ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ನ್ಯೂ ಜನರೇಷನ್ ಸಿವಿಕ್ ಸೆಡಾನ್ ಕಾರನ್ನು ಇತ್ತೀಚೆಗೆ ಪರಿಚಯಿಸಿತು. ಇದೀಗ ಹೋಂಡಾ ಕಂಪನಿಯು ಹೊಸ ಹೋಂಡಾ ಸಿವಿಕ್ ಎಸ್ಐ ಸೆಡಾನ್ ಪರ್ಫಾಮೆನ್ಸ್ ಕಾರನ್ನು ಪರಿಚಯಿಸಿದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಹೊಸ ಹೋಂಡಾ ಸಿವಿಕ್ ಎಸ್ಐ ಸ್ಪೋರ್ಟ್‌ ಕಾಂಪ್ಯಾಕ್ಟ್ ಸೆಡಾನ್‌ಗಳಿಗೆ ಹೊಸ ಬೆಂಚ್‌ಮಾರ್ಕ್ ಅನ್ನು ಹೊಂದಿದ್ದು, ಸುಧಾರಿತ ಡೈನಾಮಿಕ್ ಕಾರ್ಯಕ್ಷಮತೆ ಮತ್ತು ನವೀಕರಿಸಿದ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಈಗ ಸಿವಿಕ್ ಟೈಪ್ ಆರ್ ನಿಂದ ರಿವ್-ಮ್ಯಾಚಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ. 11ನೇ ತಲೆಮಾರಿನ ಸಿವಿಕ್ ಸೆಡಾನ್ ಅನ್ನು ಆಧರಿಸಿ, 2022ರ ಹೋಂಡಾ ಸಿವಿಕ್ ಎಸ್ಐ ಈ ವರ್ಷಾಂತ್ಯದಲ್ಲಿ ಅಮೇರಿಕಾದಲ್ಲಿ ಮಾರಾಟಕ್ಕೆ ಬರಲಿದೆ. ಸೆಡಾನ್ ಆಕರ್ಷಕ ಮತ್ತು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

2022ರ ಹೋಂಡಾ ಸಿವಿಕ್ ಎಸ್ಐ ಕಾರಿನ ಮುಂಭಾಗದ ಸ್ಪಾಯ್ಲರ್ ಮತ್ತು ರಿಷ್ಕೃತ ಹಿಂಭಾಗದ ಬಂಪರ್‌ನೊಂದಿಗೆ ಬರುತ್ತದೆ ಮತ್ತು ಅದು ಎರಡು ದೊಡ್ಡ ಅಂಡಾಕಾರದ ಎಕ್ಸಾಸ್ಟ್ ಟಿಪ್ಸ್ ಅನ್ನು ಒಳಗೊಂಡಿದೆ. ವಾಹನದ ಕೆಳಗೆ ಅಡಗಿರುವ ಮುಂಭಾಗದ ಸ್ಪಾಯ್ಲರ್ ಟ್ರಕ್ ಲಿಡ್ ಮೇಲೆ ಅಳವಡಿಸಲಾಗಿರುವ ಗೋಷ್ ಬ್ಲ್ಯಾಕ್ ಹಿಂಭಾಗದ ಸ್ಪಾಯ್ಲರ್ ಹೆಚ್ಚಿನ ವೇಗದ ಸ್ಥಿರತೆಯನ್ನು ಸುಧಾರಿಸಲು ಕೆಳಗಿಳಿಯುತ್ತದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಹೊಸ ಸಿವಿಕ್ ಎಸ್ಐ ಹೊರಗಿನ ಮೀರರ್ಸ್ ಮತ್ತು ವಿಂಡೋ ಸುತ್ತಲೂ ಬ್ಲ್ಯಾಕ್ ಅಂಶವನ್ನು ನೀಡಲಾಗಿದೆ. ಇದು ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ವಾಹನವು ಸಿ-ನಿರ್ದಿಷ್ಟ ಮ್ಯಾಟ್ ಬ್ಲ್ಯಾಕ್ 18-ಇಂಚಿನ 10-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಇದು ಹೊಸ ಸಿ-ಎಕ್ಸ್‌ಕ್ಲೂಸಿವ್ ಬ್ಲೇಜಿಂಗ್ ಆರೆಂಜ್ ಪರ್ಲ್ ಬಣ್ಣದಲ್ಲಿದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

