ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಜಪಾನ್ ಮೂಲದ ಖ್ಯಾತ ವಾಹನ ತಯಾರಕ ಕಂಪನಿಯಾದ ಹೋಂಡಾ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರ ಹೊಮ್ಮುವ ಗುರಿಯನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ಕಂಪನಿಯು ಪೂರೈಕೆ ಸರಪಳಿಯ ಕಡೆಗೂ ಗಮನಹರಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೋಂಡಾ ಕಂಪನಿಯು ಭಾರತದಲ್ಲಿ ತನ್ನ ಬ್ಯಾಟರಿ ಹಂಚಿಕೆ ಸೇವೆಯನ್ನು ಆರಂಭಿಸಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೊಸ ಘಟಕವಾಗಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಸೌಲಭ್ಯಗಳನ್ನು ಒದಗಿಸುತ್ತದೆ. ವರದಿಗಳ ಪ್ರಕಾರ, ಹೋಂಡಾ 2022 ರ ಮೊದಲಾರ್ಧದಿಂದ ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಬ್ಯಾಟರಿ ಹಂಚಿಕೆ ಸೇವೆಯನ್ನು ನೀಡುವುದಾಗಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಆರಂಭದಲ್ಲಿ ಈ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುವುದು. ನಂತರ ದೇಶದ ಇತರ ನಗರಗಳಲ್ಲಿ ಹಂತ ಹಂತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಹೋಂಡಾ ಕಂಪನಿಯು ಮೊಬೈಲ್ ಪವರ್ ಪ್ಯಾಕ್ ಇ-ಬ್ಯಾಟರಿಯನ್ನು ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಿದೆ. ತನ್ನ ಸೇವಾ ಚಂದಾದಾರರು ಬ್ಯಾಟರಿಯನ್ನು ವಿನಿಮಯ ಮಾಡಿಕೊಳ್ಳಲು ಹತ್ತಿರದ ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‌ನಿಂದ ಸೇವೆಯನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಇದರಿಂದ ಎಲೆಕ್ಟ್ರಿಕ್ ಆಟೋ ರಿಕ್ಷಾ ಚಾಲಕರು ಚಾರ್ಜಿಂಗ್‌ಗಾಗಿ ಹೆಚ್ಚು ಕಾಯಬೇಕಾಗಿಲ್ಲ. ಜೊತೆಗೆ ಅವರ ವ್ಯವಹಾರದ ಮೇಲೆ ಪರಿಣಾಮ ಬೀರುವುದು ತಪ್ಪುತ್ತದೆ. ದೇಶದಲ್ಲಿ ತನ್ನ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದ ನಂತರ ಈ ಹೊಸ ಅಂಗಸಂಸ್ಥೆಯು ಹೋಂಡಾ ಕಾರ್ಸ್ ಇಂಡಿಯಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೋಂಡಾ ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಹೊಸ ಕಂಪನಿಯು ಇಂಟರ್‌ಫೇಸ್‌ಗೆ ಅಗತ್ಯವಿರುವ ತಾಂತ್ರಿಕ ಜ್ಞಾನದೊಂದಿಗೆ ಒಇಎಂಗಳನ್ನು ಒದಗಿಸುತ್ತದೆ. ವಾಹನ ಒಇಎಂ ಅಪ್ಲಿಕೇಶನ್ ಹಾಗೂ ಸೇವಾ ಪ್ರದೇಶಗಳನ್ನು ವಿಸ್ತರಿಸುವ ಮೂಲಕ, ಸೇವಾ ಅನುಕೂಲತೆಯನ್ನು ಹೆಚ್ಚಿಸಲು ಹೆಚ್ಚು ಎಲೆಕ್ಟ್ರಿಕ್ ವಾಹನ ಚಾಲಕರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ಹೋಂಡಾ ಕಂಪನಿ ಹೇಳಿಕೊಂಡಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಇದೇ ವೇಳೆ ಹೋಂಡಾ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಹತ್ತು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಜಪಾನಿನ ವಾಹನ ದೈತ್ಯ ಕಂಪನಿಯು 2040ರ ನಂತರ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಭಾರತವು ಎಲೆಕ್ಟ್ರಿಕ್ ವಾಹನಗಳ ಬೃಹತ್ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಹೋಂಡಾ ದೇಶಿಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಾಹನ ಸೆಗ್ ಮೆಂಟಿನಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಹೊಂದಿದೆ. 2050ರ ವೇಳೆಗೆ ವಾಹನ ಅಪಘಾತಗಳನ್ನು ಶೂನ್ಯಕ್ಕೆ ತಗ್ಗಿಸುವ ಸಲುವಾಗಿ ಕಂಪನಿಯು ಸುಧಾರಿತ ಸುರಕ್ಷತಾ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಗುರಿಯನ್ನು ಸಾಧಿಸಲು, ಕಂಪನಿಯು ಎರಡು ಪ್ರಮುಖ ತಂತ್ರಜ್ಞಾನಗಳನ್ನು ಬಳಸಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಇದರಲ್ಲಿ ಮೊದಲನೆಯದು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - AI) ತಂತ್ರಜ್ಞಾನವಾಗಿದ್ದರೆ ಎರಡನೆಯದು ಕಾರುಗಳ ನೆಟ್‌ವರ್ಕ್ ಆಧಾರಿತ

