500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

2021ರ ಶಾಂಘೈಆಟೋ ಶೋನಲ್ಲಿ ಹೋಂಡಾ ಹೆಚ್‍ಆರ್-ವಿ(Honda HR-V) ಎಲೆಕ್ಟ್ರಿಕ್ ಎಸ್‍ಯುವಿಯ ಪ್ರೊಟೊಟೈಪ್ ವಿನ್ಯಾಸ ಶೈಲಿಯ ಮಾದರಿಯನ್ನು ಪ್ರದರ್ಶಿಸಲಾಗಿತ್ತು. ಇದೀಗ ಹೋಂಡಾ ಕಂಪನಿಯು ತನ್ನ ಹೆಚ್‍ಆರ್-ವಿ ಎಲೆಕ್ಟ್ರಿಕ್ ಎಸ್‍ಯುವಿಯು ಚೀನಾದಲ್ಲಿ ಅನಾವರಣಗೊಳಿಸಿದೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ದಶಕದ ಅಂತ್ಯದ ವೇಳೆಗೆ ಹೋಂಡಾ ತನ್ನ ಭವಿಷ್ಯದ ಎಲೆಕ್ಟೀಕ್ ಕರಣ ಯೋಜನೆಗಳನ್ನು ಚೀನಾ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಅನಾವರಣಗೊಳಿಸಿದೆ. ಜಪಾನಿನ ತಯಾರಕರು ಮೂರು ಕಾನ್ಸೆಪ್ಟ್ ಮಾದರಿಗಳನ್ನು ಘೋಷಿಸಿದೆ. ಮುಂಬರುವ ಇ: ಎನ್ ಸರಣಿಯಿಂದ ಎರಡು-ಡೋರ್ ಕೂಪೆ, ನಾಲ್ಕು-ಡೋರ್ ಜಿಟಿ ಮತ್ತು ಸ್ಪೋರ್ಟ್ಸ್ ಆಧಾರಿತ ವಾಹನ. ಈ ಕಾನ್ಸೆಪ್ಟ್ ಮಾದರಿಗಳು ರೋಡ್-ಗೋಯಿಂಗ್ ಆವೃತ್ತಿಗಳಾಗಿದೆ. 2022ರಲ್ಲಿ ಹೋಂಡಾ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಇದನ್ನು ಇ: ಎನ್ಎಸ್1 ಮತ್ತು ಇ:ಎನ್‌ಪಿ1 ಎಂದು ಕರೆಯುತ್ತಾರೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಹೋಂಡಾದ ಎರಡು ವಿಭಿನ್ನ ಜಂಟಿ ಉದ್ಯಮಗಳಾದ ಡಾಂಗ್‌ಫೆಂಗ್ ಮತ್ತು ಜಿಎಸಿಯೊಂದಿಗೆ ಮೈತ್ರಿ ಹೊಂದಿರುವುದರಿಂದ ಅವುಗಳನ್ನು ಚೀನಾದಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಹೆಚ್‍ಆರ್-ವಿ ಕ್ರಾಸ್ಒವರ್ ಅನ್ನು ಚೀನಾದಲ್ಲಿ ವೆಝಲ್ ಮತ್ತು XR-V ಎಂದು ರೀಟೇಲ್ ಮಾಡಲಾಗಿದೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಎನ್ಎಸ್1 ಮತ್ತು ಇ:ಎನ್‌ಪಿ1 ಹೈಬ್ರಿಡ್ ಹೆಚ್‍ಆರ್-ವಿ ಮಾದರಿಗೆ ಹೋಲಿಸಿದರೆ ಗಮನಾರ್ಹವಾಗಿ ಭಿನ್ನವಾಗಿವೆ. e: HEV ಮತ್ತು ಈಗಾಗಲೇ ಕೆಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಹೈಬ್ರಿಡ್ ಕ್ರಾಸ್ಒವರ್ ಈ ವರ್ಷದ ಅಂತ್ಯದ ವೇಳೆಗೆ ಮತ್ತು 2022ರ ಆರಂಭದಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಯುರೋಪಿಯನ್ ದೇಶಗಳನ್ನು ತಲುಪುತ್ತದೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ಹೊಸ ಎಸ್‍ಯುವಿಯು ಮುಂಭಾಗದಲ್ಲಿ ಹೊಸ ಗ್ರಿಲ್ ವಿಭಾಗವನ್ನು ಪಡೆಯುತ್ತದೆ ಮತ್ತು ಇದು ಹೆಚ್ ಲೋಗೋದ ಸ್ನೇಗೆಚರ್ ಹಿಂದೆ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಹಿಂದಿನ ಸ್ಕ್ರೀನ್ ಕೆಳಗಿರುವ ಸ್ಪಾಯ್ಲರ್ ಇನ್ನೊಂದು ವಿಶೇಷತೆಯಾಗಿದೆ ಮತ್ತು ಇದು ವಿಶೇಷ ಆವೃತ್ತಿಗಳಿಗೆ ಸೀಮಿತವಾಗಿರಬಹುದು.