ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಖ್ಯಾತ ಕಾರು ತಯಾರಕ ಕಂಪನಿಯಾದ Hyundai ಮೋಟಾರ್ ಇಂಡಿಯಾ ತನ್ನ ಆಗಸ್ಟ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 46,866 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

Hyundai ಮೋಟಾರ್ ಇಂಡಿಯಾ ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿ ಎಂದು ಕರೆಯಲ್ಪಡುತ್ತದೆ. ಕಂಪನಿಯು ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ 2.3% ನಷ್ಟು ಮಾರಾಟ ಬೆಳವಣಿಗೆಯನ್ನು ಸಾಧಿಸಿದೆ. 2020ರ ಆಗಸ್ಟ್ ತಿಂಗಳಿನಲ್ಲಿ Hyundai ಕಂಪನಿಯು ಒಟ್ಟು 45,809 ಯುನಿಟ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಇನ್ನು Hyundai ಮೋಟಾರ್ ಇಂಡಿಯಾ ಕಂಪನಿಯ ರಫ್ತು ಬಗ್ಗೆ ಹೇಳುವುದಾದರೆ, ಕಂಪನಿಯು ರಫ್ತಿನಲ್ಲಿ 79.4% ನಷ್ಟು ಬೆಳವಣಿಗೆಯನ್ನು ಸಾಧಿಸಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ಭಾರತದಿಂದ ಒಟ್ಟು 6,800 ಯುನಿಟ್ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿತ್ತು.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು 12,202 ಯುನಿಟ್ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ. ಇನ್ನು 2021ರ ಆಗಸ್ಟ್ ತಿಂಗಳ ಒಟ್ಟು ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಕಳೆದ ತಿಂಗಳು ಮಾರಾಟದಲ್ಲಿ 12.3%ನಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

Hyundai ಮೋಟಾರ್ ಇಂಡಿಯಾ ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ 52,609 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಕಂಪನಿಯು ಒಟ್ಟು 59,068 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು ಈ ವರ್ಷದ ಜುಲೈ ತಿಂಗಳಿನಲ್ಲಿ ಒಟ್ಟು 60,249 ಯುನಿಟ್‌ ಮಾರಾಟವನ್ನು ದಾಖಲಿಸಿದೆ. 2020ರ ಜುಲೈ ತಿಂಗಳಿನಲ್ಲಿ ಕಂಪನಿಯು 41,300 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಕಂಪನಿಯು ವರ್ಷದಿಂದ ವರ್ಷದ ಮಾರಾಟದಲ್ಲಿ 45.9% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮಾಸಿಕ ಮಾರಾಟದ ಬಗ್ಗೆ ಹೇಳುವುದಾದರೆ, Hyundai ಕಂಪನಿಯು 1.9% ನಷ್ಟು ಇಳಿಕೆಯನ್ನು ದಾಖಲಿಸಿದೆ. ಕಂಪನಿಯ ದೇಶಿಯ ಮಾರಾಟವು ಕಳೆದ ತಿಂಗಳು 48,042 ಯುನಿಟ್‌ಗಳಷ್ಟಿತ್ತು. ತಿಂಗಳ ಮಾರಾಟದಲ್ಲಿ ಕಂಪನಿಯು 2.44% ನಷ್ಟು ಕುಸಿತವನ್ನು ದಾಖಲಿಸಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಕಂಪನಿಯ ಮಾರಾಟದ ಬಹುಪಾಲು ಅದರ ಯುವಿ ಸರಣಿ ಕಾರುಗಳಿಂದ ಬರುತ್ತದೆ. ಇದರಲ್ಲಿ Hyundai Creta, Hyundai Venue ಮುಂತಾದ ಕಾರುಗಳು ಸೇರಿವೆ. ಇದರ ಹೊರತಾಗಿ, ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿರುವ ಹೊಸ Hyundai Alcazar ಕಾರ್ ಅನ್ನು ತನ್ನ ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ ಸೇರಿಸಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಇದರ ಹೊರತಾಗಿ Hyundai ಕಂಪನಿಯು ಇತ್ತೀಚಿಗೆ ತನ್ನ ಸ್ಟ್ಯಾಂಡರ್ಡ್ ಮಾಡೆಲ್ Hyundai i 20 ಕಾರಿನ ಹೆಚ್ಚು ಸ್ಪೋರ್ಟಿ ಹಾಗೂ ಹೆಚ್ಚು ಪರ್ಫಾಮೆನ್ಸ್ ನೀಡುವ i 20 N Line ಆವೃತ್ತಿಯನ್ನು ಭಾರತದಲ್ಲಿ ಪರಿಚಯಿಸಿದೆ. ಇದರ ಹೊರತಾಗಿ ಕಂಪನಿಯು ತನ್ನ ಮಿನಿ ಎಸ್‌ಯುವಿ Hyundai Casper ಅನ್ನು ಇಂದು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಮಿನಿ ಎಸ್‌ಯುವಿ Hyundai Castor ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಕಂಪನಿಯು Casper ಎಸ್‌ಯುವಿಯ ಬಿಡುಗಡೆಯೊಂದಿಗೆ ನಿರ್ದಿಷ್ಟ ವಿಭಾಗವನ್ನು ಗುರಿಯಾಗಿಸಲು ಬಯಸಿದೆ. ಈ ಕಾರುಗಳು ಕಂಪನಿಯ ಮಾರಾಟವನ್ನು ಮತ್ತಷ್ಟು ಸುಧಾರಿಸುತ್ತವೆ ಎಂದು ಹೇಳಲಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಸ್ಪೋರ್ಟಿ ಲುಕ್ ಹಾಗೂ ಹೆಚ್ಚು ಪರ್ಫಾಮೆನ್ಸ್ ಹೊಂದಿರುವ Hyundai N Line ಕಾರು ಜಾಗತಿಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.ಕಂಪನಿಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಆವೃತ್ತಿಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

