25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಪ್ರಯಾಣಿಕ ಕಾರು ಮಾರಾಟ ಆರಂಭಿಸಿ ಯಶಸ್ವಿ 25 ವರ್ಷಗಳನ್ನು ಪೂರೈಸಿದ್ದು, 25ನೇ ವರ್ಷದ ಸಂಭ್ರಮಕ್ಕಾಗಿ ಹ್ಯುಂಡೈ ಕಂಪನಿಯು ಹೊಸ ಕಾರ್ಪೊರೇಟ್ ಕಚೇರಿ ತೆರೆದಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

ಭಾರತದಲ್ಲಿ ವಿವಿಧ ಕಾರು ಮಾದರಿಗಳ ಮಾರಾಟದೊಂದಿಗೆ ದೇಶದ 2ನೇ ಅತಿ ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಕಂಪನಿಯು ತನ್ನ ಆಡಳಿತ ಕಾರ್ಯವೈಖರಿಯಲ್ಲಿ ಬದಲಾವಣೆ ತರಲು ಮತ್ತು ತನ್ನ ಸಿಬ್ಬಂದಿಗೆ ವಿಶ್ವದರ್ಜೆಯ ಸೌಲಭ್ಯಗಳ ಪರಿಚಯಿಸಿ ಕಾರ್ಯಕ್ಷಮತೆ ಹೆಚ್ಚಿಸುವ ಯೋಜನೆಗೆ ಚಾಲನೆ ನೀಡಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

ಭಾರತದಲ್ಲಿ 1996ರಲ್ಲಿ ಮೊದಲ ಬಾರಿಗೆ ಕಾರು ಉತ್ಪಾದನೆ ಆರಂಭಿಸಿದ ಹ್ಯುಂಡೈ ಕಂಪನಿಯು ಕೆಲವೇ ವರ್ಷಗಳಲ್ಲಿ ದೇಶದ 2ನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿದ್ದು, ಬಜೆಟ್ ಮತ್ತು ಪ್ರೀಮಿಯಂ ಕಾರುಗಳ ಮಾರಾಟದಲ್ಲೂ ಅಗ್ರಸ್ಥಾನದಲ್ಲಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

ಕಾರು ಮಾರಾಟ ಆರಂಭದ ದಿನಗಳಿಂದ ಹಲವಾರು ಏರಿಳಿತಗಳನ್ನು ಕಂಡಿರುವ ಹ್ಯುಂಡೈ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಮುಖ ಕಾರು ಮಾದರಿಗಳೊಂದಿಗೆ ಸ್ಥಿರತೆ ಕಾಯ್ದಕೊಂಡಿದ್ದು, 25ನೇ ಸಂಭ್ರಮಕ್ಕಾಗಿ ಗುರುಗ್ರಾಮ್‌ನಲ್ಲಿರುವ ತನ್ನ ಕಾರ್ಪೊರೇಟ್ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

'ಟ್ರಾನ್ಸ್‌ಫರ್ಮೇಷನ್ ಸೆಂಟರ್ ಫಾರ್ ಎ ಬೆಟರ್ ಟುಮಾರೊ' ಎಂಬ ಧ್ಯೇಯವಾಕ್ಯದೊಂದಿಗೆ ಹ್ಯುಂಡೈ ಇಂಡಿಯಾ ಕಂಪನಿಯು ಗುರುಗ್ರಾಮ್‌ನಲ್ಲಿ ಹೊಸ ಕಾರ್ಪೊರೇಟ್ ಪ್ರಧಾನ ಕಚೇರಿಗೆ ಚಾಲನೆ ನೀಡಿದ್ದು, 10 ಅಂತಸ್ತಿನ ಪ್ರಧಾನ ಕಚೇರಿ ಸೇರಿ 28,000 ಚದರ ಮೀಟರ್ ಗ್ರೀನ್‌ಫೀಲ್ಡ್ ಹೊಂದಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

2018ರಲ್ಲಿ ಆರಂಭಗೊಂಡಿದ್ದ ಹೊಸ ಕಚೇರಿಯ ನಿರ್ಮಾಣ ಕಾರ್ಯವು 25ನೇ ವರ್ಷದ ಸಂಭ್ರಮದ ವೇಳೆ ಪೂರ್ಣಗೊಂಡಿದ್ದು, ಹೊಸ ಯೋಜನೆಗಾಗಿ ಹ್ಯುಂಡೈ ಕಂಪನಿಯು ಸುಮಾರು ರೂ. 1 ಸಾವಿರ ಕೋಟಿ ವೆಚ್ಚ ಮಾಡಿದ್ದು, ಹೊಸ ಕಟ್ಟಡವು ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಪರಿಸರ ಸ್ನೇಹಿಯಾಗಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

ಹೊಸ ಕಟ್ಟಡದ ಮೇಲ್ಛಾವಣೆಯಲ್ಲಿ ಸಂಪೂರ್ಣವಾಗಿ ಸೋಲಾರ್ ಪ್ಯಾನೆಲ್‌ ಜೋಡಣೆ ಮಾಡಿದ್ದು, ಸೋಲಾರ್ ಪ್ಯಾನೆಲ್‌ಗಳಿಂದ ಉತ್ಪಾದನೆಯಾದ ವಿದ್ಯುತ್‌ನಿಂದಲೇ ಕಚೇರಿ ಆವರಣದಲ್ಲಿ 3 ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಮತ್ತು 14 ಎಸಿ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಿಸುವ ಮೂಲಕ ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಅನುಕೂಲ ಕಲ್ಪಿಸಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

ಇನ್ನು ಹ್ಯುಂಡೈ ಕಂಪನಿಯು ವಿವಿಧ ಮಾದರಿಗಳ ಹತ್ತು ಕಾರು ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಶೇ. 17.4 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಸದ್ಯ ಹ್ಯುಂಡೈ ಕಂಪನಿಯು ಅಗ್ರಸ್ಥಾನದಲ್ಲಿದ್ದು, ಭಾರತದಿಂದಲೇ ಹ್ಯುಂಡೈ ಕಂಪನಿಯು ಸುಮಾರು 80 ರಾಷ್ಟ್ರಗಳಿಗೆ ಕಾರು ಪೂರೈಕೆಯ ಸೌಲಭ್ಯವನ್ನು ಹೊಂದಿದೆ.

25 ವರ್ಷಗಳ ಸಂಭ್ರಮ: ಒಂದು ಸಾವಿರ ಕೋಟಿ ವೆಚ್ಚದ ಹೊಸ ಕಾರ್ಪೊರೇಟ್ ಕಚೇರಿ ತೆರೆದ ಹ್ಯುಂಡೈ

ಚೆನ್ನೈ ಹೊರವಲಯದಲ್ಲಿರುವ ಇರುಂಗಟ್ಟುಕೊಟೈನಲ್ಲಿ ಕಾರು ಉತ್ಪಾದನಾ ಘಟಕ ಆರಂಭಿಸುವ ಮೂಲಕ ಆರಂಭದಲ್ಲಿ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಆರಂಭಿಸಿದ್ದ ಹ್ಯುಂಡೈ ಕಂಪನಿಯು ಇದೀಗ ದೇಶಾದ್ಯಂತ 1154 ಮಾರಾಟ ಮಳಿಗೆಗಳನ್ನು ಮತ್ತು 1298 ಅಧಿಕೃತ ಸರ್ವಿಸ್ ಸೆಂಟರ್‌ಗಳ ಸೇವೆ ಹೊಂದಿದೆ.

Most Read Articles

Kannada
English summary
Hyundai inaugurates new corporate HQ in Gurgaon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X