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇನ್ನು ಒಳಭಾಗದಲ್ಲಿ, ಎಲೆಕ್ಟ್ರಿಕ್ ರೂಪಾಂತರಗಳು 15.2-ಇಂಚಿನ ಸೆಂಟ್ರಲ್ ಎಚ್‌ಡಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 10.25-ಇಂಚಿನ ಲಿಕ್ವಿಡ್ ಕ್ರಿಸ್ಟಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಂತೆ ಆಧುನಿಕತೆಯ ಸೌಜನ್ಯವನ್ನು ಕಾಣುತ್ತವೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಸುರಕ್ಷತೆ ಮತ್ತು ಸಹಾಯಕ ವೈಶಿಷ್ಟ್ಯಗಳ ಹೋಂಡಾ ಕನೆಕ್ಟ್ ಮತ್ತು ಹೋಂಡಾ ಸೆನ್ಸಿಂಗ್ ಸೂಟ್ ಇತರ ಪ್ರಮುಖ ಅಂಶಗಳಾಗಿವೆ. ಹೋಂಡಾ ಇ: ಎನ್ಎಸ್ 1 (ಹೆಚ್‍ಆರ್-ವಿ) 150 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದ್ದು, ಮುಂಭಾಗದ ಆಕ್ಸಲ್ ಅನ್ನು ಚಾಲನೆ ಮಾಡಲಾಗಿದ್ದು, ಇದು 150 ಕಿಲೋಮೀಟರ್ ವೇಗವನ್ನು ಹೊಂದಿದೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇ-ಮೋಟಾರ್ 68.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಕೂಡಿದೆ. ಒಂದು ಚಾರ್ಜ್‌ನಲ್ಲಿ 500 ಕಿಮೀಗಿಂತಲೂ ಹೆಚ್ಚಿನ ಡ್ರೈವಿಂಗ್ ರೇಂಜ್ ಇರುತ್ತದೆ.ಇ: ಎನ್ ಆರ್ಕಿಟೆಕ್ಚರ್ ಎಫ್ ನಿಂದ ಆಧಾರವಾಗಿದೆ, ಇದು ಎಲೆಕ್ಟ್ರಿಕ್ ಎಚ್ಆರ್-ವಿ ಮಾದರಿಯಾಗಿ ಬೇರೆಡೆ ಮಾರಾಟ ಮಾಡಲಾಗುತ್ತದೆಯೇ ಎಂದು ನೋಡಬೇಕು ಆದರೆ ರಫ್ತು ಯೋಜನೆಗಳು ಇ: ಎನ್ ಸರಣಿ ಮಾದರಿಗಳಿಗೆ ಜಾರಿಯಲ್ಲಿವೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಹೋಂಡಾ ಈ ಹೆಚ್‌ಆರ್-ವಿ ಹೈಬ್ರಿಡ್ ಎಸ್‍ಯುವಿಯನ್ನು ಜಪಾನ್‌ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. ಈ 2021ರ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಜಪಾನ್‌ನಲ್ಲಿ ಹೊಂಡಾ ಹೆಚ್‌ಆರ್-ವಿ ಎಸ್‍ಯುವಿಯು ಹೋಂಡಾ ವೆಜೆಲ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇನ್ನು ಈ ಹೋಂಡಾ ಹೆಚ್‌ಆರ್-ವಿ ಹೈಬ್ರಿಡ್ ಎಸ್‍ಯುವಿಯು ಜಿ, ಇ: ಹೆಚ್ಇವಿ ಎಕ್ಸ್, ಇ: ಹೆಚ್ಇವಿ ಎಕ್ಸ್, ಇ: ಹೆಚ್ಇವಿ ಝಡ್ ಮತ್ತು ಇ: ಹೆಚ್ಇವಿ ಪ್ಲೇ ಎಂಬ ನಾಲ್ಕು ವೆರಿಯೆಂಟ್ ಗಳಲ್ಲಿ ಬಿಡುಗಡೆಯಾಗಲಿದೆ. 