i20 ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಮೊದಲ ಹಂತವಾಗಿ N Line ಮಾದರಿಯನ್ನು ಬಿಡುಗಡೆ ಮಾಡಿರುವ Hyundai ಕಂಪನಿಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾರುಗಳನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ. ಹೊಸ i20 N Line ಕಾರ್ ಅನ್ನು N6 iMT, N8 iMT ಹಾಗೂ N8 DCT ಎಂಬ ಮೂರು ವಿಭಿನ್ನ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಇನ್ನು Casper ಎಸ್‌ಯುವಿ ಬಗ್ಗೆ ಹೇಳುವುದಾದರೆ 1970 ರ ದಶಕದಲ್ಲಿ ಬಾಬಿ ಕ್ಯಾಸ್ಪರ್ ಬೋಯ್ಡನ್ ಹೂಡಿಕೆ ಮಾಡಿದ ಫ್ರೀಸ್ಟೈಲ್ ಸ್ಕೇಟ್‌ಬೋರ್ಡಿಂಗ್ ಟ್ರಿಕ್‌ನಿಂದ Casper ಎಸ್‌ಯುವಿಯ ಹೆಸರನ್ನು ಪಡೆಯಲಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

ಈ ಎಸ್‌ಯುವಿಯು Hyundai ಕಂಪನಿಯು ಇದುವರೆಗೂ ಬಿಡುಗಡೆಗೊಳಿಸಿರುವ ಎಸ್‌ಯುವಿಗಳ ಪೈಕಿ ಅತ್ಯಂತ ಚಿಕ್ಕ ಎಸ್‌ಯುವಿಯಾಗಿದೆ. ಈ ಎಸ್‌ಯುವಿಯನ್ನು ಭಾರತವೂ ಸೇರಿದಂತೆ ಅಂತರ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುವುದು.

ಆಗಸ್ಟ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Hyundai Motor India

Hyundai ಕಂಪನಿ ಇತ್ತೀಚಿಗಷ್ಟೇ ತನ್ನ ಎರಡನೇ ತಲೆಮಾರಿನ Creta ಎಸ್‌ಯುವಿಯನ್ನು ಹೊಸ ನವೀಕರಣಗಳೊಂದಿಗೆ ಬ್ರೆಜಿಲ್‌ನಲ್ಲಿ ಬಿಡುಗಡೆ ಮಾಡಿದೆ. ಈ ಎಸ್‌ಯುವಿಯು ಭಾರತದಲ್ಲಿ ಮಾರಾಟವಾಗುವ ಕ್ರೆಟಾ ಎಸ್‌ಯುವಿಯಂತೆಯೇ ಇದೆ. ಆದರೆ ಈ ಹೊಸ ಮಾದರಿಯಲ್ಲಿ ಕೆಲವು ಅಪ್ ಡೇಟ್ ಗಳನ್ನು ಮಾಡಲಾಗಿದೆ.

Most Read Articles

Kannada
English summary
Hyundai motor india sales increases during august 2021 in domestic market details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X