ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಭಾರತದಲ್ಲಿ ದೈಹಿಕವಾಗಿ ವಿಶೇಷ ಚೇತನರಾಗಿರುವವರಿಗೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಕಷ್ಟದ ಕೆಲಸ. ಆದರೆ ಈಗ ವರದಿಯಾಗಿರುವ ಘಟನೆಯೊಂದು ವಿಶೇಷ ಚೇತನರ ಮನೋಬಲವನ್ನು ಹೆಚ್ಚಿಸುತ್ತದೆ. ಜೊತೆಗೆ ಮುಂಬರುವ ದಿನಗಳಲ್ಲಿ ವಿಶೇಷ ಚೇತನರೂ ಸಹ ಡ್ರೈವಿಂಗ್ ಲೈಸೆನ್ಸ್ ಪಡೆದು ವಾಹನ ಚಾಲನೆ ಮಾಡಲು ಸಾಧ್ಯವಾಗಲಿದೆ.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಇತ್ತೀಚೆಗೆ, ಹೈದರಾಬಾದ್ ನಿವಾಸಿಯಾದ ಗಟ್ಟಿಪಲ್ಲಿ ಶಿವಪಾಲ್ ಎಂಬುವವರು ಡ್ರೈವಿಂಗ್ ಲೈಸೆನ್ಸ್ ಪಡೆದ ದೇಶದ ಮೊದಲ ಕುಬ್ಜ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಮಾರು ಮೂರು ಅಡಿ ಎತ್ತರವಿರುವ 42 ವರ್ಷದ ಗಟ್ಟಿಪಲ್ಲಿ ಶಿವಪಾಲ್ ರವರು ಎಲ್ಲಾ ಸವಾಲುಗಳನ್ನು ಎದುರಿಸಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾಗಿದ್ದಾರೆ. ಅವರು ಕರೀಂನಗರ ಜಿಲ್ಲೆಯಲ್ಲಿ ಪದವಿ ಪಡೆದ ಮೊದಲ ಕುಬ್ಜ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದ್ದಾರೆ.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಶಿವಪಾಲ್ ರವರು 2004 ರಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಎಎನ್‌ಐ ಜೊತೆ ಮಾತನಾಡಿದ ಗಟ್ಟಿಪಲ್ಲಿ ಶಿವಪಾಲ್ ತಮ್ಮ ಅನುಭವದ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ಎತ್ತರದ ಕಾರಣಕ್ಕೆ ಜನರು ನನ್ನನ್ನು ಗೇಲಿ ಮಾಡುತ್ತಿದ್ದರು. ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದೇನೆ. ಅನೇಕ ಯುವಕರು ಡ್ರೈವಿಂಗ್ ತರಬೇತಿಗಾಗಿ ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಮುಂದಿನ ವರ್ಷ ದೈಹಿಕ ವಿಶೇಷ ಚೇತನರಿಗಾಗಿ ಡ್ರೈವಿಂಗ್ ಸ್ಕೂಲ್ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಗಟ್ಟಿಪಲ್ಲಿ ಶಿವಪಾಲ್ ತಿಳಿಸಿದರು. ಶಿವಪಾಲ್ ಸದ್ಯಕ್ಕೆ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾವು 2000ನೇ ಇಸವಿಯಲ್ಲಿ ಹೈದರಾಬಾದ್‌ಗೆ ಬಂದಿದ್ದಾಗಿ ಅವರು ಹೇಳಿದರು. ನಾನು ನಮ್ಮ ಕುಟುಂಬದ ಏಕೈಕ ಕುಬ್ಜ ವ್ಯಕ್ತಿ ಎಂದು ಅವರು ಹೇಳಿದರು.