ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ತೀವ್ರವಾಗಿ ಬೆಳವಣಿಗೆ ಸಾಧಿಸುತ್ತಿರುವ ಹ್ಯುಂಡೈ ಇಂಡಿಯಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ತನ್ನ ಹೊಸ ಉತ್ಪನ್ನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಹ್ಯುಂಡೈ ಕಂಪನಿಯು ಸದ್ಯ ಹೊಸ ಕಾರುಗಳಲ್ಲಿನ ಗುಣಮಟ್ಟ ಸುಧಾರಣೆಯ ಜೊತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಕಾರ್ ಕನೆಕ್ಟ್ ತಂತ್ರಜ್ಞಾನ ಅಭಿವೃದ್ದಿ ಮೇಲೆ ಹೆಚ್ಚಿನ ಗಮನಹರಿಸಿದೆ. ಕಾರ್ ಕನೆಕ್ಟ್ ಫೀಚರ್ಸ್‌ಗಳು ವಾಹನಗಳ ಚಾಲನೆಗೆ ಸಾಕಷ್ಟು ಪೂರಕವಾಗಿದ್ದು ಗರಿಷ್ಠ ಭದ್ರತೆ ಒದಗಿಸುವುವಲ್ಲಿ ಸಾಕಷ್ಟು ಸಹಕಾರಿಯಾಗಿವೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಕಾರ್ ಕನೆಕ್ಟ್ ಟೆಕ್ನಾಲಜಿಯಲ್ಲಿ ಹೊಸ ಬದಲಾವಣೆಗಾಗಿ ಹ್ಯುಂಡೈ ಕಂಪನಿಯು ಕೂಡಾ 2019ರಲ್ಲಿ ಮೊದಲ ಬಾರಿಗೆ ಬ್ಲ್ಯೂ ಲಿಂಕ್ ತಂತ್ರಜ್ಞಾನವನ್ನು ತನ್ನ ಹೊಸ ವೆನ್ಯೂ ಮಾದರಿಯಲ್ಲಿ ಬಿಡುಗಡೆಗೊಳಿಸಿತು.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ವೆನ್ಯೂ ಮಾದರಿಯಲ್ಲಿ ಬ್ಲ್ಯೂ ಲಿಂಕ್ ಟೆಕ್ನಾಲಜಿ ಪರಿಚಯಿಸಿದ ನಂತರ ಹ್ಯುಂಡೈ ಕಂಪನಿಯು ತನ್ನ ಕಾರು ಮಾದರಿಗಳಲ್ಲೂ ಹೊಸ ಕಾರ್ ಕನೆಕ್ಟ್ ಫೀಚರ್ಸ್‌ಗಳನ್ನು ಜೋಡಿಸಿತು. 2020ರ ಮಾರ್ಚ್‌ನಲ್ಲಿ ಬಿಡುಗಡೆಯಾದ ನ್ಯೂ ಜನರೇಷನ್ ಕ್ರೆಟಾ ಕೂಡಾ ಬ್ಲ್ಯೂ ಲಿಂಕ್ ತಂತ್ರಜ್ಞಾನ ಪಡೆದುಕೊಂಡಿದ್ದು, ಕಂಪನಿಯು ಇದೀಗ ಹೊಸ ಕಾರ್ ಕನೆಕ್ಟ್ ಫೀಚರ್ಸ್‌ಗಳನ್ನು ಉನ್ನತೀಕರಿಸಲು ಮುಂದಾಗಿದೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಕಾರ್ ಕನೆಕ್ಟ್ ಫೀಚರ್ಸ್ ಮೂಲಕ ಕಾರಿನ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಬ್ಲ್ಯೂ ಲಿಂಕ್ ಮೊಬೈಲ್ ಅಪ್ಲಿಕೇಷನ್ ಮೂಲಕವೇ ನಿಯಂತ್ರಣ ಮಾಡಬಹುದಾಗದ್ದು, ಶೀಘ್ರದಲ್ಲೇ ಕಂಪನಿಯು ಕಾರ್ ಕನೆಕ್ಟ್ ಫೀಚರ್ಸ್‌ಗಳಲ್ಲಿ ಹೊಸ ಸುರಕ್ಷಾ ವೈಶಿಷ್ಟ್ಯತೆ ಸೇರ್ಪಡೆ ಮಾಡಲು ನಿರ್ಧರಿಸಿದೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಆರಂಭಿಕವಾಗಿ ಕ್ರೆಟಾ ಮತ್ತು ಹಂತ-ಹಂತವಾಗಿ ಇತರೆ ಕಾರುಗಳ ಕಾರ್ ಕನೆಕ್ಟ್ ಫೀಚರ್ಸ್ ಉನ್ನತೀಕರಿಸಲು