Just In
- 2 hrs ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 2 hrs ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 3 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 4 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Movies
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ದಂಪತಿಗೆ ಕೊರೊನಾ
- News
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹಾಗೂ ಅಖಿಲೇಶ್ ಯಾದವ್ಗೆ ಕೊರೊನಾ
- Lifestyle
ಬೆಳಿಗ್ಗೆ ಎದ್ದ ಕೂಡಲೇ ನೀವು ಯಾಕೆ ಸುಸ್ತಾಗುತ್ತೀರಿ? ಈ ಪರಿಹಾರಗಳಿಂದ ನಿಮ್ಮ ಸುಸ್ತು ದೂರವಾಗುತ್ತೆ!
- Sports
ಐಪಿಎಲ್ 2021: ಅತಿ ದೊಡ್ಡ ಮೈಲಿಗಲ್ಲು ಮುಟ್ಟಲು ವಿರಾಟ್ ಕೊಹ್ಲಿ ಮತ್ತಷ್ಟು ಸನಿಹ
- Finance
ಸತತ 15ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿಲ್ಲ
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ಹೊಸ ಗ್ರಾಹಕರನ್ನು ಆಕರ್ಷಿಸಲು ಮಾರ್ಚ್ ತಿಂಗಳಿನಲ್ಲಿ ಹಲವಾರು ಆಫರ್ಗಳನ್ನು ಘೋಷಿಸಿದ್ದು, ಹೊಸ ಆಫರ್ಗಳಲ್ಲಿ ಪ್ರಮುಖ ಕಾರುಗಳ ಖರೀದಿಯೊಂದಿಗೆ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ಹೊಸ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೆಚ್ಚಿನ ಮಟ್ಟದ ಆಫರ್ಗಳನ್ನು ಮುಂದುವರಿಸಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ಕೊನಾ ಇವಿ ಸೇರಿದಂತೆ ವಿವಿಧ ಕಾರು ಮಾದರಿಗಳ ಮೇಲೆ ಮಾರ್ಚ್ ಅವಧಿಗಾಗಿ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಹೊಸ ಆಫರ್ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಕೊನಾ ಇವಿ ಮೇಲೆ ಗರಿಷ್ಠಉಳಿತಾಯ ಮಾಡಬಹುದು.

ಹೊಸ ಆಫರ್ಗಳಲ್ಲಿ ಸ್ಯಾಂಟ್ರೋ ಆವೃತ್ತಿಯ ಮೇಲೆ ರೂ.50 ಸಾವಿರ ಆಫರ್ ನೀಡುತ್ತಿದ್ದು, ಗ್ರಾಂಡ್ ಐ10 ನಿಯೋಸ್ ಹ್ಯಾಚ್ಬ್ಯಾಕ್ ಆವೃತ್ತಿಯ ಮೇಲೆ ಗರಿಷ್ಠ ರೂ. 60 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದೆ.

ಸೆಡಾನ್ ಮಾದರಿಗಳಾದ ಔರಾ ಆವೃತ್ತಿಯ ಮೇಲೆ ರೂ.70 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಎಲಾಂಟ್ರಾ ಆವೃತ್ತಿಯ ಮೇಲೆ ಬರೋಬ್ಬರಿ ರೂ. 1 ಲಕ್ಷ ತನಕ ಉಳಿತಾಯ ಮಾಡಬಹುದಾಗಿದೆ.