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಹೈದರಾಬಾದ್‌ನಲ್ಲಿ ತಾವು ನೆಲೆಸಲು ಅನುಭವಿಸಿದ ಕಷ್ಟದ ಬಗ್ಗೆ ಅವರು ವಿವರಿಸಿದರು. ನಾನು ಆರಂಭದಲ್ಲಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ಆದರೆ ಹೆಚ್ಚು ಕಾಲ ಇಂಡಸ್ಟ್ರಿಯಲ್ಲಿ ಉಳಿಯಲಿಲ್ಲ. ನನ್ನ ಎತ್ತರದ ಕಾರಣಕ್ಕೆ ಜನರು ಕೆಲಸ ಕೊಡಲು ಸಿದ್ಧರಿರಲಿಲ್ಲ, ಸ್ನೇಹಿತನ ಮೂಲಕ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಈಗ ಕಳೆದ 20 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ನಾನು ಕ್ಯಾಬ್ ಬುಕ್ ಮಾಡುವಾಗಲೆಲ್ಲಾ ಅವರು ಪ್ರಯಾಣವನ್ನು ರದ್ದುಗೊಳಿಸುತ್ತಿದ್ದರು. ನಾನು ನನ್ನ ಹೆಂಡತಿಯೊಂದಿಗೆ ಹೊರಗೆ ಹೋದಾಗ, ಜನರು ಅಸಭ್ಯವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಆಗ ನಾನು ಕಾರು ಖರೀದಿಸಿ, ಅದರಲ್ಲಿಯೇ ಸಂಚರಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು. ಡ್ರೈವ್ ಮಾಡಲು ಉತ್ಸುಕರಾಗಿದ್ದ ಶಿವಪಾಲ್, ಇಂಟರ್ ನೆಟ್ ಮೂಲಕ ಮಾಹಿತಿ ಕಲೆ ಹಾಕಿ ಅಮೆರಿಕಾದ ಅಪ್ಲೋಡ್ ಮಾಡಿದ ವೀಡಿಯೊವೊಂದನ್ನು ಕಂಡುಕೊಂಡರು.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಈ ವೀಡಿಯೊದಲ್ಲಿ ಸೀಟು ಹಾಗೂ ಇತರ ಉಪಕರಣಗಳನ್ನು ಎತ್ತರಕ್ಕೆ ಏರಿಸಲು ಕಾರಿನಲ್ಲಿ ಅಗತ್ಯವಾದ ಮಾರ್ಪಾಡು ಮಾಡುವ ಬಗ್ಗೆ ವಿವರಿಸಲಾಗಿತ್ತು. ಕಾರ್ ಅನ್ನು ಮಾಡಿಫೈ ಮಾಡಿದ ನಂತರ ಶಿವಪಾಲ್ ತಮ್ಮ ಸ್ನೇಹಿತನಿಂದ ಕಾರು ಚಾಲನೆ ಮಾಡಲು ಕಲಿತರು. ಆದರೆ ಚಾಲಕನ ಎತ್ತರಕ್ಕೆ ಸಾರಿಗೆ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊಂದಿರುವುದರಿಂದ ಅವರಿಗೆ ಚಾಲನಾ ಪರವಾನಗಿ ಪಡೆಯಲು ಸಾಧ್ಯವಾಗಲಿಲ್ಲ.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಆದರೆ ಅವರ ಹೋರಾಟ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಕಲಿಕಾ ಪರವಾನಿಗೆ ಪಡೆದ ಮೂರು ತಿಂಗಳ ನಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾಗಿ ಅವರು ತಿಳಿಸಿದರು. ತಾವು ಡ್ರೈವಿಂಗ್ ಟೆಸ್ಟ್ ಮಾಡುವಾಗ ಅಧಿಕಾರಿಯೊಬ್ಬರು ತಮ್ಮ ಪಕ್ಕದ ಸೀಟಿನಲ್ಲಿಯೇ ಕುಳಿತಿದ್ದರು ಎಂದು ಅವರು ತಿಳಿಸಿದರು. ಪ್ರತಿಯೊಬ್ಬರಿಗೂ ಕೆಲವು ನ್ಯೂನತೆಗಳಿರುತ್ತವೆ, ಆದರೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಕಂಡು ಹಿಡಿದು, ಅನಾವರಣಗೊಳಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

