ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಿಎಸ್-6 ಕ್ರೆಟಾ ಎಸ್‍ಯುವಿಯನ್ನು ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಹ್ಯುಂಡೈ ಇಂಡಿಯಾ ಕಂಪನಿಯು ಈ ಕ್ರೆಟಾ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಹ್ಯುಂಡೈ ಕ್ರೆಟಾ ಎಸ್‌ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಬಹುಬೇಡಿಕೆಯ ಹ್ಯುಂಡೈ ಕ್ರೆಟಾ ಎಸ್‍ಯುವಿಯನ್ನು ಪಂಜಾಬ್‌ನ ಲುಧಿಯಾನದಲ್ಲಿರುವ ಮೊಂಗಾ ಟೈರ್ಸ್ ನವರು ಅಕರ್ಷಕವಾಗಿ ಮಾಡಿಫೈಗೊಳಿಸಿದ್ದಾರೆ. ಈ ಕ್ರೆಟಾ ಎಸ್‍ಯುವಿಗೆ ಆಫ್ಟರ್ ಮಾರ್ಕೆಂಟ್ ಅಲಾಯ್ ವೀಲ್ ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ 22-ಇಂಚಿನ ಪ್ಲ್ಯಾಟಿ ವ್ಹೀಲ್ ಗಳನ್ನು 5-ಸ್ಪೋಕ್ ವಿನ್ಯಾಸ ಮತ್ತು ಕ್ರೋಮ್-ಫಿನಿಶ್, ಕಡಿಮೆ ಪ್ರೊಫೈಲ್ ಟೈರ್‌ಗಳೊಂದಿಗೆ ಪಡೆಯುತ್ತದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಕಡಿಮೆ ಪ್ರೊಫೈಲ್ ರಬ್ಬರ್ ಹೊಂದಿರುವ ದೊಡ್ಡ ವ್ಹೀಲ್ ಗಳೊಂದಿಗೆ ಕ್ರೆಟಾ ಎಸ್‍ಯುವಿಯು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಮಾಡಿಫೈ ಕ್ರೆಟಾ ಎಸ್‍ಯುವಿ ಇತರ ಬದಲಾವಣೆಗಳು ಮುಂಭಾಗದಲ್ಲಿರುವ ಡಿಸ್ಕ್ ಕಾಲಿಪರ್‌ಗಳಲ್ಲಿ ನಿಯಾನ್ ಗ್ರೀನ್ ಪೇಂಟ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಮಾಡಿಫೈಗೊಂಡ ಈ ಹ್ಯುಂಡೈ ಕ್ರೆಟಾ ದೊಡ್ಡ ವ್ಹೀಲ್ ನೊಂದಿಗೆ ಸ್ಪೋರ್ಟಿ ಲುಕ್ ನಲ್ಲಿ ಮಿಂಚುತ್ತಿದೆ. ಒಟ್ಟಾರೆ ಬದಲಾವಣೆಗಳು ಸಾಕಷ್ಟು ಸೀಮಿತವಾಗಿದ್ದರೂ, ಅವು ವಾಹನದ ನೋಟವನ್ನು ಗಮನಾರ್ಹವಾಗಿ ಹೆಚ್ಚಿಸಲು ನಿರ್ವಹಿಸುತ್ತವೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಈ ಮಿಡ್ ಎಸ್‍ಯುವಿಯು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸುವಲ್ಲಿ ಯಶ್ವಸಿಯಾಗಿದೆ. ಅಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಕ್ರೆಟಾ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿಯಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಹ್ಯುಂಡೈ ಕ್ರೆಟಾ ಎಸ್‍ಯುವಿಯು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಹ್ಯುಂಡೈ ಕ್ರೆಟಾ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ. ಸ್ಪ್ಲಿಟ್ ಹೆಡ್‍‍‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಈ ಎಸ್‍ಯುವಿಯ ಹೆಡ್‌ಲೈಟ್ ಕ್ಲಸ್ಟರ್ ಕೆಳಗೆ ಹೊಸ ಲುಕ್‍‍ನ ಫಾಗ್ ಲ್ಯಾಂಪ್‍‍ಗಳಿವೆ. ಇನ್ನು ಬಂಪರ್‍‍ನ ಕೆಳಗೆ ಸ್ಕಫ್ ಪ್ಲೇಟ್‍‍ಗಳಿವೆ. ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ. ಇದರೊಂದಿಗೆ ಹೊಸ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍‍ಗಳಿರಲಿವೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಈ ಎಸ್‍‍ಯುವಿಯಲ್ಲಿರುವ ಸನ್‍‍ರೂಫ್ ವಾಯ್ಸ್ ಕಮಾಂಡ್‍‍ನಿಂದ ಕಾರ್ಯನಿರ್ವಹಿಸುತ್ತದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಹಾಗೂ ವೈರ್‍‍ಲೆಸ್ ಚಾರ್ಜರ್‍‍ಗಳಿರಲಿವೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಇದರೊಂದಿಗೆ ಹೊಸ ಕ್ರೆಟಾ ಎಸ್‍ಯುವಿಯು ಮೂರು ವಿಭಿನ್ನ ಟ್ರಾಕ್ಷನ್ ಕಂಟ್ರೋಲ್ ಮತ್ತು ಟಿಯರಿಯನ್ ಮೋಡ್‌ಗಳನ್ನು ಹೊಂದಲಿದೆ. ಈ ಹೊಸ ತಾಂತ್ರಕ ಸೌಲಭ್ಯದಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ.

ಮಾಡಿಫೈಗೊಂಡು ಸ್ಪೋರ್ಟಿ ಲುಕ್‍‍‍ನಲ್ಲಿ ಮಿಂಚಿದ ಹ್ಯುಂಡೈ ಕ್ರೆಟಾ ಎಸ್‍ಯುವಿ

ಜನಪ್ರಿಯ ಬಿ‍ಎಸ್-6 ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Image Courtesy: Monga Tyres

Most Read Articles

Kannada
English summary
India’s First New-Gen Hyundai Creta With 22-Inch Rims. Read In Kannada.
Story first published: Friday, March 26, 2021, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X