Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಲ್ಯಾಂಬೊರ್ಗಿನಿ (Lamborghini) ಕಾರು ಚಾಲನೆ ಮಾಡುವುದು ಹಲವು ಜನರ ಕನಸು. ಲ್ಯಾಂಬೊರ್ಗಿನಿ ಕಾರುಗಳು ವಿ 10 ಹಾಗೂ ವಿ 12 ನಂತಹ ಶಕ್ತಿಶಾಲಿ ಎಂಜಿನ್‌ಗಳನ್ನು ಹೊಂದಿರುತ್ತವೆ. ಭಾರತದಲ್ಲಿಯೂ ಲ್ಯಾಂಬೊರ್ಗಿನಿ ಕಾರುಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ. ಲ್ಯಾಂಬೊರ್ಗಿನಿ ಕಾರುಗಳು ವಿಶಿಷ್ಟ ಫೀಚರ್ ಗಳ ಜೊತೆಗೆ ತೀಕ್ಷ್ಣವಾದ ಶೈಲಿಯನ್ನು ಹೊಂದಿರುತ್ತವೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಭಾರತದಲ್ಲಿ ಲ್ಯಾಂಬೊರ್ಗಿನಿ ಕಾರುಗಳನ್ನು ಹೊಂದಿರುವವರ ಸಂಖ್ಯೆ ಬಹಳ ಕಡಿಮೆ. ಲ್ಯಾಂಬೊರ್ಗಿನಿ ಕಾರುಗಳು ದುಬಾರಿ ಬೆಲೆಯನ್ನು ಹೊಂದಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ ಕೆಲವರು ವಿಭಿನ್ನವಾಗಿ ಯೋಚಿಸುತ್ತಾರೆ. ತಮ್ಮ ಬಳಿಯಿರುವ ಕಾರುಗಳನ್ನು ಲ್ಯಾಂಬೊರ್ಗಿನಿ ಕಾರುಗಳ ರೀತಿಯಲ್ಲಿ ಮಾಡಿಫೈ ಮಾಡಬೇಕೆಂದು ಬಯಸುತ್ತಾರೆ. ಮಧ್ಯಪ್ರದೇಶದ ಇಂದೋರ್ ಮೂಲದ ವ್ಯಕ್ತಿಯೊಬ್ಬರು ತಮ್ಮ ಹೋಂಡಾ ಸಿವಿಕ್ (Honda Civic) ಕಾರ್ ಅನ್ನು ಲ್ಯಾಂಬೊರ್ಗಿನಿ ಅವೆಂಟಡಾರ್ (Aventador) ಕಾರಿನ ರೀತಿಯಲ್ಲಿ ಮಾಡಿಫೈ ಮಾಡಿದ್ದಾರೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಈ ಹೋಂಡಾ ಸಿವಿಕ್ ಕಾರ್ ಅನ್ನು ಬಹುತೇಕ ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರಿನಂತೆ ಮಾರ್ಪಾಡು ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ವೀಡಿಯೊವನ್ನು ಮ್ಯಾಗ್ನೆಟೋ 11 ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊ ಸಂಪೂರ್ಣವಾಗಿ ಮಾಡಿಫೈಗೊಂಡ ಹೋಂಡಾ ಸಿವಿಕ್ ಕಾರ್ ಅನ್ನು ತೋರಿಸುವುದರಿಂದ ಆರಂಭವಾಗುತ್ತದೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಕಾರು ಮಾಲೀಕರು ಮಾಡಿಫೈಗೊಂಡ ಈ ಕಾರಿಗೆ ಸಿಲ್ವರ್ ಶಾರ್ಕ್ ಎಂದು ಹೆಸರಿಟಿದ್ದಾರೆ. ಈ ಕಾರ್ ಅನ್ನು ಶಾರ್ಕ್ ಸಿಲ್ವರ್ ಬಣ್ಣದಲ್ಲಿ ವಿನ್ಯಾಸಗೊಳಿಸಿರುವುದು ಇದಕ್ಕೆ ಕಾರಣ. ಇನ್ನು ಈ ಕಾರಿನ ಮಾರ್ಪಾಡುಗಳ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ನೋಡಿದ ಅತ್ಯುತ್ತಮ ಮಾರ್ಪಾಡುಗಳಲ್ಲಿ ಇದು ಕೂಡ ಒಂದಾಗಿದೆ. ಈ ಎಲ್ಲಾ ಬದಲಾವಣೆಗಳನ್ನು ಇಂದೋರ್‌ನ ಫಿರೋಜ್ ಖಾನ್ ಎಂಬ ಮೆಕ್ಯಾನಿಕ್ ಮಾಡಿದ್ದಾರೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಕಸ್ಟಮ್ ಬಾಡಿ ಪ್ಯಾನೆಲ್‌ಗಳನ್ನು ಈ ಹೋಂಡಾ ಸಿವಿಕ್ ಕಾರಿನ ಸುತ್ತಲೂ ಬಿಳಿ ಬಣ್ಣದಲ್ಲಿ ಬಹುತೇಕ ಅವೆಂಟಡಾರ್ ಲುಕ್‌ನೊಂದಿಗೆ ಅಳವಡಿಸಲಾಗಿದೆ. ಕಾರಿನ ಪ್ರತಿಯೊಂದು ಪ್ಯಾನೆಲ್ ಅನ್ನು ಅವೆಂಟಡಾರ್‌ನಂತೆಯೇ ಅದೇ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಮಾಡಿಫೈಗೊಂಡ ಈ ಕಾರು ಬಾನೆಟ್, ಅಪ್ಹೋಲ್ಟರ್ಡ್ ಡೋರ್ ಪ್ಯಾನೆಲ್‌ಗಳು, ಮುಂಭಾಗದ ಬಾಗಿಲುಗಳಲ್ಲಿ ಅಳವಡಿಸಲಾಗಿರುವ ರೇರ್ ವೀವ್ ಮಿರರ್‌, ಸೈಡ್ ವಿಂಡೋ ಪ್ಯಾನೆಲ್‌, ಕ್ವಾರ್ಟರ್ ವಿಂಡೋ ಮಿರರ್‌, ರೇರ್ ಪ್ಯಾನೆಲ್, ಹೆಡ್‌ಲ್ಯಾಂಪ್‌ ಹಾಗೂ ಟೇಲ್‌ಲ್ಯಾಂಪ್‌ಗಳನ್ನು ಹೊಂದಿದೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಈ ಕಾರಿನಲ್ಲಿ ಹೊಸ 19 ಇಂಚಿನ ಆಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಟಯರ್‌ಗಳನ್ನು ಸಹ ಸಾಧ್ಯವಾದಷ್ಟು ಅಗಲವಾಗಿ ನೀಡಲಾಗಿದೆ. ವಿಂಗ್ ಸ್ಪಾಯ್ಲರ್ ಅನ್ನು ಕಾರಿನ ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಬದಿಯಲ್ಲಿ ಫ್ರಂಟ್ ಹಾಗೂ ರೇರ್ ವ್ಹೀಲ್ ಗಳ ನಡುವೆ ಕೆಂಪು ಗೆರೆಯನ್ನು ನೀಡಲಾಗಿದೆ. ಎಲ್ಇಡಿ ಫಾಗ್ ಲ್ಯಾಂಪ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್ ಗಳನ್ನು ಮುಂಭಾಗದ ಬಂಪರ್ ಪ್ಯಾನೆಲ್ ಮೇಲೆ ಜೋಡಿಸಲಾಗಿದೆ.

