Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

ಜಪಾನ್ ಮೂಲದ Honda ಕಂಪನಿಯು ಹಲವಾರು ವರ್ಷಗಳಿಂದ ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ತನ್ನ ಕಾರುಗಳನ್ನು ಮಾರಾಟ ಮಾಡುತ್ತದೆ. Honda ಕಂಪನಿಯು ಮಲೇಷಿಯಾದಲ್ಲಿಯೂ ಹಲವಾರು ವರ್ಷಗಳಿಂದ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

Honda ಕಂಪನಿಯು ತನ್ನ Jazz ಕಾರ್ ಅನ್ನು ಹಲವು ವರ್ಷಗಳಿಂದ ಮಲೇಷಿಯಾದಲ್ಲಿ ಮಾರಾಟ ಮಾಡುತ್ತಿತ್ತು. ಕಂಪನಿಯು ಈ ಹ್ಯಾಚ್‌ಬ್ಯಾಕ್ ಕಾರಿನ ಮೂರು ತಲೆಮಾರುಗಳ ಮಾದರಿಯನ್ನು ಮಲೇಷಿಯಾದಲ್ಲಿ ಮಾರಾಟ ಮಾಡಿದೆ. Honda Jazz ಹ್ಯಾಚ್‌ಬ್ಯಾಕ್ ಕಾರಿನ 1 ಲಕ್ಷಕ್ಕೂ ಹೆಚ್ಚು ಯುನಿಟ್ ಗಳು ಮಲೇಷಿಯಾದಲ್ಲಿ ಮಾರಾಟವಾಗಿವೆ. Honda ಕಂಪನಿಯು ಮಲೇಷಿಯಾದಲ್ಲಿ Jazz ಹ್ಯಾಚ್ ಬ್ಯಾಕ್ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

ಈ ಹಿನ್ನೆಲೆಯಲ್ಲಿ ಇತ್ತೀಚಿಗೆ Honda Jazz ಕಾರಿನ ಕೊನೆಯ ಯುನಿಟ್ ಉತ್ಪಾದನಾ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಮಲೇಷಿಯಾದ ಮಲೆಕದಲ್ಲಿರುವ Honda ಕಂಪನಿಯ ಉತ್ಪಾದನಾ ಘಟಕದಲ್ಲಿ ಈ ಕಾರಿನ ಕೊನೆಯ ಯುನಿಟ್ ಅನ್ನು ಉತ್ಪಾದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಚಿತ್ರವನ್ನು Honda ಕಂಪನಿಯು ಶೇರ್ ಮಾಡಿದೆ. ಈ ಚಿತ್ರದಲ್ಲಿ ಉತ್ಪಾದನಾ ಘಟಕದ ಕಾರ್ಮಿಕರು ಈ ಕೊನೆಯ ಯುನಿಟ್ ಕಾರಿನ ಸುತ್ತ ಕುಳಿತಿರುವುದನ್ನು ಕಾಣಬಹುದು.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

ಕಳೆದ ಕೆಲವು ತಿಂಗಳುಗಳಿಂದ ಬಿ ಸೆಗ್ ಮೆಂಟ್ ಹ್ಯಾಚ್ ಬ್ಯಾಕ್ ಕಾರ್ ಆಗಿರುವ Honda Jazz ನ ಮಾರಾಟವನ್ನು ನಿಲ್ಲಿಸಲಾಗುವುದು ಎಂಬ ಸುದ್ದಿಗಳು ಹರಿದಾಡುತ್ತಿದ್ದವು. Honda ಕಂಪನಿಯು ಕೊನೆಯ Jazz ಕಾರ್ ಅನ್ನು ಉತ್ಪಾದನೆಯ ಬಗ್ಗೆ ಘೋಷಿಸಿ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದೆ. Honda ಕಂಪನಿಯು ಹೊಸ ತಲೆಮಾರಿನ City ಹ್ಯಾಚ್‌ಬ್ಯಾಕ್ ಕಾರನ್ನು ಸಿಂಗಾಪುರ್ ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಲ್ಲಿ Jazz ಕಾರಿ‌ಗೆ ಪರ್ಯಾಯವಾಗಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

ಹೊಸ Honda City ಕಾರು Jazz ಕಾರಿಗಿಂತ ಸ್ಪೋರ್ಟಿಯಾಗಿರುವುದಲ್ಲದೆ, Jazz ಕಾರಿಗಿಂತ ಅಗ್ಗವಾಗಿದ್ದು, ದೊಡ್ಡ ಗಾತ್ರವನ್ನು ಹೊಂದಿದೆ. ದಕ್ಷಿಣ ಏಷ್ಯಾ ದೇಶಗಳಲ್ಲಿ ಹೊಸ Honda City ಹ್ಯಾಚ್‌ಬ್ಯಾಕ್ ಕಾರ್ ಅನ್ನು ಬಿಡುಗಡೆಗೊಳಿಸಲಾಗುವುದು. ಆದರೆ ಕೆಲವು ತಿಂಗಳ ಹಿಂದೆ ಜಪಾನ್‌ನಲ್ಲಿ ಬಿಡುಗಡೆಗೊಳಿಸಲಾದ ಹೊಸ ತಲೆಮಾರಿನ Jazz ಕಾರು ಮಾದರಿಯನ್ನು ದಕ್ಷಿಣ ಏಷ್ಯಾದ ದೇಶಗಳಲ್ಲಿ ಬಿಡುಗಡೆಗೊಳಿಸಲಾಗುವುದಿಲ್ಲ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

