2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ Honda ತನ್ನ 2021ರ Amaze ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ನವೀಕರಿಸಿದ ಹೊಸ Honda Amaze ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಇದೀಗ Honda ಕಂಪನಿಯು ಹೊಸ Amaze ಕಾರಿಗಾಗಿ ಅಕ್ಸೆಸರೀಸ್ ಗಳನ್ನು ಪರಿಚಯಿಸಿದೆ. ಈ Honda Amaze ಕಾರಿನ ಹೊರಭಾಗವನ್ನು ಹೊಳೆಯುವ ಕ್ರೋಮ್ ಹೈಲೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳನ್ನು ORVM ಗಳು, ಟೈಲ್ ಲ್ಯಾಂಪ್‌ಗಳು, ಟ್ರಂಕ್, ಡೋರ್ ವಿಸರ್, ವಿಂಡೋ ಲೈನ್ ಮತ್ತು ಡೋರುಗಳ ಕೆಳಗಿನ ಭಾಗದಲ್ಲಿ ಹೊಂದಬಹುದು.. ಸೊಗಸಾದ ಟ್ರಂಕ್ ಸ್ಪಾಯ್ಲರ್, ಬಾಡಿ ಸೈಡ್ ಮೋಲ್ಡಿಂಗ್, ಡೋರ್ ಹ್ಯಾಂಡಲ್ ಪ್ರೊಟೆಕ್ಟರ್, ಮಡ್ ಫ್ಲಾಪ್ಸ್ ಮತ್ತು ಬಂಪರ್ ಪ್ರೊಟೆಕ್ಟರ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಇನ್ನು ಈ ಹೊಸ Amaze ಕಾರಿನ ಒಳಬಾಗಕ್ಕೆ ಆರು ಸೀಟ್ ಕವರ್‌ಗಳು ಮತ್ತು ಮೂರು ಮ್ಯಾಟ್‌ಗಳನ್ನು ಆಯ್ಕೆ ಮಾಡಬಹುದು. ಸ್ಲೈಡಿಂಗ್ ಆರ್ಮ್‌ರೆಸ್ಟ್‌ಗಳು (ಕಪ್ಪು ಮತ್ತು ಬೀಜ್ ಬಣ್ಣಗಳು), ಫುಟ್‌ವೆಲ್ ಲೈಟಿಂಗ್, ಪ್ರಕಾಶಿತ ಸ್ಕಫ್ ಪ್ಲೇಟ್‌ಗಳು ಮತ್ತು ಕ್ಯಾಮೆರಾ ಮತ್ತು ಡಿಸ್‌ಪ್ಲೇಯೊಂದಿಗೆ ಐಆರ್‌ವಿಎಂ ಕಿಟ್ ಕೂಡ ಕೊಡುಗೆಯಲ್ಲಿವೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಇನ್ನು Honda ಬೇಸಿಕ್ ಕಿಟ್, ಕ್ರೋಮ್ ಪ್ಯಾಕೇಜ್ ಮತ್ತು ಯುಟಿಲಿಟಿ ಪ್ಯಾಕೇಜ್ ಎಂಬ ಮೂರು ಕ್ಯುರೇಟೆಡ್ ಆಕ್ಸೆಸರಿ ಪ್ಯಾಕೇಜ್‌ಗಳನ್ನು ಸಹ ನೀಡುತ್ತದೆ. .ಅಧಿಕೃತ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಅಕ್ಸೆಸರೀಸ್ ಗಳನು ಖರೀದಿಸಬಹುದು ಮತ್ತು ಫಿಟ್‌ಮೆಂಟ್‌ಗಳನ್ನು ಮಾಡಬಹುದು ಎಂಬುದನ್ನು ಗಮನಿಸಬೇಕು.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಈ ಹೊಸ Honda Amaze ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ,21,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ನ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಹೊಸ ಮುಂಭಾಗದ ಬಂಪರ್, ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ. ಇದರೊಂದಿಗೆ ಮರುವಿನ್ಯಾಸಗೊಳಿಸಿದ ಕ್ರೋಮ್ ಫ್ರಂಟ್ ಗ್ರಿಲ್, ಕ್ರೋಮ್ ಡೋರ್ ಹ್ಯಾಂಡಲ್‌ಗಳು, 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಫೇಸ್‌ಲಿಫ್ಟೆಡ್ ಕಾರಿನ ಒಟ್ಟಾರೆ ಸಿಲೂಯೆಟ್ ಬದಲಾಗದೆ ಉಳಿದಿದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಇನ್ನು ಈ ಹೊಸ Amaze ಕಾರಿನ ಒಳಭಾಗವು ಹೊಸ ಸೀಟ್ ಅಪ್‌ಹೋಲ್ಸ್ಟರಿ ಸೇರಿದಂತೆ ಹಲವು ಅಪ್‌ಗ್ರೇಡ್‌ಗಳನ್ನು ಮಾಡಲಾಗಿದೆ. ಒಳಭಾಗದಲ್ಲಿ ಶುದ್ಧ ಗಾಳಿಗಾಗಿ ಅಪ್‌ಗ್ರೇಡ್ ಕ್ಯಾಬಿನ್ ಫಿಲ್ಟರ್ ಅನ್ನು ಸೇರಿಸಿದೆ. ಇತರ ಅಪ್‌ಗ್ರೇಡ್‌ಗಳು ಸೇರಿವೆ. ಡ್ಯಾಶ್‌ಬೋರ್ಡ್‌ನಲ್ಲಿ ಸ್ಯಾಟಿನ್ ಸಿಲ್ವರ್ ಅಸ್ಸೆಂಟ್, ಕ್ಲೈಮೇಂಟ್ ಕಂಟ್ರೋಲ್, ಹೋಂಡಾ ಸ್ಮಾರ್ಟ್ ಕೀ ಮತ್ತು ಪುಶ್-ಬಟನ್ ಸ್ಟಾರ್ಟ್ ಅನ್ನು ಹೊಂದಿದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಇದರೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್‌ಗಳು ಸೇರಿದಂತೆ ಇತರ ಫೀಚರ್ಸ್ ಗಳನ್ನು ಕೂಡ ಒಳಗೊಂಡಿದೆ, ಇನ್ನು ಈ ಹೊಸ Amaze ಕಾರು ಮೆಟಿರಾಯ್ಡ್ ಗ್ರೇ, ಪ್ಲಾಟಿನಂ ಪರ್ಲ್ ವೈಟ್, ಲೂನಾರ್ ಸಿಲ್ವರ್, ಗೋಲ್ಡನ್ ಬ್ರೌನ್ ಮತ್ತು ರೇಡಿಯಂಟ್ ರೆಡ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ,