ಮೂಲ ಅವೆಂಟಡಾರ್‌ ರೋಡ್‌ಸ್ಟರ್‌ನಂತೆ, ಈ ಹೋಂಡಾ ಸಿವಿಕ್‌ ಕಾರಿನ ರೂಫ್'ಗೆ ಟ್ವಿಸ್ಟ್ ನೀಡಲಾಗಿದೆ. ಎಂಜಿನ್ ಹೊಗೆಯನ್ನು ಹೊರಸೂಸುವ ಎಕ್ಸಾಸ್ಟ್ ಪೈಪ್ ಅನ್ನು ನಿಖರವಾಗಿ ಕಾರಿನ ಮಧ್ಯದಲ್ಲಿ ಒದಗಿಸಲಾಗಿದೆ. ಅದರಿಂದ ಹೊರ ಬರುವ ಶಬ್ದವು ಬಹುತೇಕ ಲ್ಯಾಂಬೊರ್ಗಿನಿ ಅವೆಂಟಡಾರ್ ಅನ್ನು ನೆನಪಿಸುತ್ತದೆ. ಆದರೆ ಲ್ಯಾಂಬೊರ್ಗಿನಿ ಕಾರುಗಳಿಗಿಂತ ಭಿನ್ನವಾಗಿ, ಈ ಹೋಂಡಾ ಸಿವಿಕ್‌ನ ಮುಂಭಾಗದಲ್ಲಿರುವ ಎಂಜಿನ್ ಹಾಗೇ ಇದೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಈ ಕಾರು 400 ಲೀಟರ್ ಸಾಮರ್ಥ್ಯದ ಹಿಂಭಾಗದಲ್ಲಿ ವಸ್ತುಗಳನ್ನು ಸಂಗ್ರಹಿಸಲು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ. ಈ ಬೂಟ್ ಸ್ಪೇಸ್‌ನ ಬಾಗಿಲನ್ನು ಮೇಲ್ಮುಖವಾಗಿ ಲಿಫ್ಟ್ ಆಗಿ ನೀಡಲಾಗಿದೆ. ಬಾಗಿಲು ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗಿದೆ. ಒಳಗಿನ ಸಂಪೂರ್ಣ ಕ್ಯಾಬಿನ್ ಅನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಲಾಗಿದೆ. ಆದರೆ ಹೋಂಡಾ ಸಿವಿಕ್ ಕಾರಿನ ಡ್ಯಾಶ್‌ಬೋರ್ಡ್ ಹಾಗೆ ಉಳಿದಿದೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಈ ಹೋಂಡಾ ಸಿವಿಕ್ ಕಾರು ಹೊಸ ಸ್ಪೋರ್ಟ್ ಸೀಟ್‌, ಡ್ಯಾಶ್‌ಬೋರ್ಡ್‌ನಲ್ಲಿ ಲೈಟ್ ಸ್ಟ್ರಿಪ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ ಸಣ್ಣ ಹಿಂಬದಿ ಸೀಟ್‌ಗಳೊಂದಿಗೆ ಸಂಯೋಜಿಸಬಹುದಾದ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂನಂತಹ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಈ ಕಾರಿನ ಹಿಂಬದಿ ಸೀಟಿನಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳಬಹುದು. ಹಾಗೆಯೇ ಟ್ರಾನ್ಸ್ ಮಿಷನ್ ಸಿಸ್ಟಂಗಾಗಿ ಡೋರ್ ಟ್ರಿಮ್, ರೂಫ್ ಪ್ಯಾನೆಲ್ ಗಳನ್ನು ಸ್ವಯಂ ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ. ಈ ಕಾರು ಟ್ರಾನ್ಸ್ ಮಿಷನ್ ಗಾಗಿ ರೂಫ್ ಪ್ಯಾನೆಲ್, ಪವರ್ ವಿಂಡೋ ಮಿರರ್‌ ಹಾಗೂ ರೇರ್ ಸೈಡ್ ವೀವ್ ಮಿರರ್‌ಗಳಿಗಾಗಿ ಸ್ವಿಚ್‌ಗಳನ್ನು ಸಹ ಹೊಂದಿದೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಇನ್ನು