ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಹ್ಯುಂಡೈ ಕ್ರೆಟಾ ತನ್ನ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಈ ಕಾರಿನ ಎಂಟ್ರಿ ಲೆವೆಲ್ ಮಾದರಿಗಳಿಗಿಂತ ಹೈ ಎಂಡ್ ಮಾದರಿಗಳಾದ ಎಸ್‌ಎಕ್ಸ್ ಹಾಗೂ ಎಸ್‌ಎಕ್ಸ್ (ಒ) ಮಾದರಿಗಳಿಗೆ ಹೆಚ್ಚು ಬೇಡಿಕೆ ಇದೆ.

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಕ್ರೆಟಾ ಹೈ ಎಂಡ್ ಮಾದರಿಗಳಲ್ಲಿ ಹೆಚ್ಚು ಫೀಚರ್'ಗಳಿರುವುದರಿಂದ ಈ ಮಾದರಿಗಳಿಗೆ ಸಹಜವಾಗಿಯೇ ಹೆಚ್ಚು ಬೇಡಿಕೆ ಇದೆ. ಕ್ರೆಟಾದ ಎಸ್‌ಎಕ್ಸ್ (ಒ) ಡೀಸೆಲ್ ಆಟೋಮ್ಯಾಟಿಕ್ ಮಾದರಿಯ ಆನ್-ರೋಡ್ ಬೆಲೆ ರೂ.20 ಲಕ್ಷಗಳಾಗಿದೆ. ಕ್ರೆಟಾ ಕಾರಿನ ಮೂಲ ಮಾದರಿಯನ್ನು ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಮಾಡಲಾಗಿದೆ.

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಇತ್ತೀಚೆಗೆ ಈ ರೀತಿ ಕಸ್ಟಮೈಸ್ ಮಾಡಲಾದ ಹ್ಯುಂಡೈ ಕ್ರೆಟಾದ ವೀಡಿಯೊವನ್ನು ಯೂಟ್ಯೂಬ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಎಂಟ್ರಿ-ಲೆವೆಲ್ ಇ ಮಾದರಿಯನ್ನು ಕ್ರೆಟಾದ ಹೈ ಎಂಡ್ ಮಾದರಿಯಾದ ಎಸ್‌ಎಕ್ಸ್ (ಒ) ರೀತಿಯಲ್ಲಿ ಬದಲಿಸಿರುವುದನ್ನು ಕಾಣಬಹುದು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಈ ರೀತಿ ಕಸ್ಟಮೈಸ್ ಮಾಡಲು ರೂ.2.40 ಲಕ್ಷ ಖರ್ಚು ಮಾಡಲಾಗಿದೆ. ಕಸ್ಟಮೈಸ್ ಮಾಡಲು ಹ್ಯುಂಡೈ ಕಂಪನಿಯ ಬಿಡಿ ಭಾಗಗಳನ್ನೇ ಬಳಸಲಾಗಿದೆ. ಕಸ್ಟಮೈಸ್'ಗೊಂಡ ಕಾರು ಕ್ರೆಟಾದ ಡೀಸೆಲ್ ಮ್ಯಾನುಯಲ್ ಆವೃತ್ತಿಯಾಗಿದೆ.

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಈ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.51 ಲಕ್ಷಗಳಾಗಿದೆ. ಕಸ್ಟಮೈಸ್ ಮಾಡಲಾದ ಈ ಕಾರ್ ಅನ್ನು ಅದರ ಮಾಲೀಕರು ರೂ.11.90 ಲಕ್ಷ ನೀಡಿ ಖರೀದಿಸಿದ್ದರು. ಅವರು ಕಸ್ಟಮೈಸ್ ಮಾಡಲು ರೂ.2.40 ಲಕ್ಷ ಮಾಡಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಇದರಿಂದಾಗಿ ರೂ.14.30 ಲಕ್ಷ ವೆಚ್ಚದಲ್ಲಿ ಹೈ ಎಂಡ್ ಎಸ್‌ಎಕ್ಸ್ (ಒ) ಮಾದರಿಯನ್ನು ಪಡೆದಂತಾಗಿದೆ. ಎಸ್‌ಎಕ್ಸ್ (ಒ) ಮಾದರಿಯ ಆನ್ ರೋಡ್ ಬೆಲೆ ಗ್ವಾಲಿಯರ್‌ನಲ್ಲಿ ರೂ.18.68 ಲಕ್ಷಗಳಾಗಿದೆ.

