ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ ಅಧಿಕೃತವಾಗಿ ಇಂಡೋನೇಷ್ಯಾದಲ್ಲಿ ತನ್ನ ಬಿಆರ್-ವಿ 7-ಸೀಟರ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೋಂಡಾ ಬಿಆರ್-ವಿ( Honda BR-V) 7-ಸೀಟರ್ ಎಸ್‍ಯುವಿ ಸಂಪೂರ್ಣವಾಗಿ ಹೊಸ ವಿನ್ಯಾಸ ಮತ್ತು ಹೊಸ ಇಂಟಿರಿಯರ್ ಜೊತೆಗೆ ವಿವಿಧ ಸುಧಾರಿತ ತಂತ್ರಜ್ಞಾನಗಳೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಎಸ್‍ಯುವಿ ಗ್ರಾಹಕರ ಅಗತ್ಯತೆಗಳು ಮತ್ತು ಚಾಲನಾ ಹವ್ಯಾಸಗಳನ್ನು ದೀರ್ಘ ಮತ್ತು ಆಳವಾದ ಅಧ್ಯಯನವನ್ನು ನಡೆಸಿದೆ ಎಂದು ಹೋಂಡಾ ಹೇಳಿಕೊಂಡಿದೆ. ವಾಸ್ತವವಾಗಿ, ಹೋಂಡಾ ಎನ್7ಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಅಭಿವೃದ್ಧಿಪಡಿಸಿತು, ಇದನ್ನು ಇಂಡೋನೇಷ್ಯಾದ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸಲಾಯಿತು. ಎರಡನೇ ತಲೆಮಾರಿನ ಹೋಂಡಾ ಬಿಆರ್-ವಿ ಎಸ್‍ಯುವಿಯ ಸ್ಟೈಲಿಂಗ್ ಮತ್ತು ಗಡಸುತನ, ಕಂಫರ್ಟ್ ಮತ್ತು ಕಾರ್ಯಕ್ಷಮತೆ ಮತ್ತು ಡ್ರೈವಿಂಗ್ ಕಾರ್ಯಕ್ಷಮತೆ ಮತ್ತು ಹೋಂಡಾ ಕಾರುಗಳ ದಕ್ಷತೆಯನ್ನು ಸಂಯೋಜಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಈ ಹೊಸ ಹೋಂಡಾ ಬಿಆರ್-ವಿ ಎಸ್‍ಯುವಿಯು ಹೋಂಡಾ ಸೆನ್ಸಿಂಗ್, ಹೋಂಡಾ ಲೇನ್ ವಾಚ್, ರಿಮೋಟ್ ಇಂಜಿನ್ ಸ್ಟಾರ್ಟ್, ವಾಕ್-ಅವೇ ಆಟೋ ಲಾಕ್ ಮತ್ತು ಸ್ಮಾರ್ಟ್ ಎಂಟ್ರಿ ಸಿಸ್ಟಂನಂತಹ ಹಲವಾರು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಇದರ ಸ್ಟೈಲಿಂಗ್ ವಿಷಯದಲ್ಲಿ, ಹೊಸ ಬಿಆರ್-ವಿ ಹೊಸ ಶೈಲಿಯ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಎಲ್ಇಡಿ ಡಿಆರ್ ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್ಸ್), ಮತ್ತು ಹೊಸ ಶೈಲಿಯ ಟೈಲ್ ಲೈಟ್ ಗಳನ್ನು ಎಲ್ ಇಡಿ ಲೈಟ್ ಬಾರ್ಡ್ ಗಳನ್ನು ಪಡೆಯುತ್ತದೆ. ಈ ಎಸ್‍ಯುವಿಯು 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಈ ಎಸ್‍ಯುವಿ ಆರಾಮದಾಯಕ ಅನುಭವಕ್ಕಾಗಿ ಮೊದಲ ಸಾಲಿಗೆ ಕನ್ಸೋಲ್ ಆರ್ಮ್‌ರೆಸ್ಟ್ ಮತ್ತು 2ನೇ ಸಾಲಿನ ಸೀಟ್'ಗೂ ಆರ್ಮ್‌ರೆಸ್ಟ್ ನೀಡುತ್ತದೆ. ಎಲ್ಲಾ ಮೂರು