Just In
Don't Miss!
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೋಡ್ ಟೆಸ್ಟಿಂಗ್ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್
ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಕ್ರೆಟಾ ಕಾರು ಮಾದರಿಯಲ್ಲಿ 7 ಸೀಟರ್ ಆವೃತ್ತಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ 7 ಸೀಟರ್ ಆವೃತ್ತಿಯು ದೇಶದ ಪ್ರಮುಖ ನಗರಗಳಲ್ಲಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಕ್ರೆಟಾ 7 ಸೀಟರ್ ಎಸ್ಯುವಿ ಕಾರು ಮಾದರಿಯ ವಿವಿಧ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿರುವ ಹ್ಯುಂಡೈ ಕಂಪನಿಯು ಹೊಸ ಕಾರಿನ ಅಧಿಕೃತ ಹೆಸರನ್ನು ಕೂಡಾ ಕೇಂದ್ರ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದು, ಹೊಸ ಕಾರು ಆವೃತ್ತಿಯು ದೇಶಿಯ ಮಾರುಕಟ್ಟೆಯಲ್ಲಿ ಕ್ರೆಟಾಗೆ ಬದಲಿಗೆ ಅಲ್ಕಾಜರ್ ಎನ್ನುವ ಹೆಸರಿನೊಂದಿಗೆ ಮಾರಾಟಕ್ಕೆ ಲಭ್ಯವಾಗುವ ಸುಳಿವು ನೀಡಿದೆ.

ಸ್ಟ್ಯಾಂಡರ್ಡ್ 5 ಸೀಟರ್ ಮಾದರಿಯು ಕ್ರೆಟಾ ಹೆಸರಿನಲ್ಲಿ ಮತ್ತು ಹೊಸ 7 ಸೀಟರ್ ಮಾದರಿಯನ್ನು ಅಲ್ಕಾಜಲ್ ಹೆಸರಿನೊಂದಿಗೆ ಮಾರಾಟ ಮಾಡಲಿರುವ ಹ್ಯುಂಡೈ ಕಂಪನಿಯು ಕಾರಿನ ಕಾರ್ಯಕ್ಷಮತೆ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಹೊಸ ಕಾರು ಈ ವರ್ಷದ ಎರಡನೇ ತ್ರೈಮಾಸಿಕ ವೇಳೆಗೆ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಹೊಸ ಕಾರು ಮಹೀಂದ್ರಾ ಎಕ್ಸ್ಯುವಿ500 ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಅಲ್ಕಾಜರ್ ಕಾರು ಸಾಮಾನ್ಯ ಕಾರು ಮಾದರಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ಬೆಲೆಯಲ್ಲೂ ದುಬಾರಿಯಾಗಿರಲಿದ್ದು, 5 ಸೀಟರ್ ಮಾದರಿಗಿಂತಲೂ ಹೆಚ್ಚುವರಿಯಾಗಿ ರೂ. 1.50 ಲಕ್ಷದಿಂದ ರೂ. 2 ಲಕ್ಷ ದುಬಾರಿ ಬೆಲೆ ಪಡೆದುಕೊಳ್ಳಬಹುದಾಗಿದೆ. ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯವನ್ನು ಸೇರಿಸಬಹುದಾಗಿದ್ದು, 6 ಸೀಟರ್ ಮಾದರಿಯು 2+2+2 ಮತ್ತು 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿರಲಿದೆ.

ಇನ್ನು ಹೊಸ ಕಾರಿನಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೆಚ್ಚುವರಿ ಆಸನ ಸೌಲಭ್ಯದ ಹೊರತಾಗಿ ಇನ್ನುಳಿದ ತಾಂತ್ರಿಕ ಅಂಶಗಳು ಸಾಮಾನ್ಯ ಕ್ರೆಟಾ ಕಾರಿನಲ್ಲಿರುವಂತೆ ಪಡೆದುಕೊಳ್ಳಲಿದೆ.

ಸದ್ಯ ಹ್ಯುಂಡೈ ನ್ಯೂ ಜನರೇಷನ್ ಕ್ರೆಟಾ ಕಾರು ದೆಹಲಿ ಎಕ್ಸ್ಶೋರೂಂ ಆರಂಭಿಕವಾಗಿ ರೂ. 9.82 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 17.33 ಲಕ್ಷ ಬೆಲೆ ಪಡೆದುಕೊಳ್ಳುವ ಮೂಲಕ ಕಿಯಾ ಸೆಲ್ಟೊಸ್ಗೆ ಸರಿಸಮನಾಗಿ ಮಾರುಕಟ್ಟೆ ಪ್ರವೇಶಿಸಿದ್ದು, 7 ಸೀಟರ್ ಮಾದರಿಯು ಇನ್ನಷ್ಟು ದುಬಾರಿಯಾಗಿಲಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಹೊಸ ಕ್ರೆಟಾ ಕಾರು ಸದ್ಯ 5 ಸೀಟರ್ ಸೌಲಭ್ಯದೊಂದಿಗೆ ಗ್ರಾಹಕರ ಬೇಡಿಕೆಯೆಂತೆ ಐದು ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಇದೀಗ ಬಿಡುಗಡೆಗೆ ಸಿದ್ದವಾಗಿರುವ 7 ಸೀಟರ್ ಸೌಲಭ್ಯ ಕ್ರೆಟಾ ಕಾರು ಮಾದರಿಯು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೆಚ್ಚುವರಿ ಆಸನ ಸೌಲಭ್ಯವನ್ನು ಹೊರತುಪಡಿಸಿ ಇನ್ನುಳಿದ ಬಹುತೇಕ ತಾಂತ್ರಿಕ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಜೋಡಣೆ ಮಾಡಲಿದೆ.