ಭಾರತದಲ್ಲಿನ ವಾಹನ ಮಾಡಿಫೈ ಬಗ್ಗೆ ಹೇಳುವುದಾದರೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಮಾಡಿಫೈಗೊಂಡಿರುವ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಮಾಡಿಫೈ ಮಾಡಲಾದ ವಾಹನಗಳನ್ನು ಜನರು ರೇಸಿಂಗ್ ಟ್ರ್ಯಾಕ್ ಅಥವಾ ಫಾರಂಹೌಸ್‌ನಂತಹ ಖಾಸಗಿ ಸ್ಥಳಗಳಲ್ಲಿ ಬಳಸಬಹುದು.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಒಂದು ವೇಳೆ ಸಾರ್ವಜನಿಕ ರಸ್ತೆಗಳಲ್ಲಿ ಕಂಡು ಬಂದರೆ ಸಾರಿಗೆ ಇಲಾಖೆ ಅಥವಾ ಸಂಚಾರಿ ಪೊಲೀಸರು ಆ ವಾಹನಗಳನ್ನು ವಶಕ್ಕೆ ಪಡೆಯಬಹುದು. ಇದು ಮಾತ್ರವಲ್ಲದೆ ಆಫ್ಟರ್ ಮಾರ್ಕೆಟ್ ಬಿಡಿ ಭಾಗಗಳಾದ ಬುಲ್‌ಬಾರ್‌ಗಳ ಅಳವಡಿಕೆ ಹಾಗೂ ಇತರ ಬದಲಾವಣೆಗಳನ್ನು ಸಹ ವಾಹನದಲ್ಲಿ ನಿಷೇಧಿಸಲಾಗಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಈ ಹಿಂದೆ ಇಂತಹ ಮಾಡಿಫೈಗೊಂಡ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು ಎಂಬುದು ಗಮನಾರ್ಹ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಇತ್ತೀಚಿಗೆ ಅಸ್ಸಾಂನ ವ್ಯಕ್ತಿಯೊಬ್ಬರುತಮ್ಮ ದ್ವಿಚಕ್ರ ವಾಹನವನ್ನು ನಾಲ್ಕು ಜನ ಪ್ರಯಾಣಿಸುವಂತೆ ಪರಿವರ್ತಿಸಿದ್ದಾರೆ. ತಮ್ಮ ನಾಲ್ಕು ಜನರ ಕುಟುಂಬಕ್ಕಾಗಿ ಈ ಸ್ಕೂಟರ್ ಅನ್ನು ಅವರು ಈ ರೀತಿ ವಿನ್ಯಾಸಗೊಳಿಸಿದ್ದಾರೆ. ಈ ಸ್ಕೂಟರ್ ನೋಡಲು ತುಂಬಾ ವಿಶೇಷವಾಗಿರುವುದರ ಜೊತೆಗೆ ವಿಶಿಷ್ಟವಾಗಿದೆ.

Lamborghini ಕಾರಿನಂತೆ ಮಾಡಿಫೈಗೊಂಡ Honda Civic ಕಾರು

ಇದಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಮಾಡಿಫೈಗೊಂಡ ಸ್ಕೂಟರ್ ನಲ್ಲಿ ನಾಲ್ವರುಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಅವರು ಎರಡು ಸ್ಕೂಟರ್ ಗಳನ್ನು ಒಟ್ಟಿಗೆ ಸೇರಿಸಿ ಈ ರೀತಿ ಮಾಡಿಫೈ ಮಾಡಿದ್ದಾರೆ.

Most Read Articles

Kannada
English summary
Honda civic car modified like lamborghini aventador roadster video details
Story first published: Tuesday, December 14, 2021, 10:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X