲಕ್ಷ ಬೆಲೆ ಹೊಂದಿದೆ.

MOST READ: ಮುಖೇಶ್ ಅಂಬಾನಿ ಭದ್ರತೆಗಾಗಿಯೇ ಬಂತು ಮೂರು ಕೋಟಿ ಬೆಲೆಯ ಕಾರು

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಹೊಸದರಪಟ್ಟಿಯಲ್ಲಿ ರೂ. 5 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.05 ಲಕ್ಷ ಬೆಲೆ ಹೊಂದಿದೆ.

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಇನ್ನು ಹೊಸದರಪಟ್ಟಿಯಲ್ಲಿ 5ನೇ ತಲೆಮಾರಿನ ಸಿಟಿ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 10 ಸಾವಿರದಿಂದ ರೂ.20 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.14.89 ಲಕ್ಷ ಬೆಲೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಫೆಬ್ರವರಿ ತಿಂಗಳ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.28 ರಷ್ಟು ಹೆಚ್ಚಳ

ಹೋಂಡಾ ಕಾರ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಸದ್ಯ 5ನೇ ತಲೆಮಾರಿನ ಸಿಟಿ ಸೆಡಾನ್ ಮಾರಾಟ ಹೊಂದಿದ್ದರು ಈ ಹಿಂದಿನ 4ನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯ ಪೆಟ್ರೋಲ್ ಆವೃತ್ತಿಯ ಮಾರಾಟವನ್ನು ಮುಂದುವರಿಸಿದ್ದು, ನಾಲ್ಕನೇ ತಲೆಮಾರಿನ ಆವೃತ್ತಿಯಲ್ಲಿ ಯಾವುದೇ ಬೆಲೆ ಬದಲಾವಣೆ ತರಲಾಗಿಲ್ಲ.

Most Read Articles

Kannada
English summary
Honda Sells 9,324 Units Cars In February 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X