ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಹ್ಯುಂಡೈ ಕಂಪನಿಯು ತನ್ನ ಕಾರುಗಳನ್ನು ರೈಲಿನ ಮೂಲಕ ನೇಪಾಳಕ್ಕೆ ರಫ್ತು ಮಾಡುತ್ತಿದೆ. ಇತ್ತೀಚೆಗೆ ಕಂಪನಿಯು ಮೊದಲ ಹಂತದಲ್ಲಿ 125 ಕಾರುಗಳನ್ನು ರವಾನಿಸಿದೆ. ಚೆನ್ನೈನಲ್ಲಿರುವ ಕಂಪನಿಯ ಉತ್ಪಾದನಾ ಘಟಕದ ಬಳಿಯ ರೈಲ್ವೆ ನಿಲ್ದಾಣದಿಂದ ಈ ಕಾರುಗಳನ್ನು ರಫ್ತು ಮಾಡಲಾಗಿದೆ.

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಹ್ಯುಂಡೈ ಕಂಪನಿಯು ನೇಪಾಳದಲ್ಲಿ ಹಲವಾರು ಕಾರುಗಳನ್ನು ಮಾರಾಟ ಮಾಡುತ್ತದೆ. ರೈಲ್ವೆ ಮೂಲಕ ರಫ್ತು ಮಾಡುವುದರಿಂದ ಮಾಲಿನ್ಯವು ಕಡಿಮೆಯಾಗುತ್ತದೆ ಎಂದು ಹ್ಯುಂಡೈ ಕಂಪನಿ ಹೇಳಿದೆ. ರೈಲಿನ ಮೂಲಕ 8 ದಿನಗಳ ಬದಲಿಗೆ 5 ದಿನಗಳಲ್ಲಿ ಕಾರುಗಳನ್ನು ರಫ್ತು ಮಾಡಬಹುದಾಗಿದೆ.

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ರಸ್ತೆ ಮೂಲಕ ರಫ್ತು ಮಾಡಿದರೆ ಮಾಲಿನ್ಯ ಉಂಟಾಗುತ್ತಿತ್ತು. ರೈಲಿನ ಮೂಲಕ ರಫ್ತು ಮಾಡುತ್ತಿರುವುದರಿಂದ 20,260 ಟನ್ ಕಾರ್ಬನ್ ಡೈ ಆಕ್ಸೈಡ್ ಹೊರ ಹೊಮ್ಮುವುದು ತಪ್ಪುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ 14%ನಷ್ಟು ಕಾರುಗಳನ್ನು ರೈಲು ಮಾರ್ಗದ ಮೂಲಕ ಮಾರಾಟ ಮಾಡುತ್ತಿದೆ. ಜೊತೆಗೆ ಹಡಗುಗಳ ಮೂಲಕವೂ ಹಲವು ಪ್ರದೇಶಗಳಿಗೆ ಕಾರುಗಳನ್ನು ರವಾನಿಸಲಾಗುತ್ತದೆ.

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಹ್ಯುಂಡೈ ಕಂಪನಿಯು ಭಾರತದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾರುಗಳನ್ನು ರಫ್ತು ಮಾಡುತ್ತದೆ. ಕಂಪನಿಯು ಇಲ್ಲಿಂದ 88 ದೇಶಗಳಿಗೆ ಕಾರುಗಳನ್ನು ರಫ್ತು ಮಾಡುತ್ತದೆ. ಕಂಪನಿಯು 2020ರ ಜನವರಿ ವೇಳೆಗೆ 3 ಮಿಲಿಯನ್ ಕಾರುಗಳನ್ನು ರಫ್ತು ಮಾಡಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಈ ಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿದೆ. ಕಂಪನಿಯ ಹೊಸ ಮಾದರಿಗಳನ್ನು ಸಹ ರಫ್ತು ಮಾಡುತ್ತದೆ. ಕಂಪನಿಯು ಕೆಲವು ತಿಂಗಳ ಹಿಂದೆ ಹೊಸ ಐ 20 ಕಾರನ್ನು ಬಿಡುಗಡೆಗೊಳಿಸಿತ್ತು. ಕೆಲ ತಿಂಗಳ ನಂತರ ಈ ಕಾರ್ ಅನ್ನು ಸಹ ರಫ್ತು ಮಾಡಲಾಯಿತು.

