ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಹಂಬಲ್ ಮೋಟಾರ್ಸ್ ಅಮೆರಿಕಾ ಮೂಲದ ಸ್ಟಾರ್ಟ್ ಅಪ್ ವಾಹನ ತಯಾರಕ ಕಂಪನಿಯಾಗಿದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಈ ಕಂಪನಿಯು ಸೂರ್ಯನ ಬೆಳಕಿನಿಂದ ಚಲಿಸುವ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಿದೆ.

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಅಮೆರಿಕಾ ಮೂಲದ ಟೆಸ್ಲಾ, ಲುಸಿಡ್, ಫ್ಯಾರಡೆ ಫ್ಯೂಚರ್ ಹಾಗೂ ಫಿಸ್ಕರ್ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯುಂಟು ಮಾಡುತ್ತಿವೆ. ಹಂಬಲ್ ಮೋಟಾರ್ಸ್ ಈ ಸರಣಿಗೆ ಹೊಸ ಸೇರ್ಪಡೆಯಾಗಿದೆ.

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಕಂಪನಿಯು ಸೂರ್ಯನ ಬೆಳಕಿನಿಂದ ಚಲಿಸುವ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಿರುವ ಕಾರಣಕ್ಕೆ ಇತರ ಕಂಪನಿಗಳ ವಾಹನಗಳನ್ನು ಹಿಂದಿಕ್ಕಬಲ್ಲದು. ಈ ಎಸ್‌ಯುವಿಯಲ್ಲಿ ಸೂರ್ಯನ ಬೆಳಕನ್ನು ನೇರವಾಗಿ ಸ್ವೀಕರಿಸಲು ರೂಫ್ ಮೇಲೆ ಸೋಲಾರ್ ಪ್ಯಾನೆಲ್'ಗಳನ್ನು ಅಳವಡಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಈ ಪ್ಯಾನೆಲ್ ಮೂಲಕ ಸೂರ್ಯನ ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸಿ, ಅಗತ್ಯವಿರುವ ವಿದ್ಯುತ್ ಆಗಿ ಬಳಸುವಂತೆ ಈ ಕಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಈ ಸಾಮರ್ಥ್ಯವನ್ನು ಪಡೆದ ವಿಶ್ವದ ಮೊದಲ ಎಸ್‌ಯುವಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಕಂಪನಿಯು ಈ ಎಸ್‌ಯುವಿಗೆ ಹಂಬಲ್ ಒನ್ ಎಂದು ಹೆಸರಿಟ್ಟಿದೆ. ಈ ಎಸ್‌ಯುವಿಯ ರೂಫ್ ಮೇಲೆ 80 ಚದರ ಅಡಿ ಸೋಲಾರ್ ಪ್ಯಾನೆಲ್'ಗಳನ್ನು ಸ್ಥಾಪಿಸಲಾಗಿದೆ. ಇವುಗಳು ಫೋಟೋ ವೋಲ್ಟಿಕ್ ಸೋಲಾರ್ ಪ್ಯಾನೆಲ್'ಗಳು ಎಂಬುದು ವಿಶೇಷ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಈ ಪ್ಯಾನೆಲ್'ಗಳಲ್ಲಿ ಚಾರ್ಜ್ ಮಾಡಿದರೆ ದಿನಕ್ಕೆ 96 ಕಿ.ಮೀಗಳವರೆಗೆ ಪ್ರಯಾಣಿಸಬಹುದಾದಷ್ಟು ವಿದ್ಯುತ್ ಪಡೆಯಬಹುದು. ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಕ್ರಾಂತಿಯುಂಟುಮಾಡಲು ಈ ಹೊಸ ಫೀಚರ್ ಹೊಂದಿರುವ ಕಾರ್ ಅನ್ನು ಪರಿಚಯಿಸಲಾಗುತ್ತಿದೆ.

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ವಿದ್ಯುತ್ ಸಂಗ್ರಹಿಸಲು ಈ ಎಸ್‌ಯುವಿಯಲ್ಲಿ ಯಾವ ರೀತಿಯ ಬ್ಯಾಟರಿಗಳನ್ನು ಬಳಸಲಾಗುತ್ತದೆ ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಹಂಬಲ್ ಕಂಪನಿಯು 2024ರಲ್ಲಿ ಸೋಲಾರ್ ಪ್ಯಾನಲ್ ಹೊಂದಿರುವ ಕಾರನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಅದೇ ವರ್ಷ ಕಾರಿನ ವಿತರಣೆಯನ್ನು ನೀಡಲಾಗುವುದು. ಇದರಿಂದಾಗಿ ಜನರು ಸೂರ್ಯನ ಬೆಳಕಿನಿಂದ ಚಲಿಸುವ ಈ ಎಸ್‌ಯುವಿಯಲ್ಲಿ ಪ್ರಯಾಣಿಸಲು ಇನ್ನೂ ಮೂರು ವರ್ಷ ಕಾಯುವುದು ಅನಿವಾರ್ಯ.

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಹಂಬಲ್ ಒನ್ ಸೋಲಾರ್ ಪ್ಯಾನಲ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ 1,09,000 ಅಮೆರಿಕನ್ ಡಾಲರ್'ಗಳಾಗ ಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.80.2 ಲಕ್ಷಗಳಾಗಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಹಂಬಲ್ ಒನ್ ನೂರಕ್ಕೆ ನೂರರಷ್ಟು ಪರಿಸರ ಸ್ನೇಹಿಯಾಗಿರಲಿದೆ. ಅಮೇರಿಕಾದಲ್ಲಿ ಈಗಾಗಲೇ ಈ ಎಸ್‌ಯುವಿಯ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಬೆರಗುಗೊಳಿಸುವ ಫೀಚರ್'ಗಳನ್ನು ಹೊಂದಿರುವ ಕಾರಣಕ್ಕೆ ಈ ಎಸ್‌ಯುವಿಯು ಹೆಚ್ಚು ಬುಕ್ಕಿಂಗ್'ಗಳನ್ನು ಪಡೆಯುತ್ತಿದೆ.

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ನಾಲ್ಕು ಸೀಟುಗಳನ್ನು ಹೊಂದಿರುವ ಈ ಎಸ್‌ಯುವಿಯು ಮನಮೋಹಕ ಶೈಲಿ, ಹೊಸ ತಂತ್ರಜ್ಞಾನ, ಹೆಚ್ಚು ಆಕ್ಷನ್-ಪ್ಯಾಕ್ಡ್ ಬಾರ್ ಕ್ಲಬ್ ಸೌಲಭ್ಯಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ಒಟ್ಟು ತೂಕ 1,800 ಕೆ.ಜಿಗಳಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು

ಹಲವು ಫೀಚರ್'ಗಳನ್ನು ಹೊಂದಿರುವ ಈ ಎಸ್‌ಯುವಿಯು ಅಮೇರಿಕಾದಲ್ಲಿ ಬಿಡುಗಡೆಯಾಗುವುದು ಖಚಿತ. ಆದರೆ ಭಾರತದಲ್ಲಿ ಈ ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Most Read Articles

Kannada
English summary
Humble company reveals world's first ever solar powered electric SUV. Read in Kannada.
Story first published: Wednesday, March 31, 2021, 17:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X