ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ದೆಹಲಿಯಲ್ಲಿ ನವೆಂಬರ್ 1 ರಿಂದ ಸಾಲದ ಮೇಲೆ ವಾಹನವನ್ನು ಖರೀದಿಸುವವರು ಹೈಪೋಥಿಕೇಶನ್ ಪ್ರಕ್ರಿಯೆಗೆ ಯಾವುದೇ ಭೌತಿಕ ದಾಖಲೆಗಳನ್ನು ಬ್ಯಾಂಕಿಗೆ ಹೋಗಿ ಸಲ್ಲಿಸುವ ಅಗತ್ಯವಿಲ್ಲ. ವಾಹನಗಳ ಹೈಪೋಥಿಕೇಶನ್ ಟರ್ಮಿನೇಷನ್ (ಹೆಚ್‌ಪಿ‌ಟಿ) ಪ್ರಕ್ರಿಯೆಯನ್ನು ಸುಲಭಗೊಳಿಸುವ ಸಲುವಾಗಿ, ದೆಹಲಿ ಸರ್ಕಾರವು ಎಲ್ಲಾ ಪ್ರಮುಖ ಬ್ಯಾಂಕುಗಳು ಹಾಗೂ ವಾಹನ ಸಾಲಗಳನ್ನು ಒದಗಿಸುವ ಹಣಕಾಸು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಹೈಪೋಥಿಕೇಶನ್ ಪ್ರಕ್ರಿಯೆಯ ಅಡಿಯಲ್ಲಿ, ಬ್ಯಾಂಕ್ ಸಾಲದ ಮೇಲೆ ಖರೀದಿಸಿದ ವಾಹನಗಳ ದಾಖಲೆಗಳನ್ನು ಅಡಮಾನವೆಂದು ಪ್ರದರ್ಶಿಸಲಾಗುತ್ತದೆ. ಸಾಲ ಮರುಪಾವತಿಸಿದ ನಂತರ ಬ್ಯಾಂಕ್ ಹಾಗೂ ಸಾರಿಗೆ ಇಲಾಖೆಗಳ ಪ್ರಕ್ರಿಯೆಯ ಮೂಲಕ ವಾಹನದ ಮಾಲೀಕತ್ವವನ್ನು ಖರೀದಿದಾರರಿಗೆ ಮರು ಸ್ಥಾಪಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಈ ವರ್ಷದ ನವೆಂಬರ್ 1 ರಿಂದ ಸುಲಭಗೊಳಿಸಲಾಗುತ್ತದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಬ್ಯಾಂಕ್‌ಗಳು ಹಾಗೂ ಸಾಲ ನೀಡುವ ಹಣಕಾಸು ಸಂಸ್ಥೆಗಳು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸುವ ಒಟಿಪಿ ಮೂಲಕ ಸಾಫ್ಟ್‌ವೇರ್ ನಲ್ಲಿ ಎಲ್ಲಾ ದಾಖಲೆಗಳನ್ನು ಹಾಗೂ ಎನ್‌ಒಸಿಯನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸಬೇಕು. ಈ ಪ್ರಕ್ರಿಯೆಯಲ್ಲಿ ಗ್ರಾಹಕರು ಭೌತಿಕವಾಗಿ ಸಹಿ ಮಾಡುವ ಅಗತ್ಯವಿಲ್ಲ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಸಾರಿಗೆ ಇಲಾಖೆಯು ಈಗಾಗಲೇ ಐಸಿಐಸಿಐ ಬ್ಯಾಂಕ್‌ನೊಂದಿಗೆ ಆಟೋಮ್ಯಾಟಿಕ್ ಹೈಪೋಥೆಕೇಶನ್‌ಗಾಗಿ ಪಾಲುದಾರಿಕೆ ಮಾಡಿಕೊಂಡಿದ್ದು, ಫೇಸ್ ಲೆಸ್ ಸೇವೆಗಳನ್ನುಪರಿಚಯಿಸಿದ ನಂತರ, ವಾಹನ ಸಾಲ ಹೊಂದಿರುವ 7,800 ಕ್ಕೂ ಹೆಚ್ಚು ಅರ್ಜಿದಾರರ ಮಾಹಿತಿಯನ್ನು ಪಡೆದುಕೊಂಡಿದೆ. ನವೆಂಬರ್ ಆರಂಭದಿಂದ, ಯಾವುದೇ ಹಣಕಾಸು ಸಂಸ್ಥೆಯಿಂದ ವಾಹನ ಸಾಲ ಪಡೆಯುವ ಅರ್ಜಿದಾರರು ಬ್ಯಾಂಕ್‌ಗೆ ಭೇಟಿ ನೀಡಿ ಭೌತಿಕ ರೂಪದಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಸಾಲವನ್ನು ಪಡೆದ ನಂತರ ಅಥವಾ ಪಾವತಿಸಿದ ನಂತರ ಆ ಮಾಹಿತಿಯನ್ನು ಬ್ಯಾಂಕ್ ನೇರವಾಗಿ ವಾಹನದ ಡೇಟಾಬೇಸ್‌ಗೆ ವರ್ಗಾಯಿಸುತ್ತದೆ. ಇದರಿಂದ ಸಾರಿಗೆ ಇಲಾಖೆಯು ಹೆಚ್‌ಪಿ‌ಟಿ ಸೇವೆಯನ್ನು ಪರಿಶೀಲಿಸಲು ಹಾಗೂ ಅನುಮೋದಿಸಲು ನೆರವಾಗುತ್ತದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಆನ್‌ಲೈನ್‌ ಮೂಲಕ ಡ್ರೈವಿಂಗ್ ಲೈಸೆನ್ಸ್

