ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಹೊಸ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಎಸ್ಎಕ್ಸ್ ಎಕ್ಸಿಕ್ಯೂಟಿವ್ ವೆರಿಯೆಂಟ್ ಬಿಡುಗಡೆಯ ನಂತರ ಮಧ್ಯಮ ಕ್ರಮಾಂಕದಲ್ಲಿದ್ದ ಎಸ್ಎಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಮ್ಯಾನುವಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ವಿವಿಧ ಕಾರುಗಳಲ್ಲಿ ಪ್ರಮುಖ ವೆರಿಯೆಂಟ್‌ಗಳನ್ನು ಬದಲಾವಣೆಗೊಳಿಸುತ್ತಿರುವ ಹ್ಯುಂಡೈ ಕಂಪನಿಯು ಕ್ರೆಟಾ ಕಾರಿನಲ್ಲಿ ಇತ್ತೀಚೆಗೆ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ಹೊಸ ವೆರಿಯೆಂಟ್ ಪರಿಚಯಿಸಿದ ನಂತರ ಇದೀಗ ಎಸ್ಎಕ್ಸ್ ಮ್ಯಾನುವಲ್ ಮಾದರಿಯನ್ನು ಸ್ಥಗಿತಗೊಳಿಸಿದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಮಾರುಕಟ್ಟೆಯಲ್ಲಿ ಸದ್ಯ ಪೆಟ್ರೋಲ್ ಆಟೋಮ್ಯಾಟಿಕ್, ಡೀಸೆಲ್ ಮ್ಯಾನುವಲ್ ಇಲ್ಲವೇ ಡೀಸೆಲ್ ಆಟೋಮ್ಯಾಟಿಕ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು,ಬೇಡಿಕೆಯ ಆಧಾರದ ಮೇಲೆ ಎಸ್ಎಕ್ಸ್ ಮ್ಯಾನುವಲ್ ಮಾದರಿಯನ್ನು ಸ್ಥಗಿತಗೊಳಿಸಿದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಎಸ್ ಮತ್ತು ಎಸ್ಎಕ್ಸ್ ಎಕ್ಸಿಕ್ಯೂಟಿವ್ ಮಾದರಿಯಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಗಳಿದ್ದು, ಎಸ್ಎಕ್ಸ್ ಸ್ಥಾನದಲ್ಲಿ ಇದೀಗ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಹೊಸ ಮಾದರಿಗಳು ಸೇರ್ಪಡೆಯಾಗಿವೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಎಸ್ಎಕ್ಸ್ ಎಕ್ಸಿಕ್ಯೂಟಿವ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 13.18 ಲಕ್ಷ ಬೆಲೆ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಎಸ್ಎಕ್ಸ್ ಮಾದರಿಗಿಂತಲೂ ರೂ.78 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದ್ದು, ಹೊಸ ಆವೃತ್ತಿಯಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಯು ರೂ. 13.18 ಲಕ್ಷಕ್ಕೆ ಮತ್ತು ಡೀಸೆಲ್ ಮ್ಯಾನುವಲ್ ಮಾದರಿಯು ರೂ. 14.18 ಲಕ್ಷಕ್ಕೆ ಖರೀದಿ ಮಾಡಬಹುದಾಗಿದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಸ್ಟ್ಯಾಂಡರ್ಡ್ ಎಸ್ಎಕ್ಸ್ ಮಾದರಿಗಿಂತಲೂ ಕಡಿಮೆ ಬೆಲೆಗಾಗಿ ಹೊಸ ಆವೃತ್ತಿಯಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಕೈಬಿಡಲಾಗಿದ್ದು, ಎಸ್ ಮತ್ತು ಎಸ್ಎಕ್ಸ್ ನಡುವಿನ ಬೆಲೆ ಅಂತರ ಸರಿದೂಗಿಸಲು ಎಸ್ಎಕ್ಸ್ ಎಕ್ಸಿಕ್ಯೂಟಿವ್ ಬಿಡುಗಡೆ ಮಾಡಲಾಗಿದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಹೊಸ ಆವೃತ್ತಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಕಾರ್ ಟೆಕ್ ಕನೆಕ್ಟಿವಿಟಿ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡೋರ್ ಹ್ಯಾಂಡಲ್ ಕ್ರೋಮ್, ಥೆಫ್ಟ್ ಅಲಾರಾಂ, ಅರ್ಕಾಮಿಸ್ ಸೌಂಡ್ ಸಿಸ್ಟಂ ಮತ್ತು ಧ್ವನಿ ಗ್ರಹಿಸುವಿಕೆಯಂತಹ ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಪ್ರೀಮಿಯಂ ಫೀಚರ್ಸ್ ಕೈಬಿಡಲಾಗಿದ್ದರೂ ಹೊಸ ಆವೃತ್ತಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಮುಂದುವರಿಸಲಾಗಿದ್ದು, ಬ್ಲೂಟೂಥ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಶಾರ್ಕ್ ಫಿನ್ ಆಂಟೆನಾ, ಯುಎಸ್‌ಬಿ ಫೋರ್ಟ್, ಎಲ್ಇಡಿ ಹೆಡ್‌ಲೈಟ್ಸ್, 17-ಇಂಚಿನ ಅಲಾಯ್ ವೀಲ್ಹ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಹೊಸ ಮಾದರಿಯಲ್ಲಿ ಉಳಿಸಿಕೊಳ್ಳಲಾಗಿದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಆಯ್ಕೆ ಹೊಂದಿರುವ ಹೊಸ ಆವೃತ್ತಿಯಲ್ಲಿ ಸ್ಟ್ಯಾಂಡರ್ಡ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಇನ್ನುಳಿದ ಆವೃತ್ತಿಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.54 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ಕಾರು ಮಧ್ಯಮ ಕ್ರಮಾಂಕದಲ್ಲಿ ಮಾರಾಟಗೊಳ್ಳುತ್ತದೆ.

ಕ್ರೆಟಾ ಎಸ್ಎಕ್ಸ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸಿದ ಹ್ಯುಂಡೈ

ಹೊಸ ಕ್ರೆಟಾ ಕಾರು ಎಸ್ಎಕ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ಒಟ್ಟು 6 ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಹೊಂದಿದೆ.

Most Read Articles

Kannada
English summary
Hyundai Discontinued Creta SX Manual Petrol And Diesel Variants. Read in Kannada.
Story first published: Sunday, July 4, 2021, 0:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X