ನಿರ್ಧರಿಸಲಾಗಿದ್ದು, ಹೊಸ ಉನ್ನತೀಕರಣದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಧ್ವನಿ ಆಜ್ಞೆಯ ಮೂಲಕ ತಾಂತ್ರಿಕ ಅಂಶಗಳ ನಿಯಂತ್ರಣ ಸೌಲಭ್ಯವು ಲಭ್ಯವಾಗಲಿದೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಇನ್ನು ಹ್ಯುಂಡೈ ಕಂಪನಿಯು ಹೊಸ ಕ್ರೆಟಾ ಮಾದರಿಯ ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇತ್ತೀಚೆಗೆ ಹೊಸ ಕಾರಿನಲ್ಲಿ ಕೆಲವು ಬದಲಾವಣೆಗಾಗಿ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಮಾದರಿಯನ್ನು ಮಧ್ಯಮ ಕ್ರಮಾಂಕದಲ್ಲಿ ಬಿಡುಗಡೆ ಮಾಡಿದೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಕ್ರೆಟಾ ಕಾರಿನ ಮಧ್ಯಮ ಕ್ರಮಾಂಕದಲ್ಲಿರುವ ಎಸ್ಎಕ್ಸ್ ಮಾದರಿಗಿಂತಲೂ ಕೆಳಸ್ಥಾನದಲ್ಲಿ ಮಾರಾಟಗೊಳ್ಳಲಿರುವ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಗೆ ರೂ. 13.18 ಲಕ್ಷ ಮತ್ತು ಡೀಸೆಲ್ ಮಾದರಿಗೆ ರೂ. 14.18 ಲಕ್ಷ ಬೆಲೆ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಎಸ್ಎಕ್ಸ್ ಮಾದರಿಗಿಂತಲೂ ರೂ.78 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಸ್ಟ್ಯಾಂಡರ್ಡ್ ಎಸ್ಎಕ್ಸ್ ಮಾದರಿಗಿಂತಲೂ ಕಡಿಮೆ ಬೆಲೆಗಾಗಿ ಹೊಸ ಆವೃತ್ತಿಯಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಕೈಬಿಡಲಾಗಿದ್ದು, ಎಸ್ ಮತ್ತು ಎಸ್ಎಕ್ಸ್ ನಡುವಿನ ಬೆಲೆ ಅಂತರ ಸರಿದೂಗಿಸಲು ಎಸ್ಎಕ್ಸ್ ಎಕ್ಸಿಕ್ಯೂಟಿವ್ ಬಿಡುಗಡೆ ಮಾಡಲಾಗಿದೆ.

ಶೀಘ್ರದಲ್ಲೇ ಕ್ರೆಟಾ ಕಾರಿನ ಬ್ಲ್ಯೂ ಲಿಂಕ್ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಲಿದೆ ಹ್ಯುಂಡೈ

ಹೊಸ ಮಾದರಿಯ ಹೊರತಾಗಿ ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.54 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ಕಾರು ಮಧ್ಯಮ ಕ್ರಮಾಂಕದಲ್ಲಿ ಮಾರಾಟಗೊಳ್ಳುತ್ತದೆ.

Most Read Articles

Kannada
English summary
Hyundai Will Soon Upgrade The Bluelink System. Read in Kannada.
Story first published: Monday, June 21, 2021, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X