ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿವಿಕ್ ಹ್ಯಾಚ್‌ಬ್ಯಾಕ್‌ ಕಾರನ್ನು ಕೊನೆಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಅನಾವರಣಗೊಳಿಸಿದೆ. ಈ 2022ರ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್ ಹಲವು ಹೊಸ ನವೀಕರಣಗಳೊಂದಿಗೆ ಅನಾವರಣವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಸಿವಿಕ್ ಹ್ಯಾಚ್‌ಬ್ಯಾಕ್ ಕಾರು ಯುರೋಪಿಯನ್ ಸ್ಪೋರ್ಟ್‌ಬ್ಯಾಕ್‌ಗಳ ಕೂಪೆ ತರಹದ ಪ್ರೊಫೈಲ್‌ನಿಂದ ಸ್ಫೂರ್ತಿ ಪಡೆದ 2022ರ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್ ಸಿವಿಕ್ ಸೆಡಾನ್ ಅನ್ನು ಆಧರಿಸಿದೆ. ಈ ಹೊಸ ಹ್ಯಾಚ್‌ಬ್ಯಾಕ್ ಬಿ-ಪಿಲ್ಲರ್ ನಲ್ಲಿ ಸಿವಿಕ್ ಸೆಡಾನ್ ಗಿಂತ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಐದು ಡೋರುಗಳನ್ನು ಒಳಗೊಂಡ ಈ ಹ್ಯಾಚ್‌ಬ್ಯಾಕ್ ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಇದು ಸಂಯೋಜಿತ ಸ್ಪಾಯ್ಲರ್, ತೆಳುವಾದ ಸ್ಟ್ರಿಪ್ ಕನೆಕ್ಟ್ ಆಗಿರುವ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಡ್ಯುಯಲ್ ಕ್ರೋಮ್ಡ್ ಎಕ್ಸಾಸ್ಟ್ ಔಟ್ ಲೆಟ್ಟ್‌ಲೆಟ್‌ಗಳು, ಬ್ಲ್ಯಾಕ್ ಫಾಕ್ಸ್ ಡಿಫ್ಯೂಸರ್, ರ್ಯಾಕ್ಡ್ ರಿಯರ್ ವಿಂಡ್‌ಶೀಲ್ಡ್ , ಮತ್ತು ಶಾರ್ಕ್ ಫಿನ್ ಆಂಟೆನಾ. ಮತ್ತು ಕ್ರೋಮ್ಡ್ ವಿಂಡೋ ಲೈನ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಬ್ಲ್ಯಾಕ್ ಗಿಲ್ ನೊಂದಿಗೆ ವಿಶಾಲವಾದ ಬಾಡಿ ಪ್ರೊಫೈಲ್ ಅನ್ನು ಹೊಂದಿದೆ. ಇನ್ನು ಈ ಕಾರು ನಯವಾದ ಹೆಡ್‌ಲ್ಯಾಂಪ್‌ಗಳು ಮತ್ತು ಇಂಟಿಗ್ರೇಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಸಿ-ಆಕಾರದ ಫಾಗ್ ಲ್ಯಾಂಪ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಈ 2022ರ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್ ಒಳಭಾಗದಲ್ಲಿ ಸಿವಿಕ್ ಸೆಡಾನ್‌ನೊಂದಿಗೆ ಹಂಚಿಕೊಳ್ಳುತ್ತದೆ. ಒಳಭಾಗದಲ್ಲಿ ಮಲ್ಟಿಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಹ್ಯಾಂಡ್‌ಬ್ರೇಕ್ ಅನ್ನು ಈಗ ಪ್ಲೋಟಿಂಗ್ ಡಿಸ್ ಪ್ಲೇ ಮೂಲ ಕಂಟ್ರೋಲ್ ಮಾಡಬಹುದು. ಕ್ಯಾಬಿನ್ ನಲ್ಲಿ ಎಸಿ ವೆಂಟ್ಸ್ ಗಳು, ಲೇಯರ್ಡ್ ಡ್ಯಾಶ್‌ಬೋರ್ಡ್, 60:40 ಸ್ಪ್ಲಿಟ್-ಫೋಲ್ಡಿಂಗ್ ಹಿಂಭಾಗದ ಸೀಟುಗಳು, ಹಿಂಭಾಗದಲ್ಲಿ 36 ಎಂಎಂ ಹೆಚ್ಚುವರಿ ಲೆಗ್ ರೂಂ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಹೊಸ ಸಿವಿಕ್ ಹ್ಯಾಚ್‌ಬ್ಯಾಕ್ ಹೊಸ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಈ ಇನ್ಫೋಟೈನ್ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಇನ್ನು ಸ್ಪೋರ್ಟ್ ಟೂರಿಂಗ್ ರೂಪಾಂತರವು ಹೊಸ 9 ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ, ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುತ್ತದೆ. ಈ ಹ್ಯಾಚ್‌ಬ್ಯಾಕ್ 12-ಸ್ಪೀಕರ್ ಪ್ರೀಮಿಯಂ ಬೋಸ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಕಾರಿನಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 158 ಬಿಹೆಚ್‍ಪಿ ಪವರ್ ಮತ್ತು 187 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಇದರೊಂದಿಗೆ ಈ ಕಾರಿನಲ್ಲಿ ಟರ್ಬೋಚಾರ್ಜ್ಡ್ 1.5-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 180 ಬಿಹೆಚ್‍ಪಿ ಪವರ್ ಮತ್ತು 240 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌

ಈ ಎರಡು ಎಂಜಿನ್ ಗಳನ್ನು 6-ಸ್ಫೀಡ್ ಮ್ಯಾನುವಲ್ ಮತ್ತಿ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಈ ಹೊಸ ಹೋಂಡಾ ಸಿವಿಕ್ ಹ್ಯಾಚ್ ಈ ಸೆಪ್ಟೆಂಬರ್‌ನಲ್ಲಿ ಯುಎಸ್‌ನಲ್ಲಿ ಮಾರಾಟವಾಗಲಿದೆ. ಈ ಕಾರನ್ನು ಕಂಪನಿಯ ಇಂಡಿಯಾನಾದಲ್ಲಿ ಉತ್ಪಾದನೆಯಾಗಲಿದೆ.

Most Read Articles

Kannada
Read more on ಹೋಂಡಾ honda
English summary
2022 Honda Civic Hatchback Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X