ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಕೇಂದ್ರ ಮತ್ತ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ವಾಹನ ಕಂಪನಿಗಳು ಕೂಡಾ ವಿವಿಧ ಮಾದರಿಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟಕ್ಕೆ ಚಾಲನೆ ನೀಡಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ದುಬಾರಿಯಾಗಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಧನ ಘೋಷಿಸಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದ ಪರಿಣಾಮ ಸಾಂಪ್ರಾದಾಯಿಕ ವಾಹನ ಉತ್ಪಾದನಾ ಕಂಪನಿಗಳ ಜೊತೆ ಸ್ಟಾರ್ಟ್ ಅಪ್ ಕಂಪನಿಗಳು ಕೂಡಾ ವಿವಿಧ ಇವಿ ವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಸಾಂಪ್ರಾದಾಯಿಕ ವಾಹನಗಳ ಮಾರಾಟದಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಉತ್ತರ ಕೊರಿಯಾದ ಹ್ಯುಂಡೈ ಮತ್ತು ಕಿಯಾ ಕಂಪನಿಗಳು ಭಾರತದಲ್ಲಿ ಹೊಸ ಮಾದರಿಯ ಇವಿ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಹ್ಯುಂಡೈ ಕಂಪನಿಯು ಈಗಾಗಲೇ ಭಾರತದಲ್ಲಿ ಕೊನಾ ಎಲೆಕ್ಟ್ರಿಕ್ ಕಾರು ಮಾದರಿಯ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಐಷಾರಾಮಿ ಕಾರು ಮಾದರಿಗಳ ಖರೀದಿ ಬಯಸುವ ಗ್ರಾಹಕರಿಗಾಗಿ ಐಯಾನಿಕ್ 5(Ioniq 5) ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಇದರೊಂದಿಗೆ ಭಾರತದಲ್ಲಿ ಸೊಲ್ ಎಲೆಕ್ಟ್ರಿಕ್ ಬಿಡುಗಡೆ ಮಾಡುವ ಯೋಜನೆಯಲ್ಲಿರುವ ಕಿಯಾ ಇಂಡಿಯಾ ಕಂಪನಿಯು ಐಷಾರಾಮಿ ಕಾರು ಮಾದರಿಗಳ ವಿಭಾಗಕ್ಕೆ ಇವಿ6(EV6) ಮಾದರಿಗಳನ್ನು ಭಾರತದಲ್ಲಿ ಪರಿಚಯಿಸುವ ಬಗೆಗೆ ಮಾರುಕಟ್ಟೆ ಅಧ್ಯಯನ ನಡೆಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಹ್ಯುಂಡೈ ಐಯಾನಿಕ್ 5 ಮತ್ತು ಕಿಯಾ ಇವಿ6 ಕಾರು ಮಾದರಿಗಳು ಈಗಾಗಲೇ ಯುಎಸ್ಎ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಕಾರು ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗುವ ಸಿದ್ದತೆಯಲ್ಲಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಕ್ರಾಸ್ ಓವರ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಗಳಾಗಿರುವ ಹ್ಯುಂಡೈ ಐಯಾನಿಕ್ 5 ಮತ್ತು ಕಿಯಾ ಇವಿ6 ಕಾರುಗಳು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಗಳಾಗಿ ಗುರುತಿಸಿಕೊಂಡಿದ್ದು, ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಗಳಾದರೂ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆ ಮರ್ಸಿಡಿಸ್ ಮತ್ತು ಆಡಿ ಎಲೆಕ್ಟ್ರಿಕ್ ಕಾರು ಮಾದರಿಗಳಿಂತಲೂ ಅತ್ಯುತ್ತಮ ತಾಂತ್ರಿಕ ಸೌಲಭ್ಯ ಹೊಂದಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಇವಿ6 ಕ್ರಾಸ್ ಓವರ್ ಎಸ್‌ಯುವಿ ಮಾದರಿಯು ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, 576-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಹೊಸ ಕಾರು 400ವಿ ಮತ್ತು 800ವಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಮಾಣ ಚಾರ್ಜ್ ಮಾಡಬಹುದಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಸೂಪರ್ ಫಾಸ್ಟ್ ಚಾರ್ಜರ್ ಮೂಲಕ ಕೇವಲ 5 ನಿಮಿಷ ಚಾರ್ಜ್ ‌ಮಾಡಿದರೆ 112 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, 18 ನಿಮಿಷ ಚಾರ್ಜ್ ಮಾಡಿದ್ದಲ್ಲಿ 330 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು 50 ನಿಮಿಷ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದಲ್ಲಿ 480 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಹಾಗೆಯೇ ವಿಸ್ತೃತ ವೀಲ್‌ಬೇಸ್‌ನ ಕಾರಣದಿಂದಾಗಿ ಐಯಾನಿಕ್ 5 ಕಾರು ಹಲವಾರು ವಿಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಇವಿ6 ಮಾದರಿಯಲ್ಲಿಯೇ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಐಯಾನಿಕ್ 5 ಕಾರು ಮಾದರಿಯು 4635 ಎಂಎಂ ಉದ್ದ, 1890 ಎಂಎಂ ಅಗಲ, 1605 ಎಂಎಂ ಎತ್ತರ ಮತ್ತು 3000 ಎಂಎಂ ವೀಲ್‌ಬೇಸ್‌ನೊಂದಿಗೆ ವಿಶಾಲವಾದ ಕ್ಯಾಬಿನ್ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು..

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ 470-480 ಕಿ.ಮೀ ಮೈಲೇಜ್ ಹಿಂದಿಗಿರುಗಿಸಲಿದೆ. ಆಧುನಿಕ ತಂತ್ರಜ್ಞಾನ ಪ್ರೇರಿತ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 5 ನಿಮಿಷಗಳ ಕಾಲ ಚಾರ್ಜ್ ಮಾಡಿದರೂ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, ಎರಡು ಕಾರುಗಳು ವಿಭಿನ್ನವಾದ ತಾಂತ್ರಿಕ ಅಂಶಗಳೊಂದಿಗೆ ಬೆಲೆಯಲ್ಲೂ ತುಸು ದುಬಾರಿಯಾಗಿರಲಿವೆ.

Most Read Articles

Kannada
English summary
Hyundai ioniq 5 and kia ev6 electric suv models to planning launch india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X