2020ರ ಫೆಬ್ರವರಿ ಹಾಗೂ 2021ರ ನವೆಂಬರ್ ನಡುವೆ ಮುಕ್ತಾಯಗೊಳ್ಳುವ ಲರ್ನರ್ ಲೈಸೆನ್ಸ್ ಗಳ ಮಾನ್ಯತೆಯನ್ನು 2020ರ ಜನವರಿವರೆಗೆ ವಿಸ್ತರಿಸುತ್ತಿರುವುದಾಗಿ ದೆಹಲಿ ಸರ್ಕಾರ ತಿಳಿಸಿದೆ. ಕೋವಿಡ್ 19 ಸಾಂಕ್ರಾಮಿಕ ಹಾಗೂ ಡ್ರೈವಿಂಗ್ ಟೆಸ್ಟ್'ಗೆ ಸ್ಲಾಟ್‌ಗಳನ್ನು ಪಡೆಯಲು ಜನರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ದೆಹಲಿ ಸಾರಿಗೆ ಇಲಾಖೆಯು ತನ್ನ ಆದೇಶದಲ್ಲಿ ವಿವಿಧ ಆರ್‌ಟಿಒ ಕಚೇರಿಗಳು ಹಾಗೂ ಫಿಟ್‌ನೆಸ್ ಕೇಂದ್ರಗಳಲ್ಲಿ ಉಂಟಾಗುತ್ತಿರುವ ಭಾರೀ ಜನದಟ್ಟಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇಲಾಖೆಯು ಇದನ್ನು ಅರ್ಜಿದಾರರು ಹಾಗೂ ಸಾರ್ವಜನಿಕ ಸೇವಾ ನೌಕರರ ಭದ್ರತೆಯ ಕಾಳಜಿ ಎಂದು ಕರೆದಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮಾಲಿನ್ಯ ನಿಯಂತ್ರಣಕ್ಕಾಗಿ ಪಿಯುಸಿ (ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ) ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವೆಂದು ಇಲಾಖೆ ತಿಳಿಸಿದೆ.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ದೆಹಲಿಯಲ್ಲಿ ಲರ್ನರ್ ಲೈಸೆನ್ಸ್ ನೀಡುವ ಪ್ರಕ್ರಿಯೆಯನ್ನು ಈಗ ಆನ್‌ಲೈನ್ ಮಾಡಲಾಗಿದೆ. ದೆಹಲಿಯಲ್ಲಿ ಕಲಿಕಾ ಪರವಾನಗಿಗಾಗಿ ಆನ್‌ಲೈನ್ ಅರ್ಜಿಯ ಪ್ರಕ್ರಿಯೆಯನ್ನು ಈ ವರ್ಷದ ಆಗಸ್ಟ್ 11 ರಿಂದ ಆರಂಭಿಸಲಾಯಿತು. ಇದಾದ ನಂತರ ಲರ್ನರ್ ಲೈಸೆನ್ಸ್ ಪಡೆಯಲು ಬಯಸುವವರು ಆನ್‌ಲೈನ್ ಕಲಿಕಾ ಪರವಾನಗಿಗಾಗಿ ಮನೆಯಲ್ಲಿ ಕುಳಿತೇ ಅರ್ಜಿ ಸಲ್ಲಿಸುತ್ತಿದ್ದಾರೆ.

ಹಲವು ಕಷ್ಟಗಳ ನಡುವೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಶಸ್ವಿಯಾದ ಕುಬ್ಜ ವ್ಯಕ್ತಿ

ಮಾಹಿತಿಗಳ ಪ್ರಕಾರ, ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವಾಗ, ಆನ್‌ಲೈನ್ ಪರೀಕ್ಷೆಯ ದಿನಾಂಕ ಹಾಗೂ ಸಮಯದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ. ಇದರ ನಂತರ ಅರ್ಜಿದಾರರು ನಿಗದಿತ ಸಮಯದಲ್ಲಿ ಮನೆಯಲ್ಲಿ ಕುಳಿತು ಆನ್‌ಲೈನ್ ಮೂಲಕ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಆಧಾರ್ ಸಕ್ರಿಯಗೊಳಿಸಿದ ಪ್ಲಾಟ್ ಫಾರಂ ಆಗಿದ್ದು, ಇದರಲ್ಲಿ ಅರ್ಜಿದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಸಾಫ್ಟ್‌ವೇರ್ ಗುರುತಿಸುತ್ತದೆ.

ಗಮನಿಸಿ: ಮೊದಲ ಆರು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Hyderabad man becomes first dwarf man to get driving license in india details
Story first published: Monday, December 6, 2021, 13:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X