ತಂತ್ರಜ್ಞಾನವಾಗಿದೆ. AI ಚಾಲಿತ ತಂತ್ರಜ್ಞಾನವು ವಾಹನ ಚಾಲನೆ ಮಾಡುವಾಗ ಸಂಭವನೀಯ ಅಪಾಯಗಳ ಬಗ್ಗೆ ಕಾರು ಚಾಲಕನಿಗೆ ಮಾಹಿತಿ ನೀಡುತ್ತದೆ. ಇದರಿಂದ ರಸ್ತೆಯಲ್ಲಿನ ಅಜಾಗರೂಕತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಹೋಂಡಾ ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಮತ್ತೊಂದೆಡೆ ಸುರಕ್ಷಿತ ಹಾಗೂ ದೃಢವಾದ ನೆಟ್‌ವರ್ಕ್ ತಂತ್ರಜ್ಞಾನವು ರಸ್ತೆ ವಾಹನಗಳು ಹಾಗೂ ಪಾದಚಾರಿಗಳ ಕಾರ್ ಟು ಕಾರ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ದೂರಸಂಪರ್ಕದ ಮೂಲಕ ರಸ್ತೆಯಲ್ಲಿ ಸಂಭವನೀಯ ಅಪಾಯಗಳನ್ನು ಊಹಿಸಲು ಸಾಧ್ಯವಾಗುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಅಪಘಾತ ಮುಕ್ತ ರಸ್ತೆಗಳಿಗಾಗಿ ಕಂಪನಿಯು ತನ್ನ ಹೊಸ ಹೋಂಡಾ ಸೆನ್ಸಿಂಗ್ 360 ತಂತ್ರಜ್ಞಾನವನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಹೇಳಿದೆ. ಇದು ಬಹುಪಯೋಗಿ ತಂತ್ರಜ್ಞಾನವಾಗಿದ್ದು, 2030 ರಿಂದ ಹೋಂಡಾ ಕಾರುಗಳಲ್ಲಿ ಬಳಸಲಾಗುವುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಸುಧಾರಿತ ಸಂವಹನ ಮಾಧ್ಯಮದಿಂದ ಬೆಂಬಲಿತವಾಗಿರುವ ಈ ತಂತ್ರಜ್ಞಾನವು ಹೋಂಡಾ ಕಾರುಗಳನ್ನು ರಸ್ತೆಯಲ್ಲಿ ಸುರಕ್ಷಿತವಾಗಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಜೊತೆಗೆ ಚಾಲಕರು ರಸ್ತೆಯಲ್ಲಿ ಸರಿಯಾದ ರೀತಿಯಲ್ಲಿ ಕಾರ್ ಅನ್ನು ಚಾಲನೆ ಮಾಡಲು ನೆರವಾಗುತ್ತದೆ. ಈ ತಂತ್ರಜ್ಞಾನವನ್ನು ಹೋಂಡಾದ ಕಾರುಗಳ ಜೊತೆಗೆ ಬೈಕ್ ಹಾಗೂ ಸ್ಕೂಟರ್‌ಗಳಂತಹ ದ್ವಿಚಕ್ರ ವಾಹನಗಳನ್ನು ರಕ್ಷಿಸಲು ಸಹ ಬಳಸಬಹುದು ಎಂದು ಹೋಂಡಾ ಕಂಪನಿ ತಿಳಿಸಿದೆ. ಡ್ರೈವಿಂಗ್ ಮಾಡುವಾಗ ಉಂಟಾಗುವ ತಪ್ಪುಗಳ ಕಾರಣಗಳನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಬಳಸುವುದಾಗಿ ಹೋಂಡಾ ಹೇಳಿಕೊಂಡಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಜೊತೆಗೆ ರಸ್ತೆಯಲ್ಲಿ ಚಾಲನೆ ಮಾಡುವಾಗ ಜನರ ಮನಸ್ಥಿತಿಯನ್ನು ತಿಳಿಯಲು ಪ್ರಯತ್ನಿಸುತ್ತದೆ. ಸುರಕ್ಷತಾ ತಂತ್ರಜ್ಞಾನವು ಅಪಘಾತಗಳನ್ನು ತಡೆಯಲು ನೆರವಾಗುತ್ತದೆ ಎಂದು ಕಂಪನಿ ತಿಳಿಸಿದೆ. ಹೊಸ ತಲೆಮಾರಿನ ಚಾಲಕ - ಸಹಾಯಕ ತಂತ್ರಜ್ಞಾನವು ಈಗ ಸಂಶೋಧನೆ ಮತ್ತು ಅಭಿವೃದ್ಧಿ ಹಂತದಲ್ಲಿದೆ ಎಂದು ಹೋಂಡಾ ವರದಿ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಈ ತಿಂಗಳ ಆರಂಭದಲ್ಲಿ, ಹೋಂಡಾ ಕಂಪನಿಯು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ZR-V ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಕಂಪನಿಯು ಈ ಎಸ್‌ಯುವಿಯನ್ನು ದಕ್ಷಿಣ ಏಷ್ಯಾ ಮಾರುಕಟ್ಟೆಗಳಲ್ಲಿ ಹೋಂಡಾ WR-V ಎಸ್‌ಯುವಿ ಬದಲು ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಶೇರಿಂಗ್ ಸೇವೆ ಆರಂಭಿಸಿದ Honda

ಭಾರತದಲ್ಲಿ ಹೋಂಡಾ ZR-V ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹುಂಡೈ ವೆನ್ಯೂ, ಟಾಟಾ ನೆಕ್ಸಾನ್ ಹಾಗೂ ಇನ್ನಿತರ ಸಬ್‌ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
Read more on ಹೋಂಡಾ honda
English summary
Honda company starts battery sharing services in india details
Story first published: Friday, December 3, 2021, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X