ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಮೋಟಾರ್ಸ್ ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಿದ್ದು, ಕೋವಿಡ್ ಪರಿಣಾಮ ತಗ್ಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಕೋವಿಡ್ ಪರಿಣಾಮ ಕಳೆದ ವರ್ಷ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ಕಾರು ಕಂಪನಿಗಳಿಗೆ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿದ್ದು, ಇದೀಗ ಕೋವಿಡ್ 2ನೇ ಅಲೆ ಪರಿಣಾಮ ಮತ್ತೆ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಖರೀದಿದಾರರು ಹೊಸ ಯೋಜನೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳಿಗೆ ಭಾರೀ ನಷ್ಟ ಭೀತಿ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ಹೊಸ ವಾಹನ ಖರೀದಿಯನ್ನು ಉತ್ತೇಜಿಸಲು ಹೊಸ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿವೆ.

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಸಹ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿವೆ.

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಹ್ಯುಂಡೈ ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಕೊನಾ ಇವಿ ಮೇಲೆ ಗರಿಷ್ಠ ಉಳಿತಾಯ ಮಾಡಬಹುದು. ಹೊಸ ಆಫರ್‌ಗಳಲ್ಲಿ ಎಂಟ್ರಿ ಲೆವಲ್ ಮಾದರಿಗಳಾದ ಸ್ಯಾಂಟ್ರೋ ಆವೃತ್ತಿಯ ಮೇಲೆ ರೂ.10 ಸಾವಿರ ಆಫರ್ ನೀಡುತ್ತಿದ್ದು, ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಆವೃತ್ತಿಯ ಮೇಲೆ ಗರಿಷ್ಠ ರೂ. 40 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಔರಾ ಕಂಪ್ಯಾಕ್ಟ್ ಸೆಡಾನ್ ಮಾದರಿ ಮೇಲೆ ತಲಾ ರೂ.15 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ವಾಣಿಜ್ಯ ಬಳಕೆಗಾಗಿ ಮಾತ್ರ ಖರೀದಿಗೆ ಲಭ್ಯವಿರುವ ಎಕ್ಸೆಂಟ್ ಪ್ರೈಮ್ ಕಾರು ಮಾದರಿಗಾಗಿ ರೂ.50 ಸಾವಿರ ನಗದು ರಿಯಾಯ್ತಿ ಘೋಷಣೆ ಮಾಡಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯಾದ ಕೊನಾ ಇವಿ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 1.50 ಲಕ್ಷದವರೆಗೆ ಉಳಿತಾಯ ಮಾಡುವ ಅವಕಾಶ ನೀಡಿದ್ದು, ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರು ಇದು ಉತ್ತಮ ಆಯ್ಕೆಯಾಗಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಇನ್ನು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ಮಾರ್ಚ್ ತಿಂಗಳಿನಲ್ಲಿನ ತನ್ನ ಕಾರು ಮಾರಾಟದ ಶೇ.100 ರಷ್ಟು ಬೆಳವಣಿಗೆಯನ್ನು ಸಾಧಿಸಿತ್ತು. ಆದರೆ ಕೋವಿಡ್ ಪರಿಣಾಮ ಕಳೆದ ತಿಂಗಳು ಅರ್ಧಕ್ಕಿಂತಲೂ ಹೆಚ್ಚು ವಾಹನ ಮಾರಾಟವು ಕುಸಿತ ಕಂಡಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹ್ಯುಂಡೈ

ಕಳೆದ ವರ್ಷದ ಮಾರ್ಚ್ ಕೊನೆಯಲ್ಲಿ ಲಾಕ್‌ಡೌನ್ ವಿಧಿಸಿದ ಪರಿಣಾಮ ಕಾರು ಮಾರಾಟ ಸ್ಥಗಿತಗೊಳಿಸಿದ್ದ ಕಾರು ಕಂಪನಿಗಳು ಲಾಕ್‌ಡೌನ್ ನಂತರ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದವು. ಇದೀಗ ಮತ್ತೆ ಕೋವಿಡ್ ಭೀತಿಯಿಂದಾಗಿ ಲಾಕ್‌ಡೌನ್ ವಿಸ್ತರಣೆಯಾಗುತ್ತಿರುವುದು ಹೊಸ ಕಾರುಗಳ ಮಾರಾಟ ಸಾಕಷ್ಟು ತಗ್ಗಿದ್ದು, ಪರಿಸ್ಥಿತಿ ಸುಧಾರಣೆ ಇನ್ನು ಕೆಲವು ತಿಂಗಳುಗಳೆ ಬೇಕಾಗಬಹುದು.

Most Read Articles

Kannada
English summary
Hyundai Offering Benefits Worth Up To Rs 1.50 Lakh On Selected Models In 2021 June. Read in Kannada.
Story first published: Friday, June 4, 2021, 23:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X