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಕಸ್ಟಮೈಸ್ ಮಾಡಲಾದ ಹ್ಯುಂಡೈ ಕ್ರೆಟಾ ಇ ಮಾದರಿಯಲ್ಲಿ ಎಸ್‌ಎಕ್ಸ್ (ಒ) ಮಾದರಿಯಲ್ಲಿರುವಂತಹ ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‌ಲ್ಯಾಂಪ್‌, ಟೇಲ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಈ ಕಾರಿನಲ್ಲಿ ಎಸ್‌ಎಕ್ಸ್ (ಒ) ಮಾದರಿಯಲ್ಲಿ ಮಾತ್ರ ಲಭ್ಯವಿರುವಂತಹ ಡೈಮಂಡ್ ಕಟ್ 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌, ಟರ್ನ್ ಇಂಡಿಕೇಟರ್ ಹಾಗೂ ಪಡಲ್ ಲ್ಯಾಂಪ್'ಗಳನ್ನು ಸಹ ಅಳವಡಿಸಲಾಗಿದೆ.

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಈ ಕಾರಿನಲ್ಲಿ ಆಫ್ಟರ್ ಮಾರ್ಕೆಟ್ ಗ್ರಿಲ್ ಅಳವಡಿಸಲಾಗಿದೆ. ಗ್ರಾಹಕರು ಈ ಗ್ರಿಲ್ ಬದಲು ಕ್ರೋಮ್ ಸ್ಲೇಟೆಡ್ ಗ್ರಿಲ್ ಅಥವಾ ಟರ್ಬೊ-ಪೆಟ್ರೋಲ್ ಮಾದರಿಗಳಲ್ಲಿರುವ ಕಪ್ಪು ಬಣ್ಣದ ಗ್ರಿಲ್'ಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಈ ಕಾರಿನ ಹಿಂಭಾಗದಲ್ಲಿರುವ ಬಂಪರ್ ಪ್ರೊಟೆಕ್ಟರ್'ನಲ್ಲಿಯೂ ಹ್ಯುಂಡೈ ಬಿಡಿಭಾಗಗಳನ್ನೇ ಬಳಸಲಾಗಿದೆ. ಈ ಕಾರಿನ ಇಂಟಿರಿಯರ್'ನಲ್ಲಿಯೂ ಹಲವಾರುಬದಲಾವಣೆಗಳನ್ನು ಮಾಡಲಾಗಿದೆ.

ಕಸ್ಟಮೈಸ್ ಮಾಡಲಾದ ಈ ಕಾರಿನ ಇಂಟಿರಿಯರ್'ನಲ್ಲಿ ಹೈ ಮಾದರಿಯಲ್ಲಿರುವಂತಹ ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಅಡ್ಜಸ್ಟಬಲ್ ಒಆರ್‌ವಿ‌ಎಂ, 10.25-ಇಂಚಿನ ಆಫ್ಟರ್ ಮಾರ್ಕೆಟ್ ಇನ್ಫೋಟೆನ್'ಮೆಂಟ್ ಸಿಸ್ಟಂ ಅಳವಡಿಸಲಾಗಿದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಹೈ ಎಂಡ್ ಮಾದರಿಯಂತೆ ಕಸ್ಟಮೈಸ್ ಆದ ಕ್ರೆಟಾ ಮೂಲ ಮಾದರಿ ಕಾರು

ಇದರ ಜೊತೆಗೆ ಈ ಕಾರಿನಲ್ಲಿ ಹೊಸ ಲೆದರ್ ಸೀಟ್, ಬೂಟ್‌ನಲ್ಲಿ ಇನ್ಫಿನಿಟಿ ಸಬ್-ವೂಫರ್ ಹೊಂದಿರುವ ಅಡ್ವಾನ್ಸ್ದ್ ಸೌಂಡ್ ಸಿಸ್ಟಂ ಅಳವಡಿಸಲಾಗಿದೆ. ಈ ಎಲ್ಲಾ ಭಾಗಗಳನ್ನು ಗ್ರಾಹಕರ ಆಯ್ಕೆಗೆ ಅನುಸಾರವಾಗಿ ಕಸ್ಟಮೈಸ್ ಮಾಡಲಾಗಿದೆ.

ಚಿತ್ರಕೃಪೆ: ಅರುಣ್ ಪನ್ವಾರ್

Most Read Articles

Kannada
English summary
Hyundai Creta base variant customized as top end variant. Read in Kannada.
Story first published: Monday, May 17, 2021, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X