ಕರೋನಾ ಸಾಂಕ್ರಾಮಿಕದಿಂದಾಗಿ ಹಲವು ಸೇವೆಗಳು ಅಸ್ತವ್ಯಸ್ತಗೊಂಡಿವೆ ಅಥವಾ ವಿಳಂಬವಾಗಿವೆ. ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಆಧಾರ್ ಕಾರ್ಡ್ ಸೇರಿದಂತೆ ಹಲವು ಸೇವೆಗಳು ಅಸ್ತವ್ಯಸ್ತಗೊಂಡಿವೆ. ಈ ಪರಿಸ್ಥಿತಿಯಲ್ಲಿ ದೆಹಲಿ ಸರ್ಕಾರವು ಆನ್‌ಲೈನ್‌ ಮೂಲಕ ಡ್ರೈವಿಂಗ್ ಲೈಸೆನ್ಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಇದರಿಂದ ದೆಹಲಿಯ ಜನರು ಮನೆಯಲ್ಲಿಯೇ ಕುಳಿತು ಲರ್ನರ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಬಹುದು. ಲರ್ನರ್ ಲೈಸೆನ್ಸ್ ಪಡೆಯಲು ಸಹ ಆರ್‌ಟಿಒಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತೇ ಲರ್ನರ್ ಲೈಸೆನ್ಸ್ ಪ್ರತಿಯನ್ನು ಪಡೆಯಬಹುದು. ದೆಹಲಿ ಸಾರಿಗೆ ಇಲಾಖೆಯ ಈ ಯೋಜನೆಯು ಆಗಸ್ಟ್ 11 ರಿಂದ ಆರಂಭವಾಗಿದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಮಾಹಿತಿಗಳ ಪ್ರಕಾರ ಈ ಯೋಜನೆಯ ಪ್ರಯೋಗವು ದೆಹಲಿಯ ಸರಾಯ್ ಕಾಲ್ ಖಾನ್ ಹಾಗೂ ದಕ್ಷಿಣ ದೆಹಲಿಯ ವಸಂತ್ ವಿಹಾರ್ ಆರ್‌ಟಿಒಗಳಲ್ಲಿ ಆರಂಭವಾಗಿದೆ. ದೆಹಲಿಯ ಇತರ ಎಲ್ಲ ಆರ್‌ಟಿಒ ಕಚೇರಿಗಳಲ್ಲಿ ಈ ಕೆಲಸವನ್ನು ಶೀಘ್ರದಲ್ಲೇ ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ವರದಿಯಾಗಿದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ರಾತ್ರಿ ವೇಳೆ ಕೂಡ ಡ್ರೈವಿಂಗ್ ಟೆಸ್ಟ್ ನೀಡಬಹುದು

ದೆಹಲಿಯಲ್ಲಿ ಡ್ರೈವಿಂಗ್ ಟೆಸ್ಟ್'ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಸಾರಿಗೆ ಸಂಸ್ಥೆ (ಡಿಟಿಸಿ) ಈಗ ರಾತ್ರಿ 10 ಗಂಟೆಯವರೆಗೆ ಚಾಲನಾ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಇದಕ್ಕಾಗಿ ಎಲ್ಲಾ ವಲಯ ಸಾರಿಗೆ ಪ್ರಾಧಿಕಾರಗಳ ಟೆಸ್ಟ್ ಟ್ರ್ಯಾಕ್‌ಗಳಲ್ಲಿ ಹೆಚ್ಚಿನ ಸಾಮರ್ಥ್ಯದ ದೀಪಗಳನ್ನು ಅಳವಡಿಸಲಾಗಿದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಅಳವಡಿಸಲಾಗಿರುವ ದೀಪಗಳು ಹಗಲು ಬೆಳಕಿನಂತೆ ಪ್ರಕಾಶಮಾನವಾಗಿರುತ್ತವೆ. ಇದರ ಹೊರತಾಗಿ ಡ್ರೈವಿಂಗ್ ಟೆಸ್ಟ್'ಗೆ ಹೆಚ್ಚು ಅವಧಿಕಾಯುವುದನ್ನು ಕಡಿಮೆ ಮಾಡಲು ಭಾನುವಾರಗಳಂದು ಸಹ ಡ್ರೈವಿಂಗ್ ಟೆಸ್ಟ್ ನಡೆಸಲಾಗುತ್ತದೆ. ದೆಹಲಿ ಸಾರಿಗೆ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದರು.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ದೆಹಲಿ ಸಾರಿಗೆ ಕಚೇರಿಗಳ ಸೇವೆಗಳನ್ನು ಪಾರದರ್ಶಕವಾಗಿ ನೀಡುವ ಸಲುವಾಗಿ ಹಾಗೂ ಸಾರ್ವಜನಿಕರು ವಿನಾ ಕಾರಣ ಸಾರಿಗೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ದೆಹಲಿ ರಾಜ್ಯ ಸರ್ಕಾರವು ಅಲ್ಲಿನ ಸಾರಿಗೆ ಇಲಾಖೆಯ ಬಹುತೇಕ ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಇದರಿಂದ ಸಾರ್ವಜನಿಕರು ಡ್ರೈವಿಂಗ್ ಟೆಸ್ಟ್ ನೀಡಲು ಹಾಗೂ ವಾಹನಗಳ ಫಿಟ್ ನೆಸ್ ಪರೀಕ್ಷೆಗಾಗಿ ಮಾತ್ರ ಸಾರಿಗೆ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಬೇಕಾಗುತ್ತದೆ.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ತೀರಾ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರವು ವಾಯು ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವು ವರ್ಷಗಳ ಹಿಂದೆ ವಾಯು ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ವಾಹನಗಳಿಗಾಗಿ ಸಮ ಬೆಸ ನಿಯಮವನ್ನು ಜಾರಿಗೆ ತರಲಾಗಿತ್ತು.

ನವೆಂಬರ್ 1ರಿಂದ ಸುಲಭವಾಗಲಿದೆ ಹೈಪೋಥಿಕೇಶನ್ ಟರ್ಮಿನೇಷನ್ ಪ್ರಕ್ರಿಯೆ

ಈಗ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತನ್ನದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯನ್ವಯ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸರ್ಕಾರವು ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಿದೆ. ದೆಹಲಿ ಸರ್ಕಾರದ ಹಲವು ಇಲಾಖೆಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Hypothecation termination process to become simple from 1st november details
Story first published: Friday, September 17, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X