ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಹೋಂಡಾ ಇಂಡಿಯಾ ಕಂಪನಿಯು ತನ್ನ ಐದನೇ ತಲೆಮಾರಿನ ಸಿಟಿ ಕಾರನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗಿತ್ತಿದೆ.

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಹೋಂಡಾ ಇಂಡಿಯಾ ಕಂಪನಿಯು 2021ರ ಫೆಬ್ರವರಿ ತಿಂಗಳ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ.28.3 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಕಳೆದ ತಿಂಗಳು ಹೋಂಡಾ ಸಿಟಿ ಮಾದರಿಯ 2,524 ಯುನಿಟ್ ಗಳು ಮಾರಾಟವಾಗಿವೆ. ಇನ್ನು 2020ರ ಫೆಬ್ರವರಿ ತಿಂಗಳಿನಲ್ಲಿ 1,256 ಯುನಿಟ್ ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಹೋಂಡಾ ಸಿಟಿ ಶೇ.101 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಹೊಸ ತಲೆಮಾರಿನ ಸಿಟಿ ಕಾರು ವಿ, ವಿಎಕ್ಸ್, ಝೆಡ್ಎಕ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಕಾರಿನಲ್ಲಿ ಎಲ್ಇಡಿ ಹೆಡ್‍‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, ಎಲ್ ಶೇಪ್ಡ್ ಎಲ್ಇಡಿ ಟರ್ನ್ ಸಿಗ್ನಲ್, ಡೈನಾಮಿಕ್ ಇಂಡಿಕೇಟರ್ ಅನ್ನು ನೀಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಈ ಹೊಸ ಸಿಟಿ ಕಾರು 10ನೇ ತಲೆಮಾರಿನ ಸಿವಿಕ್ ಸೆಡಾನ್ ಮಾದರಿಯಿಂದಲೂ ಹಲವಾರು ಫೀಚರ್ಸ್‌ಗಳನ್ನು ಎರವಲು ಪಡೆದುಕೊಂಡಿದೆ. ಇನ್ನು ಈ ಹೊಸ ಹೋಂಡಾ ಸಿಟಿ ಕಾರು 4,549 ಎಂಎಂ ಉದ್ದ, 1,748 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಹೋಂಡಾ ಸಿಟಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿದೆ. ಇದರಲ್ಲಿ 1.5-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಇದರಲ್ಲಿ 1.5-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಹೊಸ ಹೋಂಡಾ ಸಿಟಿ ಕಾರಿನಲ್ಲಿ ಕಟಿಂಗ್ ಎಡ್ಜ್ ಎಲ್ಇಡಿ ಹೆಡ್‍‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, ಎಲ್ ಶೇಪ್ಡ್ ಎಲ್ಇಡಿ ಟರ್ನ್ ಸಿಗ್ನಲ್ ಮತ್ತು ಡೈನಾಮಿಕ್ ಇಂಡಿಕೇಟರ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಹೋಂಡಾ ಕಂಪನಿಯು ಸಿಟಿ ಕಾರನ್ನು ಹೈಬ್ರಿಡ್ ಮಾದರಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಸಿಯಾಜ್ ಮಧ್ಯಮ ಗಾತ್ರದ ಸೆಡಾನ್‌ನಲ್ಲಿ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನಗಳನ್ನು ಪರಿಚಯಿಸುವ ಮಾರುತಿ ಸುಜುಕಿಯ ತಂತ್ರವನ್ನು ಹೋಂಡಾ ಅಳವಡಿಸಿಕೊಳ್ಳಬಹುದು. ಕಂಪನಿಯು ಎರಡು ಮೋಟಾರು ಹೈಬ್ರಿಡ್ ಸಿಸ್ಟಂನೊಂದಿಗೆ ಸಿಟಿ ಸೆಡಾನ್ ಅನ್ನು ಪರಿಚಯಿಸಬಹುದು ಎಂದು ಕೆಲವು ವರದಿಗಳು ಪ್ರಕಟವಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರು ಮಾರಾಟದಲ್ಲಿ ಶೇ.101ರಷ್ಟು ಹೆಚ್ಚಳ

ಹೋಂಡಾ ಸಿಟಿ ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಮಾದರಿಯಾಗಿದೆಹೋಂಡಾ ಸಿಟಿ ಭಾರತೀಯ ಮಾರುಟ್ಟೆಯಲ್ಲಿ ಹ್ಯುಂಡೈ ವೆರ್ನಾ, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ, ಮತ್ತು ಟೊಯೊಟಾ ಯಾರೀಸ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

Most Read Articles

Kannada
Read more on ಹೋಂಡಾ honda
English summary
Honda City Sales Grow By 101% In February 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X