ಹಾಗೆಯೇ ಎಲೆಕ್ಟ್ರಿಕ್ ಕಾರು ಮಾದರಿಯಾದ ಕೊನಾ ಇವಿ ಖರೀದಿ ಮೇಲೆ ಹ್ಯುಂಡೈ ಕಂಪನಿಯು ರೂ. 1.50 ಲಕ್ಷದವರೆಗೆ ಉಳಿತಾಯ ಮಾಡುವ ಅವಕಾಶ ನೀಡಿದ್ದು, ಸಾಮಾನ್ಯ ಆಫರ್ಗಳನ್ನು ಹೊರತುಪಡಿಸಿ ಆಯ್ದ ಗ್ರಾಹಕರಿಗೆ ಇನ್ನು ಹೆಚ್ಚಿನ ಮಟ್ಟದ ಉಳಿತಾಯಕ್ಕೆ ಅವಕಾಶ ನೀಡಲಾಗಿದೆ. ಹ್ಯುಂಡೈ ಕಂಪನಿಯು ಸರ್ಕಾರಿ ನೌಕರಿಗಾಗಿ ರೂ. 8 ಸಾವಿರ ಹೆಚ್ಚುವರಿ ಆಫರ್ ನೀಡುವುದಾಗಿ ಹೇಳಿಕೊಂಡಿದ್ದು, ಹೊಸ ಆಫರ್ನಲ್ಲಿ ವೈದ್ಯರು, ಕಾರ್ಪೊರೇಟ್ ಉದ್ಯೋಗಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಆಫರ್ಗಳಿಗೆ ಲಭ್ಯವಿವೆ.

ಇನ್ನು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ಫೆಬ್ರವರಿ ತಿಂಗಳಿನಲ್ಲಿನ ತನ್ನ ಕಾರು ಮಾರಾಟದ ವರದಿಯನ್ನು ಪ್ರಕಟಿಸಿದ್ದು, ಕಳೆದ ತಿಂಗಳ ಕಾರು ಮಾರಾಟದಲ್ಲಿ ಶೇ.29 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

2021ರ ಫೆಬ್ರವರಿ ಅವಧಿಯಲ್ಲಿ ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 51,600 ಯುನಿಟ್ಗಳನ್ನು ಮಾರಾಟಗೊಳಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 40,010 ಯುನಿಟ್ಗಳನ್ನು ಮಾರಾಟಗೊಳಿಸಿತ್ತು. ವರ್ಷದ ಆರಂಂಭದಲ್ಲೇ ಹ್ಯುಂಡೈ ಕಂಪನಿಯ ವಿವಿಧ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗಿದ್ದು, ಕಳೆದ ವರ್ಷದ ಫೆಬ್ರವರಿ ಅವಧಿಯಲ್ಲಿನ ಕಾರು ಮಾರಾಟಕ್ಕಿಂತ ಈ ವರ್ಷದ ಫೆಬ್ರವರಿ ಅವಧಿಯಲ್ಲಿ ಬರೋಬ್ಬರಿ ಶೇ.29ರಷ್ಟು ರಷ್ಟು ಬೆಳವಣಿಗೆ ಸಾಧಿಸಿದೆ.

ಹ್ಯುಂಡೈ ಕಂಪನಿಯು ವಿವಿಧ ಹೊಸ ಕಾರು ಮಾದರಿಗಳೊಂದಿಗೆ ಪ್ರಯಾಣಿಕ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕಳೆದ ಕೆಲ ತಿಂಗಳಿನಿಂದ ವಾರ್ಷಿಕ ಕಾರು ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದೆ.

ಹೊಸ ತಲೆಮಾರಿನ ಕ್ರೆಟಾ ಮತ್ತು ಐ20 ಕಾರು ಮಾದರಿಗಳು ಹ್ಯುಂಡೈ ಕಾರು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರುಗಳು ಹ್ಯುಂಡೈ ಕಾರು ಮಾರಾಟದಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸುವ ತವಕದಲ್ಲಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ದಸರಾ ಮತ್ತು ದೀಪಾವಳಿ ನಂತರ ಹೊಸ ವಾಹನಗಳ ಮಾರಾಟವು ಸಾಮಾನ್ಯವಾಗಿ ತಗ್ಗಿದ್ದರೂ ಕೂಡಾ ಹೊಸ ವರ್ಷದ ಆರಂಭದಿಂದಲೂ ಹ್ಯುಂಡೈ ಕಾರುಗಳ ಮಾರಾಟದಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಬರುವ ಯುಗಾದಿ ವೇಳೆಗೆ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಯಿದೆ.