ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

2020ರ ಡಿಸೆಂಬರ್ ತಿಂಗಳ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಹ್ಯುಂಡೈ ಕಂಪನಿಯ ಕ್ರೆಟಾ ಪ್ರಥಮ ಸ್ಥಾನ ಪಡೆದರೆ, ಕಿಯಾ ಸೆಲ್ಟೋಸ್ ನಂತರದ ಸ್ಥಾನದಲ್ಲಿದೆ. ಈ ಎರಡೂ ಮಾದರಿಗಳ ನಂತರ ಉಳಿದ ಕಂಪನಿಗಳ ಕಾರುಗಳ ಮಾರಾಟದಲ್ಲಿ ದೊಡ್ಡ ಅಂತರವಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಎಂಜಿ ಹೆಕ್ಟರ್ ಎಸ್‌ಯುವಿಯು ಮಾರಾಟದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು ಹಿಂದಿಕ್ಕಿದೆ. ಹ್ಯುಂಡೈ ಕ್ರೆಟಾ ಹೊಸ ಮಾದರಿಯಲ್ಲಿ ಬಿಡುಗಡೆಯಾದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕ್ರೆಟಾ ಎಸ್‌ಯುವಿಯ 10,592 ಯುನಿಟ್‌ಗಳು 2020ರ ಡಿಸೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ. 2019ರ ನವೆಂಬರ್‌ ತಿಂಗಳಿನಲ್ಲಿ 6713 ಯುನಿಟ್‌ಗಳು ಮಾರಾಟವಾಗಿದ್ದವು.

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಡಿಸೆಂಬರ್ ತಿಂಗಳ ಮಾರಾಟ ಪ್ರಮಾಣವು ನವೆಂಬರ್ ತಿಂಗಳ ಮಾರಾಟಕ್ಕಿಂತ 58%ನಷ್ಟು ಹೆಚ್ಚಾಗಿದೆ. ಕ್ರೆಟಾ ಎಸ್‌ಯುವಿಯ ಮಾರಾಟವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಎರಡನೇ ಸ್ಥಾನದಲ್ಲಿರುವ ಕಿಯಾ ಸೆಲ್ಟೋಸ್‌ನ 5608 ಯುನಿಟ್‌ಗಳು ಡಿಸೆಂಬರ್‌ ತಿಂಗಳಿನಲ್ಲಿ ಮಾರಾಟವಾಗಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೋಸ್‌ನ ಮಾರಾಟವು 2019ರ ಡಿಸೆಂಬರ್ ತಿಂಗಳಿಗಿಂತ 21%ನಷ್ಟು ಹೆಚ್ಚಾಗಿದೆ. 2019ರ ಡಿಸೆಂಬರ್ ತಿಂಗಳಿನಲ್ಲಿ 4645 ಯುನಿಟ್‌ಗಳು ಮಾರಾಟವಾಗಿದ್ದವು. ಕಿಯಾ ಮೋಟಾರ್ಸ್ ಕಂಪನಿಯು ಡಿಸೆಂಬರ್‌ನಲ್ಲಿ ಕಡಿಮೆ ಮಾದರಿಗಳನ್ನು ರವಾನಿಸಿದೆ ಎಂದು ಹೇಳಲಾಗಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಮೂರನೇ ಸ್ಥಾನದಲ್ಲಿರುವ ಎಂಜಿ ಮೋಟಾರ್ ಕಂಪನಿಯ ಹೆಕ್ಟರ್ ಮಾರಾಟದಲ್ಲಿ ಮಹೀಂದ್ರಾ ಸ್ಕಾರ್ಪಿಯೋವನ್ನು ಹಿಂದಿಕ್ಕಿದೆ. ಡಿಸೆಂಬರ್‌ ತಿಂಗಳಿನಲ್ಲಿ ಎಂಜಿ ಹೆಕ್ಟರ್ ನ 3430 ಯುನಿಟ್‌ಗಳು ಮಾರಾಟವಾಗಿದ್ದು, 2019ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ 14%ನಷ್ಟು ಹೆಚ್ಚಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

2019ರ ಡಿಸೆಂಬರ್ ತಿಂಗಳಿನಲ್ಲಿ ಹೆಕ್ಟರ್ ಎಸ್‌ಯುವಿಯ 3021 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. 7% ಕುಸಿತದೊಂದಿಗೆ ಸ್ಕಾರ್ಪಿಯೋ ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಎಸ್‌ಯುವಿಯ 3656 ಯುನಿಟ್‌ಗಳು 2019ರ ಡಿಸೆಂಬರ್ ತಿಂಗಳಿನಲ್ಲಿ ಮಾರಾಟವಾಗಿದ್ದವು.

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಕಳೆದ ತಿಂಗಳು ಈ ಎಸ್‌ಯುವಿಯ 3417 ಯುನಿಟ್‌ಗಳು ಮಾರಾಟವಾಗಿವೆ. ಟಾಟಾ ಹ್ಯಾರಿಯರ್ ಮಾರಾಟವು ಸುಧಾರಿಸುತ್ತಿದ್ದು, ಕಳೆದ ತಿಂಗಳು 2223 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಡಿಸೆಂಬರ್'ನಲ್ಲಿ ಈ ಎಸ್‌ಯುವಿಯ ಮಾರಾಟ ಪ್ರಮಾಣವು 52%ನಷ್ಟು ಹೆಚ್ಚಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಮಾರುತಿ ಸುಜುಕಿ ಕಂಪನಿಯ ಎಸ್-ಕ್ರಾಸ್ ಎಸ್‌ಯುವಿಯು ಡಿಸೆಂಬರ್ ತಿಂಗಳಿನಲ್ಲಿ 1185 ಯುನಿಟ್ ಮಾರಾಟವಾಗಿದ್ದು, ಹಿಂದಿನ ವರ್ಷಕ್ಕಿಂತ 21%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಮಹೀಂದ್ರಾ ಎಕ್ಸ್‌ಯುವಿ 500 ಎಸ್‌ಯುವಿಯ ಮಾರಾಟವು 46%ನಷ್ಟು ಕುಸಿದು 750 ಯುನಿಟ್‌ಗಳಿಗೆ ತಲುಪಿದೆ. ಈ ಎಸ್‌ಯುವಿಯ 1399 ಯುನಿಟ್‌ಗಳನ್ನು 2019ರ ಡಿಸೆಂಬರ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ರೆನಾಲ್ಟ್ ಡಸ್ಟರ್'ನ 494 ಹಾಗೂ ಜೀಪ್ ಕಂಪಾಸ್'ನ 384 ಯುನಿಟ್‌ಗಳನ್ನು ಡಿಸೆಂಬರ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ. ಇನ್ನು ಎಂಜಿ ಝಡ್ಎಸ್ ಇವಿಯ 122 ಯುನಿಟ್ ಹಾಗೂ ನಿಸ್ಸಾನ್ ಕಿಕ್ಸ್'ನ 97 ಯುನಿಟ್‌ಗಳು ಡಿಸೆಂಬರ್'ನಲ್ಲಿ ಮಾರಾಟವಾಗಿವೆ.

ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಹ್ಯುಂಡೈ ಕೋನಾದ 24 ಯುನಿಟ್, ಸ್ಕೋಡಾ ಕೈರೋಕ್'ನ 4 ಯುನಿಟ್ ಹಾಗೂ ಫೋಕ್ಸ್‌ವ್ಯಾಗನ್ ಟಿ-ರಾಕ್'ನ 1 ಯುನಿಟ್‌ಗಳು ಡಿಸೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಒಟ್ಟಾರೆಯಾಗಿ ಈ ಸೆಗ್ ಮೆಂಟಿನಲ್ಲಿ 2020ರ ಡಿಸೆಂಬರ್ ತಿಂಗಳಿನಲ್ಲಿ 28,331 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರಮಾಣವು 2019ರ ಡಿಸೆಂಬರ್ ತಿಂಗಳಿಗಿಂತ 18%ನಷ್ಟು ಹೆಚ್ಚು.

ಮೂಲ: ಆಟೋಪಂಡಿಟ್ಜ್

Most Read Articles

Kannada
English summary
Hyundai Creta tops mid size SUV sales list in December 2020. Read in Kannada.
Story first published: Saturday, January 9, 2021, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X