2022ರ ಹೋಂಡಾ ಸಿವಿಕ್ ಎಸ್ಐ ಕಾರಿನ ಕ್ಯಾಬಿನ್ ಒಳಗೆ ಬಿಲ್ಟ್-ಇನ್ ಹೆಡ್ ರೆಸ್ಟೆಯನ್ಸ್ ಮತ್ತು ಉತ್ತಮ ಶೋಲ್ಡರ್, ಥೈ ಸಂಪೋರ್ಟ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಸ್ಫೋರ್ಟ್ಸ್ ಸೀಟುಗಳನ್ನು ಒಳಗೊಂಡಿವೆ. ಕೆಳಭಾಗದ ಕುಶನ್ ಅನ್ನು ಮುಂಭಾಗದಲ್ಲಿ 0.5-ಇಂಚುಗಳಷ್ಟು ಹೆಚ್ಚಿಸಲಾಗಿದೆ. ಲಾಂಗ್ ಡ್ರೈವ್‌ಗಳಲ್ಲಿ ಆಯಾಸವನ್ನು ಕಡಿಮೆ ಮಾಡಲು ಇನ್ನೂ ಉತ್ತಮವಾದ ಥೈ ಸಂಪೂರ್ಟ್ ಅನ್ನು ಒದಗಿಸುತ್ತದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಇದು ಸ್ಪೋರ್ಟ್ಸ್ ಪೆಡಲ್‌ಗಳು ಮತ್ತು ಡೋರುಗಳ ಮೇಲೆ ರೆಡ್ ಕಾಂಟ್ರಾಸ್ಟ್ ಸ್ಟೀಚ್, ಸ್ಟೀಯರಿಂಗ್ ವ್ಹೀಲ್, ಸೆಂಟರ್ ಆರ್ಮ್ ರೆಸ್ಟ್, ಶಿಫ್ಟ್ ಬೂಟ್ ಮತ್ತು ಶಿಫ್ಟ್ ನಾಬ್ ಹೊಂದಿದೆ. ಇದರ ಎಡಭಾಗದಲ್ಲಿ ಡಿಜಿಟಲ್ ಟ್ಯಾಕೋಮೀಟರ್, ಸೆಂಟ್ರಲ್ ಮಲ್ಟಿ ಇಮ್ಫೋಟೈನ್ ಮೆಂಟ್ ಸಿಸ್ಟಂ ಮತ್ತು ಪಿಸಿಕಲ್ ಸ್ಪೀಡೋಮೀಟರ್ ಡಯಲ್ ಜೊತೆಗೆ ಹೊಸ 7 ಇಂಚಿನ ಕಲರ್ ಇನ್ಸ್ ಟ್ರೂಮೆಂಟ್ ಡಿಸ್ ಪ್ಲೇ ಹೊಂದಿದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಇದರೊಂದಿಗೆ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿಗೆ ಮತ್ತು ಹೊಸ 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಂ ಅನ್ನು ಪಡೆಯುತ್ತದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