2021ರ ಹೋಂಡಾ ಹೆಚ್‌ಆರ್-ವಿ ಹೈಬ್ರಿಡ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಫ್ರಂಟ್ ಗ್ರಿಲ್, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಅಗ್ರೇಸಿವ್ ಫ್ರಂಟ್ ಬಂಪರ್, ಚಿಸೆಲ್ಡ್ ಬಾನೆಟ್ ಮತ್ತು ಸ್ಪೋರ್ಟಿ ಫಾಗ್ ಲ್ಯಾಂಪ್ ಜೋಡಣೆಯೊಂದಿಗೆ ಕೂಪ್ ತರಹದ ಲುಕ್ ಹೊಂದಿದೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ಹೆಚ್‌ಆರ್-ವಿ ಹೈಬ್ರಿಡ್ ಎಸ್‍ಯುವಿಯ ಹಿಂಭಾಗದ ಡೋರಿನ ಹ್ಯಾಂಡಲ್‌ಗಳೊಂದಿಗೆ ಕೋನೀಯ ಸಿ-ಪಿಲ್ಲರ್, ಸ್ಲೋಪಿಂಗ್ ರೂಫ್‌ಲೈನ್, ಡ್ಯುಯಲ್-ಟೋನ್ ಮೆಷಿನ್ ಕಟ್ ಅಲಾಯ್ ವ್ಹೀಲ್, ಟರ್ನ್ ಇಂಡಿಕೇಟರ್‌ಗಳೊಂದಿಗೆ ಡ್ಯುಯಲ್ ಟೋನ್ ಒಆರ್‌ವಿಎಂ ಮತ್ತು ಸೈಡ್ ಬಾಡಿ ಕ್ಲಾಡಿಂಗ್‌ನಿಂದ ಅಲಂಕರಿಸಲಾಗಿದೆ. ಇನ್ನು ಎಸ್‍ಯುವಿಯ ಇಂಟಿರಿಯರ್ ನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್‌ಟಿ, ಹೋಂಡಾ ಕನೆಕ್ಟ್, ವೈರ್‌ಲೆಸ್ ಚಾರ್ಜಿಂಗ್, ಹಿಂಭಾಗದ ಎಸಿ ವೆಂಟ್ಸ್, ಪನೋರೊಮಿಕ್ ಸನ್‌ರೂಫ್, ರಿಮೋಟ್ ಬೂಟ್ ಓಪನಿಂಗ್, ಹಿಲ್ ಡಿಸೆಂಟ್ ಮತ್ತು ಹೋಂಡಾ ಸೆನ್ಸಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

500 ಕಿ.ಮೀ ರೇಂಜ್ ಹೊಂದಿರುವ Honda HR-V ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಹೊಸ ತಲೆಮಾರಿನ ಹೆಚ್‌ಆರ್-ವಿ ಎಸ್‍ಯುವಿಯಲ್ಲಿ 1.5 ಎಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಒಳಗೊಂಡಿರುವ ಹೋಂಡಾದ ಇ: ಎಚ್‌ಇವಿ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ. ಇದು ಲಿಥಿಯಂ-ಐಯಾನ್ ಬ್ಯಾಟರಿ ಒಳಗೊಂಡಿರುತ್ತದೆ. ಇನ್ನು ಹೋಂಡಾ ಕಂಪನಿಯು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖತೆಯನ್ನು ನೀಡುತ್ತಿದೆ, ಎನ್ಎಸ್1 ಮತ್ತು ಇ:ಎನ್‌ಪಿ1 ಮಾದರಿಗಳು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್‌ಆರ್-ವಿ ಎಲೆಕ್ಟ್ರಿಕ್ ಎಸ್‍ಯುವಿಯಾಗಿ ಮಾರಾಟವಾಗಲಿದೆ.

Most Read Articles

Kannada
Read more on ಹೋಂಡಾ honda
English summary
Honda unveiled hr v electric suv range features details
Story first published: Monday, October 18, 2021, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X