ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಹೋಂಡಾ ಈ ವರ್ಷದ ಆರಂಭದಲ್ಲಿ ನ್ಯೂ ಜನರೇಷನ್ ಸಿವಿಕ್ ಸೆಡಾನ್ ಅನ್ನು ಪರಿಚಯಿಸಿತ್ತು. ಹಿಂದಿನ ತಲೆಮಾರಿನ ಮಾದರಿಯು ಅಗ್ರೇಸಿವ್ ವಿನ್ಯಾಸವನ್ನು ಹೊಂದಿದ್ದರೆ, ನ್ಯೂ ಜನರೇಷನ್ ಮಾದರಿಯು ಹೆಚ್ಚು ಸಂಪ್ರದಾಯವಾದಿ ವಿನ್ಯಾಸವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಜಪಾನಿನ ವಾಹನ ತಯಾರಕ ಕಂಪನಿ ಹೋಂಡಾ ಇದೀಗ ಚೀನಾದ ಮಾರುಕಟ್ಟೆಗಾಗಿ ಹೊಸ ಸೆಡಾನ್ ಅನ್ನು ಪರಿಚಯಿಸಿದ್ದು, ಇದು ಆಕರ್ಷಕ ವಿನ್ಯಾಸ ಮತ್ತು ರೋಮಾಂಚಕ ಬಣ್ಣಗಳನ್ನು ಹೊಂದಿದೆ .ಇದು ಮೂಲತಃ ಸಿವಿಕ್ ಸೆಡಾನ್‌ನ ಚೈನೀಸ್ ಆವೃತ್ತಿಯಾಗಿದೆ, ಇದನ್ನು ಹೋಂಡಾ ಇಂಟಿಗ್ರಾ ಎಂದು ಕರೆಯಲಾಗುತ್ತದೆ. ಇಂಟಿಗ್ರಾ ಹೆಸರು ACURA (ಹೋಂಡಾದ ಐಷಾರಾಮಿ ಉಪ-ಬ್ರಾಂಡ್) ನೊಂದಿಗೆ ಸಂಬಂಧ ಹೊಂದಿದೆ. ಕಂಪನಿಯು ಇಂಟಿಗ್ರಾ ಹೆಸರನ್ನು ಜಾಗತಿಕ ಮಾದರಿಯಾಗಿ ಮರಳುತ್ತದೆ ಎಂದು ಹೇಳಿದ್ದರು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಕುತೂಹಲಕಾರಿಯಾಗಿ ಹೋಂಡಾ ಚೀನಾದ ಮಾರುಕಟ್ಟೆಗೆ ಹೊಸ ಸೆಡಾನ್ ಗಾಗಿ ಇಂಟಿಗ್ರಾ ಹೆಸರನ್ನು ಬಳಸಿದೆ. ಹೊಸ ಹೋಂಡಾ ಇಂಟಿಗ್ರಾವನ್ನು ಗುವಾಂಗ್‌ಕಿ ಹೋಂಡಾ ಅಭಿವೃದ್ಧಿಪಡಿಸಿದೆ, ಇದು ಚೀನಾದಲ್ಲಿ ಬ್ರಾಂಡ್‌ನ ಜಂಟಿ ಉದ್ಯಮವಾಗಿದೆ. ಈ ಸೆಡಾನ್ ಅನ್ನು ಗುವಾಂಗ್‌ಕಿನಲ್ಲಿ ಉತ್ಪಾದಿಸಲಾಗುವುದು. ಆದರೆ ಸಿವಿಕ್ ಅನ್ನು ವುಹಾನ್‌ನಲ್ಲಿ ಡಾಂಗ್‌ಫೆಂಗ್ ಹೋಂಡಾ ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಎರಡೂ ಸೆಡಾನ್ ಗಳು ಒಂದೇ ರೀತಿ ಕಾಣುತ್ತವೆ. ಆದರೆ ಹೋಂಡಾ ಇಂಟಿಗ್ರಾ ಸ್ಟೈಲಿಂಗ್ ಅಪ್‌ಡೇಟ್‌ಗಳನ್ನು ಸ್ಲಿಮ್ಮರ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ದೊಡ್ಡ ಫ್ರಂಟ್ ಗ್ರಿಲ್ ಪಡೆಯುತ್ತದೆ. ಅದೇ ರೀತಿ ಹಿಂದಿನ ಪ್ರೊಫೈಲ್ ಸ್ಲಿಮ್ಮರ್ ಎಲ್ಇಡಿ ಲ್ಯಾಂಪ್ ಗಳನ್ನು ಹೊಂದಿದೆ. ಸೆಡಾನ್ ಟ್ರನ್ಕ್ ಲಿಡ್ ನಲ್ಲಿ ಡ್ಯುಯಲ್ ಎಕ್ಸಾಸ್ಟ್ ವೆಂಟ್ ಮತ್ತು ಲೈಟ್ ಸ್ಪಾಯ್ಲರ್ ಅನ್ನು ಹೊಂದಿದ್ದು, ಇದು ಸ್ಪೋರ್ಟಿಯಲ್ ಲುಕ್ ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಇದು ಹೊಸದಾಗಿ ಅಭಿವೃದ್ಧಿಪಡಿಸಿದ 18 ಇಂಚಿನ ವ್ಹೀಲ್ ಅನ್ನು ಹೊಂದಿದೆ. ಹೋಂಡಾ ಇಂಟಿಗ್ರಾ ಎಮರಾಲ್ಡ್ ಬ್ಲೂ ಮತ್ತು ಫಿಯರಿ ಯೆಲ್ಲೊ ಸೇರಿದಂತೆ ರೋಮಾಂಚಕ ಬಣ್ಣಗಳನ್ನು ಪಡೆಯುತ್ತದೆ .