Honda ಕಂಪನಿಯು ಸುಮಾರು 18 ವರ್ಷಗಳ ಹಿಂದೆ ಅಂದರೆ 2003 ರಲ್ಲಿ Jazz ಹ್ಯಾಚ್ ಬ್ಯಾಕ್ ಕಾರ್ ಅನ್ನು ಮೊದಲ ಬಾರಿಗೆ ಮಲೇಷಿಯಾದಲ್ಲಿ ಬಿಡುಗಡೆಗೊಳಿಸಿತು. ಈ ಕಾರ್ ಅನ್ನು ಮಲೇಷಿಯಾದಲ್ಲಿ ಮೊದಲು ಸಿಕೆಡಿ ರೂಪದಲ್ಲಿ ಮಾರಾಟ ಮಾಡಲಾಯಿತು. ಸಿಕೆಡಿ ಎನ್ನುವುದು ಸ್ಥಳೀಯವಾಗಿ ತಯಾರಿಸಿದ ಭಾಗಗಳ ಸಂಯೋಜನೆಯಾಗಿದ್ದು, ಒಟ್ಟು ಕಾರಿನಂತೆ ಜೋಡಿಸಿ ಮಾರಾಟ ಮಾಡಲಾಗುತ್ತದೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

2003 ರಲ್ಲಿ ಮೊದಲ ತಲೆಮಾರಿನ Honda Jazz ಕಾರ್ ಅನ್ನು ಬಿಡುಗಡೆಗೊಳಿಸಿದ ನಂತರ, ಎರಡನೇ ತಲೆಮಾರಿನ Jazz ಕಾರ್ ಅನ್ನು ಹೈಬ್ರಿಡ್ ಎಂಜಿನ್‌ ಆಯ್ಕೆಯೊಂದಿಗೆ 2012 ರಲ್ಲಿ ಬಿಡುಗಡೆಗೊಳಿಸಲಾಯಿತು. ಆ ಸಮಯದಲ್ಲಿ ಸಿಕೆಡಿ ಸಿಸ್ಟಂ ಅಡಿಯಲ್ಲಿ ಮಾರಾಟವಾದ ಕಾರು ಮೊದಲ ಬಾರಿಗೆ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಪಡೆದು ಕೊಂಡಿತು. ಈಗ ಮೂರನೇ ತಲೆಮಾರಿನ Honda Jazz ಹ್ಯಾಚ್ ಬ್ಯಾಕ್ ಕಾರ್ ಅನ್ನು ಮಾರಾಟ ಮಾಡಲಾಗುತ್ತಿತ್ತು.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

ಈ ಕಾರ್ ಅನ್ನು 2020 ರಲ್ಲಿ ಬಿಡುಗಡೆಗೊಳಿಸಲಾಯಿತು. ಮಲೇಷಿಯಾದಲ್ಲಿ ಮಾರಾಟವಾಗುತ್ತಿದ್ದ Jazz ಕಾರಿನಲ್ಲಿ 1.5 ಲೀಟರ್ ಐ ವಿಟೆಕ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ ನೊಂದಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ ಗರಿಷ್ಠ 120 ಬಿ‌ಹೆಚ್‌ಪಿ ಪವರ್ ಹಾಗೂ 145 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

Honda ಕಂಪನಿಯು ಭಾರತದಲ್ಲಿ ಮಾರಾಟ ಮಾಡುವ Jazz ಹ್ಯಾಚ್ ಬ್ಯಾಕ್ ಕಾರಿನಲ್ಲಿ 1.2 ಲೀಟರ್ ಐ ವಿಟೆಕ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ ಗರಿಷ್ಠ 89 ಬಿಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುಯಲ್ ಹಾಗೂ 7 ಹಂತದ ಸಿವಿಟಿ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

Honda ಕಂಪನಿಯು Jazz ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಹಾಗೂ ಫಾಗ್ ಲೈಟ್‌ಗಳನ್ನು ನೀಡುತ್ತದೆ. ಇದರ ಜೊತೆಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಕ್ರೂಸ್ ಕಂಟ್ರೋಲ್ ಗಳನ್ನು ನೀಡಿದೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

Jazz ಕಾರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ ಮೆಂಟಿನಲ್ಲಿ ಮಾರಾಟವಾಗುತ್ತದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿಲ್ಲ. 2022 ರ ಆರಂಭದಲ್ಲಿ ಹೊಸ ತಲೆಮಾರಿನ Honda City ಹ್ಯಾಚ್‌ಬ್ಯಾಕ್ ಕಾರನ್ನು ಮಲೇಷಿಯಾದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

Jazz ಹ್ಯಾಚ್‌ಬ್ಯಾಕ್ ಕಾರಿನ ಕೊನೆಯ ಯುನಿಟ್ ಹೊರ ತಂದ Honda

Honda City ಸೆಡಾನ್ ಕಾರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಹೊಸ ಹ್ಯಾಚ್‌ಬ್ಯಾಕ್ ಕಾರ್ ಅನ್ನು City ಹೆಸರಿನಲ್ಲಿ ಮಾರಾಟ ಮಾಡಲಾಗುವುದು. ಈ ಹ್ಯಾಚ್ ಬ್ಯಾಕ್ ಕಾರು City ಸೆಡಾನ್‌ ಕಾರಿನಲ್ಲಿರುವಂತಹ ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆಗಳಿವೆ.

Most Read Articles

Kannada
Read more on ಹೋಂಡಾ honda
English summary
Honda rolls out last unit of jazz from malaysian plant details
Story first published: Tuesday, October 19, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X