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಕಂಪನಿಯು ಮೊದಲ ಹಂತದಲ್ಲಿ 180 ಕಾರುಗಳನ್ನು ದಕ್ಷಿಣ ಆಫ್ರಿಕಾ, ಚಿಲಿ ಹಾಗೂ ಪೆರು ದೇಶಗಳಿಗೆ ರಫ್ತು ಮಾಡಿದೆ. ಆದರೆ ಭಾರತದಲ್ಲಿ ಈ ಕಾರಿನ ವಿತರಣೆಯನ್ನು ಪಡೆಯಲು ಹಲವು ತಿಂಗಳು ಕಾಯಬೇಕಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಹ್ಯುಂಡೈ ಕಂಪನಿಯು 2007ರಿಂದ ಭಾರತದಿಂದ ಕಾರುಗಳನ್ನು ರಫ್ತು ಮಾಡುತ್ತಿದೆ. ಮೊದಲೇ ಹೇಳಿದ ಹಾಗೆ ಹ್ಯುಂಡೈ ಕಂಪನಿಯು ಭಾರತದಲ್ಲಿ ತಯಾರಿಸಿದ ಕಾರುಗಳನ್ನು 88 ದೇಶಗಳಿಗೆ ರಫ್ತು ಮಾಡುತ್ತದೆ

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಕಂಪನಿಯು ಭಾರತದಲ್ಲಿ ಉತ್ಪಾದನೆಯಾಗುವ ಹ್ಯುಂಡೈ ಸ್ಯಾಂಟ್ರೊ, ಗ್ರ್ಯಾಂಡ್ ಐ 10, ಗ್ರ್ಯಾಂಡ್ ಐ 10 ನಿಯೋಸ್, ಆಕ್ಸೆಂಟ್, ಒರಾ, ನ್ಯೂ ಐ 20, ಐ 20 ಆಕ್ಟಿವ್, ವರ್ನಾ, ವೆನ್ಯೂ, ಕ್ರೆಟಾ ಸೇರಿದಂತೆ 10 ಮಾದರಿಗಳನ್ನು ರಫ್ತು ಮಾಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲಾಗುತ್ತಿದೆ. ಹ್ಯುಂಡೈ ಕಂಪನಿಯು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದೆ. 1999ರಲ್ಲಿ ಹ್ಯುಂಡೈ ಕಂಪನಿಯು ನೇಪಾಳಕ್ಕೆ 20 ಯುನಿಟ್ ಸ್ಯಾಂಟ್ರೊ ಕಾರುಗಳನ್ನು ರಫ್ತು ಮಾಡಿತ್ತು.

ರೈಲು ಮೂಲಕ ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ ಕಂಪನಿ

2004ರ ವೇಳೆಗೆ 1 ಲಕ್ಷ ಯೂನಿಟ್ ವಾಹನಗಳನ್ನು ರಫ್ತು ಮಾಡಿದ್ದ ಕಂಪನಿಯು 2008ರ ಮಾರ್ಚ್ ವೇಳೆಗೆ 5 ಲಕ್ಷ ಯೂನಿಟ್ ವಾಹನಗಳನ್ನು ರಫ್ತು ಮಾಡಿತ್ತು. 2010ರಲ್ಲಿ 10 ಲಕ್ಷ ಹಾಗೂ 2014ರಲ್ಲಿ 20 ಲಕ್ಷ ಯುನಿಟ್'ಗಳನ್ನು ರಫ್ತು ಮಾಡಿತ್ತು. ಕಂಪನಿಯು ಕೇವಲ 33 ಸೆಕೆಂಡುಗಳಲ್ಲಿ ಕಾರನ್ನು ಜೋಡಿಸುತ್ತದೆ ಎಂದು ತಿಳಿದು ಬಂದಿದೆ.

Most Read Articles

Kannada
English summary
Hyundai company exports cars through train to Nepal. Read in Kannada.
Story first published: Thursday, January 14, 2021, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X