ಕಂಪನಿಯು ಇಂಟಿಗ್ರಾದ ಯಾವುದೇ ಇಂಟಿರಿಯರ್ ಫೋಟೋಗಳನ್ನು ಬಿಡುಗಡೆ ಮಾಡಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಇದರ ಕ್ಯಾಬಿನ್ ಸಿವಿಕ್ ಸೆಡಾನ್ ನೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ. ಆದರೆ ಇದು ಹೊಸ ಇಂಟಿರ್ಯರ್ ಮತ್ತು ಹೊಸ ಬಣ್ಣ ಆಯ್ಕೆಗಳನ್ನು ಹೊಂದುವ ಸಾಧ್ಯತೆಯಿದೆ. ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ನಲ್ಲಿ 7-ಇಂಚಿನಿಂದ 9-ಇಂಚಿನವರೆಗಿನ ಆಯ್ಕೆಯ ಫ್ಲೋಟಿಂಗ್ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಇದರ ಇನ್ಫೋಟೈನ್ಮೆಂಟ್ ಯುನಿಟ್ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಹೊಸ ಸಿವಿಕ್ ನಲ್ಲಿ 10.2-ಇಂಚಿನ ಫುಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇತರ ರೂಪಾಂತರಗಳು 7 ಇಂಚಿನ ಡಿಸ್ ಪ್ಲೇಯನ್ನು ಪಡೆಯುತ್ತದೆ. ಇನ್ನು ಸ್ಮಾರ್ಟ್‌ಫೋನ್‌ಗಳಿಗೆ ವೈರ್‌ಲೆಸ್ ಚಾರ್ಜರ್ ಮತ್ತು 12 ಸ್ಪೀಕರ್‌ಗಳನ್ನು ಹೊಂದಿರುವ ಬೋಸ್ ಸೌಂಡ್ ಸಿಸ್ಟಂನೊಂದಿಗೆ ಬರುತ್ತದೆ. ಇದೇ ರೀತಿಯ ಫೀಚರ್ಸ್ ಗಳನ್ನು ಹೋಂಡಾ ಇಂಟಿಗ್ರಾ ಕಾರು ಹೊಂದಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಈ ಹೊಸ ಮಾದರಿಯು ಸರಿಯಾದ ಸೆಡಾನ್ ತರಹದ ಹಿಂಭಾಗದ ಪ್ರೊಫೈಲ್ ಅನ್ನು ಹೊಂದಿದೆ. 2022ರ ಹೋಂಡಾ ಸಿವಿಕ್ ಕಾರು 4,673 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,414 ಎಂಎಂ ಎತ್ತರವನ್ನು ಹೊಂದಿದೆ. ಇನ್ನು 2,735 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಈ ಹೊಸ ಸಿವಿಕ್ ಕಾರನ್ನು ಹಿಂದಿನ ಮಾದರಿಗೆ ಹೋಲಿಸಿದರೆ 32 ಎಂಎಂ ಉದ್ದ ಮತ್ತು 35 ಎಂಎಂ ನಷ್ಟು ವ್ಹೀಲ್‌ಬೇಸ್ ಅನ್ನು ಹೆಚ್ಚಿಸಲಾಗಿದೆ. ಹೊಸ ಸಿವಿಕ್ ಕಾರು 419-ಲೀಟರ್‌ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಹೋಂಡಾ ಇಂಟಿಗ್ರಾ ಸೆಡಾನ್ ಹಿಂಭಾಗದಲ್ಲಿ "240 ಟರ್ಬೊ" ಬ್ಯಾಡ್ಜ್ ಹೊಂದಿದೆ, ಇದು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಇದು ಸಿವಿಕ್ ಕಾರಿನಲ್ಲಿರುವ ಅದೇ 1.5ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿರಬಹುದು. ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ಹೊಸ ಮಿಡ್ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸುತ್ತಿರುವುದಾಗಿ ಹೋಂಡಾ ಹೇಳಿದೆ. ಇನ್ನು ಜಪಾನ್‌ನ ತಯಾರಕರು ಅಮೇಜ್‌ನ ಆರ್ಕಿಟಿಕ್ಚೆರ್ ಆಧರಿಸಿದ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಏಕೆಂದರೆ ಭಾರತ-ನಿರ್ದಿಷ್ಟ ಮಧ್ಯಮ ಗಾತ್ರವು ಅಭಿವೃದ್ಧಿಯಲ್ಲಿದೆ ಮತ್ತು ಅದು 2023ರ ಅಂತ್ಯದ ನಂತರವೇ ಪ್ರಾರಂಭಿಸಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಕಳೆದ ಮೂರು ವರ್ಷಗಳಲ್ಲಿ 10 ಕ್ಕೂ ಹೆಚ್ಚು ಮಾದರಿಗಳು ಲಭ್ಯವಿರುವುದರಿಂದ ಕಾಂಪ್ಯಾಕ್ಟ್ ಎಸ್‌ಯುವಿ ಜಾಗವನ್ನು ಸ್ಥಿರವಾಗಿ ಹೆಚ್ಚಿಸಲಾಗಿದೆ. ಇದರಿಂದ ಹೋಂಡಾ ಕಂಪನಿಯು ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಮಿಡ್ ಸೈಜ್ ಎಸ್‍ಯುವಿ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಹೋಂಡಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮಾದರಿಗೆ ಪೈಪೋಟಿಯಾಗಿ ಬರಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda Integra ಕಾರು

ಹೊಸ ಹೋಂಡಾ ಇಂಟೆಗ್ರಾ ಸೆಡಾನ್ ಅನ್ನು ಈ ವರ್ಷದ ಅಂತ್ಯದ ಮೊದಲು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದು ಚೀನಾ-ನಿರ್ದಿಷ್ಟ ಮಾದರಿಯಾಗಿದ್ದು, ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವುದಿಲ್ಲ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಹೋಂಡಾ ಕಂಪನಿಯು ಹೊಸ ಇಂಟಿಗ್ರಾವನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಮಾದರಿಯು ಮುಂದಿನ ವರ್ಷದಲ್ಲಿ ಪರಿಚಯಿಸಬಹುದು.

Most Read Articles

Kannada
Read more on ಹೋಂಡಾ honda
English summary
Honda unveiled stylish version of civic sedan in the form of integra 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X