2022ರ ಹೋಂಡಾ ಸಿವಿಕ್ ಎಸ್ಐ ಕಾರಿನಲ್ಲಿ 1.5 ಲೀಟರ್, 4 ಸಿಲಿಂಡರ್ ಟರ್ಬೋಚಾರ್ಜ್ಡ್ ವಿಟಿಇಸಿ ಎಂಜಿನ್ ಅಳವಡಿಸಲಾಗಿದೆ, ಈ ಎಂಜಿನ್ 6000 ಆರ್‌ಪಿಎಂನಲ್ಲಿ 200 ಬಿಹೆಚ್ ಪಿ ಪವರ್ ಮತ್ತು 1800 ಮತ್ತು 5000 ಆರ್‌ಪಿಎಂ 260 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಮೋಟಾರ್ ಸಿಂಗಲ್-ಮಾಸ್ ಫ್ಲೈವೀಲ್ ಹೊಂದಿದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ರಿವ್-ಮ್ಯಾಚಿಂಗ್ ಜೊತೆ ಜೋಡಿಸಲಾಗಿದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಇದು ಹೆಲಿಕಲ್ ಲಿಮಿಟೆಡ್-ಸ್ಲಿಪ್ ಡಿಫರೆನ್ಷಿಯಲ್ ಗೆ ಸಂಪರ್ಕ ಹೊಂದಿದೆ. ಇನ್ನು ಎಂಜಿನ್ ಹೊಸ ಡ್ಯುಯಲ್-ಕಾಯಿಲ್ ಸೈಲೆನ್ಸರ್ ಎಕ್ಸಾಸ್ಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಈ ಹೋಂಡಾ ಸಿವಿಕ್ ಎಸ್ಐ ಕಾರು ನಾರ್ಮಲ್, ಸ್ಪೋರ್ಟ್ಸ್ ಮತ್ತು ಇಂಡಿವಿಷುವಲ್ ಎಂಬ 3 ಡ್ರೈವ್ ಮೋಡ್‌ಗಳನ್ನು ನೀಡುತ್ತದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಇನ್ನು ಸ್ಟ್ಯಾಂಡರ್ಡ್ ಹೋಂಡಾ ಸಿವಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಡಿಮೆ ಬಾಡಿ ಕ್ರೀಸ್‌ಗಳು ಮತ್ತು ಸ್ಪೋರ್ಟ್ಸ್ ಕ್ಲೀನರ್ ವಿನ್ಯಾಸದೊಂದಿಗೆ ಇದು ಹೆಚ್ಚು ಪ್ರಬುದ್ಧವಾಗಿ ಕಾಣುತ್ತದೆ, ಹೊಸ ಸಿವಿಕ್ ಸ್ಪೋರ್ಟಿ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದರ ಅಪ್‌ಫ್ರಂಟ್ ವಿಶಾಲವಾದ, ಅಡ್ಡಲಾಗಿ ಇರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು) ಮತ್ತು ಬಾಡಿ ಬಣ್ಣ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದ ವಿನ್ಯಾಸವು ಹೊಸ ತಲೆಮಾರಿನ ಹೆಚ್‍ಆರ್-ವಿ ಮಾದರಿಯಿಂದ ಸ್ಫೂರ್ತಿ ಪಡೆದಿದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಸಿವಿಕ್ ಮಾದರಿಯು ಸರಿಯಾದ ಸೆಡಾನ್ ತರಹದ ಹಿಂಭಾಗದ ಪ್ರೊಫೈಲ್ ಅನ್ನು ಹೊಂದಿದೆ. 2022ರ ಹೋಂಡಾ ಸಿವಿಕ್ ಕಾರು 4,673 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,414 ಎಂಎಂ ಎತ್ತರವನ್ನು ಹೊಂದಿದೆ. ಇನ್ನು 2,735 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಈ ಸ್ಟ್ಯಾಂಡರ್ಡ್ ಮಾದರಿಯಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 160 ಬಿಹೆಚ್ಪಿ ಮತ್ತು 4,200 ಆರ್‌ಪಿಎಂನಲ್ಲಿ 186 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣಗೊಂಡ ಪವರ್‌ಫುಲ್ Honda Civic Si ಸೆಡಾನ್

ಇನ್ನು 2022ರ ಹೋಂಡಾ ಸಿವಿಕ್ ಎಸ್ಐ ಕಾರಿನಲ್ಲಿ ಗಟ್ಟಿಯಾದ ಸಸ್ಪೆಂಕ್ಷನ್ ಸಿಸ್ಟಂ ಮತ್ತು ಮ್ಯಾಕ್ ಫರ್ಸನ್ ಸ್ಟ್ರಟ್ ಫ್ರಂಟ್ ಮತ್ತು ಮಲ್ಟಿ-ಲಿಂಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಸ್ಪೋರ್ಟಿ ಹ್ಯಾಂಡ್ಲಿಂಗ್ಗಾಗಿ ರೀ ಟ್ಯೂನ್ ಮಾಡಲಾಗಿದೆ. ಇದು 312 ಎಂಎಂ ಫ್ರಂಟ್ ಡಿಸ್ಕ್ ಮತ್ತು 282 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಪಡೆಯುತ್ತದೆ. ಹೋಂಡಾ ಸಿವಿಕ್ ಎಸ್ಐ ಕಾರು 1339 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಇದು 10 ಏರ್‌ಬ್ಯಾಗ್‌ಗಳು ಮತ್ತು ಹೋಂಡಾ ಸೆನ್ಸಿಂಗ್ ತಂತ್ರಜ್ಞಾನಗಳೊಂದಿಗೆ ಬರುತ್ತದೆ.

Most Read Articles

Kannada
Read more on ಹೋಂಡಾ honda
English summary
Honda revealed 2022 civic si sedan engine details
Story first published: Wednesday, October 20, 2021, 17:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X