ಸಾಲುಗಳು 12V ಪವರ್ ಸಾಕೆಟ್ಗಳೊಂದಿಗೆ ಬರುತ್ತವೆ. ಇದು ಹೋಂಡಾ ಸೆನ್ಸಿಂಗ್ ಫಂಕ್ಷನ್, ಸರಾಸರಿ ಇಂಧನ ಬಳಕೆ, ಮೈಲೇಜ್, ಉಳಿದ ಇಂಧನ ಮುಂತಾದ ವಿವಿಧ ಮಾಹಿತಿಯನ್ನು ಪ್ರದರ್ಶಿಸಲು ಡ್ಯಾಶ್‌ಬೋರ್ಡ್‌ನಲ್ಲಿ 4.2-ಇಂಚಿನ TFT ಡಿಸ್‌ಪ್ಲೇಯನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಇದು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸ್ಮಾರ್ಟ್ ಪೋನ್ ಕನೆಕ್ಟಿವಿಟಿ ಮತ್ತು ಹ್ಯಾಂಡ್ಸ್-ಫ್ರೀ ಟೆಲಿಫೋನಿ ಒಳಗೊಂಡಿದೆ. ಈ ಹೊಸ ಎಸ್‍ಯುವಿಯು ಪ್ರೀಮಿಯಂ ಓಪಲ್ ವೈಟ್ ಪರ್ಲ್, ಇದು ಹೊಸ ಬಣ್ಣ, ಟಫೆಟಾ ವೈಟ್, ಲೂನಾರ್ ಸಿಲ್ವರ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್ ಮತ್ತು ಕ್ರಿಸ್ಟಲ್ ಬ್ಲಾಕ್ ಪರ್ಲ್ ಎಂಬ ಐದು ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಈ ಹೊಸ ಹೋಂಡಾ ಬಿಆರ್-ವಿ ಎಸ್‍ಯುವಿಯಲ್ಲಿ 1.5-ಲೀಟರ್ DOHC i-VTEC ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,600 ಆರ್‌ಪಿಎಂನಲ್ಲಿ 121 ಬಿಹೆಚ್‍ಪಿ ಪವರ್ ಮತ್ತು 4,300 ಆರ್‌ಪಿಎಂನಲ್ಲಿ 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಈ ಎಂಜಿನ್ ಯುರೋ 4 ಹೊರಸೂಸುವಿಕೆ ಮಾನದಂಡಗಳಿಗೆ ಹೊಂದಿಕೊಳ್ಳುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಹೊಸ ಹೋಂಡಾ ಬಿಆರ್-ವಿ ಎಸ್‍ಯುವಿಯು ರಿಮೋಟ್ ಇಂಜಿನ್ ಸ್ಟಾರ್ಟ್ ಫಂಕ್ಷನ್ ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಇದು ವಾಹನವನ್ನು ಪ್ರವೇಶಿಸುವ ಮೊದಲು ವಾಹನದ ಇಂಜಿನ್ ಮತ್ತು ಹವಾನಿಯಂತ್ರಣವನ್ನು ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಎಲ್‌ಇಡಿ ಟರ್ನ್ ಸಿಗ್ನಲ್‌ನೊಂದಿಗೆ ಆಟೋ ಫೋಲ್ಡಬಲ್ ಸೈಡ್ ಡೋರ್ ಮಿರರ್, ಬ್ಲೈಂಡ್ ಸ್ಪಾಟ್ ಪ್ರದೇಶದ ವಿಶಾಲ ನೋಟಕ್ಕಾಗಿ ಹೋಂಡಾ ಲೇನ್ ವಾಚ್, ಸ್ಮಾರ್ಟ್ ಎಂಟ್ರಿ ಸಿಸ್ಟಂ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಇನ್ನು ಈ ಹೊಸ ಎಸ್‍ಯುವಿಯು ಹೋಂಡಾ ಸೆನ್ಸಿಂಗ್ ತಂತ್ರಜ್ಞಾನವನ್ನು ಹೊಂದಿದೆ, ಇದು ಮೂಲತಃ ADAS, ಲೀಡ್ ಕಾರ್ ಡಿಪಾರ್ಚರ್ ನೋಟಿಫಿಕೇಶನ್ ಸಿಸ್ಟಂ (LCDN), ಕಾಲಿಷನ್ ಮಿಟಿಗೇಷನ್ ಬ್ರೇಕ್ ಸಿಸ್ಟಂCMBS), ಲೇನ್ ಕೀಪಿಂಗ್ ಅಸಿಸ್ಟ್ ಸಿ(LKAS), ರೋಡ್ ಡಿಪರ್ಚರ್ ಮಿಟಿಗೇಷನ್(RDM), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ACC), ಮತ್ತು ಆಟೋ-ಹೈ ಬೀಮ್ ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಹೊಸ ಹೋಂಡಾ ಬಿಆರ್-ವಿ ಎಸ್‍ಯುವಿಯ ಎಸ್, ಇ, ಪ್ರೆಸ್ಟೀಜ್ ಎಂಬ ರೂಪಾಂತಗಳಲ್ಲಿ ಲಭ್ಯವಿದೆ. ಈ ಎಸ್‌ಯುವಿಯ ರೂಪಾಂತರಗಳ ಅನುಗುಣವಾಗಿ ಫೀಚರ್ಸ್ ಗಳ ಮಾಹಿತಿಯನ್ನು ನೋಡೋಣ. ಮೊದಲಿಗೆ ಇದರ ಬೇಸ್ ಸ್ಪೆಕ್ SM/T ರೂಪಾಂತರದಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆಎ ಎಲ್ಇಡಿ ಹೆಡ್ ಲ್ಯಾಂಪ್ಸ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯೊಂದಿಗೆ 7 ಇಂಚಿನ ಟಚ್ಸ್ಕ್ರೀನ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಸೈಡ್ ಏರ್ ಬ್ಯಾಗ್ ಮತ್ತು ಪಾರ್ಕಿಂಗ್ ಸೆನ್ಸರ್ ಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಇನ್ನು ಬಿಆರ್-ವಿ ಎಸ್‍ಯುವಿಯ E CVT & M/T ರೂಪಾಂತರದಲ್ಲಿ ಎಲ್ಇಡಿ ಫಾಗ್‌ಲ್ಯಾಂಪ್‌ಗಳು, ಸ್ಮಾರ್ಟ್ ಎಂಟ್ರಿ ಸಿಸ್ಟಮ್, ವಾಕ್-ಅವೇ ಆಟೋ ಲಾಕ್, TFT ಮೀಟರ್, 16 ಇಂಚಿನ ಅಲಾಯ್ ವೀಲ್‌ಗಳು, ಹಿಂಭಾಗದ AC ಡಬಲ್ ಬ್ಲೋವರ್ ಮತ್ತು ಸಿವಿಟಿಯೊಂದಿಗೆ ರಿಮೋಟ್ ಎಂಜಿನ್ ಆರಂಭದಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ Honda BR-V 7-ಸೀಟರ್ ಎಸ್‍ಯುವಿ

ಬಿಆರ್-ವಿ ಪ್ರೆಸ್ಟೀಜ್ ಸಿವಿಟಿ-ಈ ರೂಪಾಂತರವು ಎಲ್‌ಇಡಿ ಟರ್ನಿಂಗ್ ಸಿಗ್ನಲ್, 17 ಇಂಚಿನ ಅಲಾಯ್ ವೀಲ್, ಆರ್ಮ್‌ರೆಸ್ಟ್‌ಗಳಲ್ಲಿ ಲೆದರ್ ಲೇಪನ, ಡೋರಿನ ಬದಿ ಮತ್ತು ಡ್ಯಾಸ್‌ಬೋರ್ಡ್ ಪ್ಯಾನಲ್‌ಗಳು ಮತ್ತು 2 ನೇ ಸಾಲಿನ ಆರ್ಮ್‌ರೆಸ್ಟ್ ಕನ್ಸೋಲ್‌ನೊಂದಿಗೆ ಆಟೋ ಫೋಲ್ಡಬಲ್ ಸೈಡ್ ಡೋರ್ ಮಿರರ್ ಅನ್ನು ಪಡೆಯುತ್ತದೆ.

Most Read Articles

Kannada
Read more on ಹೋಂಡಾ honda
English summary
Honda officially introduced much awaited br v 7 seater suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X