ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಹರಸಾಹಸ ಪಡುತ್ತಿದ್ದು, ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿವೆ.

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಕೋವಿಡ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸರ್ಕಾರಗಳ ಪ್ರಯತ್ನಕ್ಕೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಸಹಕಾರ ನೀಡುತ್ತಿವೆ.

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಯು ಸಾಧ್ಯವಿರುವ ಕಡೆಗಳಲ್ಲಿ ಸರ್ಕಾರದ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಗ್ರೂಪ್ ಕೂಡಾ ತನ್ನ ಹೋಂಡಾ ಫೌಂಡೇಶನ್ ಮೂಲಕ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಹಣಾಕಾಸು ನೆರವು ನೀಡಿದೆ.

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

2020ರ ಏಪ್ರಿಲ್ ಅವಧಿಯಲ್ಲಿನ ಕೋವಿಡ್ ಹೆಚ್ಚಳ ಸಂದರ್ಭದಲ್ಲೂ ಬರೋಬ್ಬರಿ ರೂ.10 ಕೋಟಿ ದೇಣಿಗೆ ನೀಡಿದ್ದ ಹೋಂಡಾ ಗ್ರೂಪ್ ಕಂಪನಿಯು ಇದೀಗ 2ನೇ ಅಲೆಯ ಕೋವಿಡ್ ನಿಯಂತ್ರಣಕ್ಕಾಗಿ ರೂ. 6.50 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ದೇಣಿಗೆ ಹಣವನ್ನು ಪಿಎಂ ಕೇರ್ಸ್ ಫಂಡ್(ಪ್ರಧಾನ ಮಂತ್ರಿ ಪರಿಹಾರ ನಿಧಿ)ಗೆ ನೀಡಲಾಗಿದೆ.

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹೆಚ್‌ಎಂಎಸ್‌ಐ) ಮತ್ತು ಹೋಂಡಾ ಕಾರ್ಸ್ ಇಂಡಿಯಾ ತನ್ನ ನಾಲ್ಕು ಘಟಕಗಳಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ 15 ದಿನಗಳ ಕಾಲ ಉತ್ಪಾದನೆಯನ್ನು ಬಂದ್ ಮಾಡಿದ್ದು, ಹರಿಯಾಣದ ಮನೇಸರ್, ರಾಜಸ್ಥಾನದ ತಪುಕರ್, ಕರ್ನಾಟಕದ ನರಸಾಪುರ ಹಾಗೂ ಗುಜರಾತ್'ನ ವಿಠಾಪುರಗಳಲ್ಲಿನ ಘಟಕಗಳಲ್ಲಿನ ಉತ್ಪಾದನೆ ಬಂದ್ ಮಾಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಉತ್ಪಾದನೆಯನ್ನು ಬಂದ್ ಮಾಡಿದರೂ ಕೂಡಾ ಗ್ರಾಹಕರ ಸೇವೆಗಳಲ್ಲಿ ಯಾವುದೇ ತೊಂದರೆ ಆಗದಂತೆ ಎಲ್ಲಾ ಅಗತ್ಯ ಸಿದ್ದತೆ ಮಾಡಿಕೊಂಡಿರುವುದಾಗಿ ತನ್ನ ಗ್ರಾಹಕರಿಗೆ ಭರವಸೆ ನೀಡಿರುವ ಹೋಂಡಾ ಕಂಪನಿಯು ವಾಹನ ಮಾರಾಟ ಮತ್ತು ಗ್ರಾಹಕರಿಗೆ ಸೇವೆಗಳಿಗೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದೆ.

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಅಗತ್ಯವಿದ್ದಲ್ಲಿ ಗ್ರಾಹಕರ ಮನೆ ಬಾಗಿಲುಗಳಿಗೆ ಸೇವೆ ಒದಗಿಸುತ್ತಿರುವ ಹೋಂಡಾ ಕಂಪನಿಯು ಸುರಕ್ಷಾ ಮಾರ್ಗಸೂಚಿ ಪಾಲಿಸುತ್ತಿದ್ದು, ಹೊಸ ವಾಹನ ಖರೀದಿ ಪ್ರಕ್ರಿಯೆಯನ್ನು ಯಾವುದೇ ರೀತಿಯಲ್ಲಿ ಸ್ಥಗಿತಗೊಳಿಸಿಲ್ಲ. ವಾಹನ ಖರೀದಿ ಪ್ರಕ್ರಿಯೆ ಎಂದಿನಂತೆ ಮುಂದುವರೆದಿದ್ದು, ಪರಿಸ್ಥಿತಿಗೆ ಅನುಗುಣವಾಗಿ ವಾಹನ ವಿತರಣೆ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿದೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಕೋವಿಡ್ ಸಂಕಷ್ಟ: ಕೇಂದ್ರಕ್ಕೆ ರೂ.6.50 ಕೋಟಿ ದೇಣಿಗೆ ನೀಡಿದ ಹೋಂಡಾ ಫೌಂಡೇಶನ್

ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿದ್ದರೂ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನಕ್ಕೆ ಅಡಚಣೆ ಎದುರಾಗುತ್ತಿದ್ದು, ವಾಹನಗಳ ಮಾರಾಟವನ್ನು ಸರಳ ಮತ್ತು ಸುರಕ್ಷಿತವಾಗಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿವೆ.

Most Read Articles

Kannada
Read more on ಹೋಂಡಾ honda
English summary
Honda India Foundation pledges Rs 6.5 crore to fight coronavirus. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X