ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹ್ಯುಂಡೈ(Hyundai) ಕಂಪನಿಯು ಕಳೆದ ಜೂನ್‌ನಲ್ಲಿ ತನ್ನ ಬಹುನೀರಿಕ್ಷಿತ ಅಲ್ಕಾಜರ್(Alcazar) ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತೊಂದು ಹೊಸ ವೆರಿಯೆಂಟ್ ಪರಿಚಯಿಸಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಅಲ್ಕಾಜರ್ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿ ಹಲವಾರು ಹೊಸ ತಾಂತ್ರಿಕ ಸೌಲಭ್ಯ, ಅತ್ಯುತ್ತಮ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆಯೊಂದಿಗೆ ಮಾರಾಟ ಮಾರಾಟವಾಗುತ್ತಿದ್ದು, ಹೊಸ ಕಾರಿನ ಸಿಗ್ನೆಚರ್ ಆವೃತ್ತಿಯಲ್ಲಿ ಹೊಸದಾಗಿ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ 7 ಸೀಟರ್ ಸೌಲಭ್ಯದ ಸಿಗ್ನೆಚರ್(ಆಪ್ಷನ್) ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಸಿಗ್ನೆಚರ್ ಮಾದರಿಯಲ್ಲಿ ಈ ಹಿಂದೆ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 6 ಸೀಟರ್ ಮಾದರಿಯನ್ನು ಮಾತ್ರವೇ ಬಿಡುಗಡೆ ಮಾಡಿದ್ದ ಹ್ಯುಂಡೈ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಇದೀಗ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 7 ಸೀಟರ್ ಸೌಲಭ್ಯ ಹೊಂದಿರುವ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಸಿಗ್ನೆಚರ್(ಒ) 7 ಸೀಟರ್ ಪೆಟ್ರೋಲ್ ಆಟೋಮ್ಯಾಟಿಕ್ ರೂಪಾಂತರವನ್ನು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 17.93 ಲಕ್ಷಕ್ಕೆ ಬಿಡುಗಡೆ ಮಾಡಲಾಗಿದ್ದು, ಹೊಸ ಆವೃತ್ತಿಯು ರೂ.30 ಸಾವಿರದಷ್ಟು ಕಡಿಮೆ ಬೆಲೆಯೊಂದಿಗೆ 7 ಸೀಟರ್ ಆಯ್ಕೆ ನೀಡಲಾಗಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಅಲ್ಕಾಜರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳೊಂದಿಗೆ ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣ ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಇನ್ನು ಹೊಸ ಅಲ್ಕಾಜರ್ ಕಾರು ಅತ್ಯುತ್ತಮ ಫೀಚರ್ಸ್‌, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಆರಂಭಿಕ ಮಾದರಿಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯ ರೂ. 20.14 ಲಕ್ಷ ಬೆಲೆ ಹೊಂದಿದ್ದು, 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಕಾರು 4,500 ಎಂಎಂ ಉದ್ದ, 1,790 ಎಂಎಂ ಅಗಲ, 1,675 ಎಂಎಂ ಎತ್ತರ ಮತ್ತು 2,760 ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದ್ದು, ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿರುವ ಹೊಸ ಅಲ್ಕಾಜರ್‌ನಲ್ಲಿ ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಕಾರಿನಲ್ಲಿ ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ, ಬಾಡಿ ಕ್ಲ್ಯಾಡಿಂಗ್ ಹೊಂದಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಜೊತೆಗೆ ಹೊಸ ಕಾರಿನಲ್ಲಿ 10.25 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲ್ಯೂ ಲಿಂಕ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಕಮಾಂಡರ್, ಮೂರು ಸಾಲಿಗೂ ಎಸಿ ವೆಂಟ್ಸ್, ಬ್ಲೈಂಡ್ ವಿಂಡೋ ಮಾನಿಟರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಲ್ಯಾಟ್ ಟೇಬಲ್, ಆಟೋ ಏರ್ ಪ್ಯೂರಿಫೈರ್, ರಿಮೋಟ್ ಎಂಜಿನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳಿವೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಕಾರಿನಲ್ಲಿ ಕಂಪನಿಯು ಕಂಫರ್ಟ್, ಇಕೋ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ನೀಡಿದ್ದು, ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಕಾರಿನಲ್ಲಿರುವ 2.0-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮಾದರಿಗಳು ಉತ್ತಮ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ಪೆಟ್ರೋಲ್ ಮಾದರಿಯು 159-ಬಿಎಚ್‌ಪಿ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 115-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಎರಡು ಎಂಜಿನ್‌ಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಿದ್ದು, ಪೆಟ್ರೋಲ್ ಮಾದರಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 14.5 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 14.5 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ 1.5 ಲೀಟರ್ ಡೀಸೆಲ್ ಮಾದರಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 20.4 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 18.1 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಇದರೊಂದಿಗೆ ಹ್ಯುಂಡೈ ಕಂಪನಿಯು ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವು ವೆರಿಯೆಂಟ್‌ಗಳಲ್ಲಿ ಬದಲಾವಣೆಗಳನ್ನು ಸಹ ಪರಿಚಯಿಸಿದ್ದು, ಆರಂಭಿಕ ಮಾದರಿಯಲ್ಲಿದ್ದ ಪ್ರಮುಖ ಎರಡು ವೆರಿಯೆಂಟ್‌ಗಳ ಮಾರಾತಗೊಟ ಸ್ಥಗಿಳಿಸಿದೆ.

ಅಲ್ಕಾಜರ್ ಎಸ್‌ಯುವಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ಅಲ್ಕಾಜರ್ ಕಾರಿನ ಪ್ರೆಸ್ಟೀಜ್ 6-ಸೀಟರ್ ಪೆಟ್ರೋಲ್ ಮ್ಯಾನುವಲ್ ರೂಪಾಂತರವನ್ನು ಮತ್ತು ಪ್ರೆಸ್ಟೀಜ್ (ಆಪ್ಷನ್) 6 ಸೀಟರ್ ಪೆಟ್ರೋಲ್ ಸ್ವಯಂಚಾಲಿತ ರೂಪಾಂತರವನ್ನು ಹಿಂಪಡೆದಿದೆ. ಆರಂಭಿಕ ಮಾದರಿಗಳ ಸ್ಥಗಿತದ ಕುರಿತಾಗಿ ಕಂಪನಿಯು ಯಾವುದೇ ನಿಖರ ಮಾಹಿತಿ ಹಂಚಿಕೊಂಡಿಲ್ಲವಾದರೂ ಡೀಲರ್ಸ್‌‌ಗಳ ಮಾಹಿತಿಯೆಂತೆ ಆರಂಭಿಕ ಮಾದರಿಗಳಿಂತ ಹೈ ಎಂಡ್ ಮಾದರಿಗಳಿಗಾಗಿ ಹೆಚ್ಚಿನ ಬೇಡಿಕೆಯಿರುವುದರಿಂದ ಪೆಟ್ರೋಲ್ 6 ಸೀಟರ್ ಮಾದರಿಗಳನ್ನು ತೆಗೆದುಹಾಕಿರುವ ಬಗೆಗೆ ಮಾಹಿತಿ ಲಭ್ಯವಾಗಿದೆ.

Most Read Articles

Kannada
English summary
Hyundai alcazar new signature o 7 seater at variant launched details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X