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

Honda Amaze ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್ ಗಳನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಇಬಿಡಿ, ISOFIX ಚೈಲ್ಡ್ ಸೀಟ್ ಆಂಕರ್‌ಗಳೊಂದಿಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸೀಟ್-ಬೆಲ್ಟ್ ರಿಮೈಂಡರ್ ಗಳನ್ನು ಹೊಂದಿದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಈ ಹೊಸ Honda Amaze ಫೇಸ್‌ಲಿಫ್ಟ್‌ ಕಾರಿನ ಆಯಾಮದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ, ಇದು ಒಟ್ಟಾರೆ 3,995 ಮಿಮೀ ಉದ್ದ, 1,695 ಮಿಮೀ ಅಗಲ ಮತ್ತು 1,498 ಮಿಮೀ ಎತ್ತರವನ್ನು ಉಳಿಸಿಕೊಂಡಿದೆ. ಇನ್ನು ಈ ಕಾರು 2,470 ಮಿಮೀ ವ್ಹೀಲ್‌ಬೇಸ್ ಉದ್ದವನ್ನು ಹೊಂದಿದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಈ ಹೋಂಡಾ ಅಮೇಜ್ ಫೇಸ್‌ಲಿಫ್ಟ್‌ ಕಾಂಪ್ಯಾಕ್ಟ್ ಸೆಡಾನ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.2ಎಲ್ ಪೆಟ್ರೋಲ್ ಮತ್ತು 1.5ಎಲ್ ಡೀಸೆಲ್ ಎಂಬ ಎಂಜಿನ್ ಗಳಾಗಿವೆ. ಇನ್ನು ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಇದರೊಂದಿಗೆ ಡೀಸೆಲ್ ಆಟೋಮ್ಯಾಟಿಕ್ ರೂಪಾಂರರವು 78 ಬಿಹೆಚ್‍ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

2021ರ Amaze ಕಾರಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ Honda

ಹೋಂಡಾ ಕಂಪನಿಯು 2021ರ ಅಮೇಜ್ ಕಾರನ್ನು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಖರೀದಿದಾರರಿಗೆ ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. .

Most Read Articles

Kannada
Read more on ಹೋಂಡಾ honda
English summary
Honda india introduced new accessories package for 2021 amaze sedan details
Story first published: Thursday, August 26, 2021, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X