ಬಹುನಿರೀಕ್ಷಿತ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿವಿಕ್ ಹ್ಯಾಚ್‌ಬ್ಯಾಕ್‌ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಕಾರು ಇದೇ ತಿಂಗಳ 24 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣವಾಗಲಿದೆ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಸಿವಿಕ್ ಸೆಡಾನ್ ಆಧರಿಸಿ ಹೊಸ ಸಿವಿಕ್ ಹ್ಯಾಚ್‌ಬ್ಯಾಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೋಂಡಾ ಹೇಳಿದೆ. 11ನೇ ತಲೆಮಾರಿನ ಸಿವಿಕ್ ಹ್ಯಾಚ್‌ಬ್ಯಾಕ್ 5-ಡೋರಿನ ಮಾದರಿಯಾಗಿದೆ. ಈ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ನೀಡುತ್ತದೆ. ಹೋಂಡಾ ಸಿವಿಕ್ ಸೆಡಾನ್‌ನಂತಹ ವಿನ್ಯಾಸವನ್ನು ಸಿವಿಕ್ ಹ್ಯಾಚ್‌ಬ್ಯಾಕ್ ಹೊಂದಿದೆ. ಹೊಸ ಸಿವಿಕ್ ಹ್ಯಾಚ್‌ಬ್ಯಾಕ್‌ನ ಮುಂಭಾಗವು ಸೆಡಾನ್ ಆವೃತ್ತಿಗೆ ಹೋಲುತ್ತದೆ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಕಾರಿನಲ್ಲಿ ನವೀಕರಿಸಿದ ರೂಫ್‌ಲೈನ್ ಮತ್ತು ನವೀಕರಿಸಿದ ರೇರ್ ಫಾಸಿಕವನ್ನು ಸೇರಿದಂತೆ ಹಿಂಭಾಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ಸಹ ನಿರೀಕ್ಷಿಸುತ್ತೇವೆ. ಆದರೆ ಹಿಂಭಾಗದಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ನಿಖರವಾಗಿ ಸ್ಪಷ್ಟವಾಗಿಲ್ಲ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಟೀಸರ್ ಚಿತ್ರದಲ್ಲಿ ನೋಡಿದಂತೆ ಸಿವಿಕ್ ಹ್ಯಾಚ್‌ಬ್ಯಾಕ್‌ ಟೈಲ್‌ಲೈಟ್‌ಗಳು ಸೆಡಾನ್ ಆವೃತ್ತಿಯಿಂದ ಭಿನ್ನವಾಗಿವೆ. ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಸಿವಿಕ್ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್‌ ಮಾದರಿಗಳಲ್ಲಿ ಒಂದೇ ಮಾದರಿಯ ಫೀಚರ್ಸ್ ಗಳನ್ನು ಹೊಂದಿರಲಿವೆ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಕಾರಿನಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 158 ಬಿಹೆಚ್‍ಪಿ ಪವರ್ ಮತ್ತು 187 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಇದರೊಂದಿಗೆ ಈ ಕಾರಿನಲ್ಲಿ ಟರ್ಬೋಚಾರ್ಜ್ಡ್ 1.5-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 180 ಬಿಹೆಚ್‍ಪಿ ಪವರ್ ಮತ್ತು 240 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಹೋಂಡಾ ಹೊಸ ಸಿವಿಕ್ ಹ್ಯಾಚ್‌ಬ್ಯಾಕ್ ಅನ್ನು ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡುತ್ತಾರೆ. ಕಲವು ವರದಿಗಳ ಪ್ರಕಾರ ಇನ್ನು ಎರಡು ಎಂಜಿನ್ ಗಳೊಂದಿಗೆ ಸಿವಿಟಿ ಗೇರ್ ಬಾಕ್ಸ್ ಅನ್ನು ಜೋಡಿಸುವ ಸಾಧ್ಯತೆಯಿದೆ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಸಿವಿಕ್ ಜಪಾನಿನ ಕಾರು ತಯಾರಕರಿಂದ ಹಳೆಯ ಮತ್ತು ಜನಪ್ರಿಯ ಬ್ರ್ಯಾಂಡ್ ಮಾದರಿಗಳಲ್ಲಿ ಒಂದಾಗಿದೆ. ಹೋಂಡಾ ಸಿವಿಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

ಬಹುನಿರೀಕ್ಷಿತ ಹೊಸ ಹೋಂಡಾ ಸಿವಿಕ್ ಹ್ಯಾಚ್‌ಬ್ಯಾಕ್‌ ಟೀಸರ್ ಬಿಡುಗಡೆ

ಹೋಂಡಾ ಸಿವಿಕ್ ಕಾರು 1972 ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತ್ತು. ಅಂದಿನಿಂದ ಇಲ್ಲಿಯವರೆಗೆ ಹೋಂಡಾ ಸಿವಿಕ್ ಮಾದರಿಯ 27 ಮಿಲಿಯನ್ ಯೂನಿಟ್ ಗಳು ಮಾರಾಟವಾಗಿವೆ. ಇದೀಗ ಹೋಂಡಾ ಈ ಜನಪ್ರಿಯ ಕಾರನ್ನು ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ.

Most Read Articles

Kannada
Read more on ಹೋಂಡಾ honda
English summary
2022 Honda Civic Hatchback Teased. Read In Kannada.
Story first published: Thursday, June 10, 2021, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X