ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ಹ್ಯುಂಡೈ ಕಂಪನಿಯ ಆಸ್ಟ್ರೇಲಿಯಾ ಘಟಕವು ಇಡೀ ವಿಶ್ವವನ್ನು ತನ್ನತ್ತ ಸೆಳೆಯುವ ಕಾರ್ಯವನ್ನು ಮಾಡಿದೆ. ಹ್ಯುಂಡೈ ನೆಕ್ಸೊ ಕಾರು ಫುಲ್ ಟ್ಯಾಂಕ್ ಆದ ನಂತರ ಸುಮಾರು 900 ಕಿ.ಮೀಗಳವರೆಗೆ ಸಾಗುವ ಮೂಲಕ ಹೊಸ ವಿಶ್ವ ದಾಖಲೆ ಬರೆದಿದೆ.

ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ಹ್ಯುಂಡೈ ನೆಕ್ಸೊ ಹೊಸ ದಾಖಲೆಯ ಕುರಿತಾದ ವೀಡಿಯೊವನ್ನು ಬಿಡುಗಡೆಗೊಳಿಸಲಾಗಿದೆ. ಹ್ಯುಂಡೈ ನೆಕ್ಸೊ ಕಾರು ಹೈಡ್ರೋಜನ್'ನಿಂದ ಚಲಿಸುತ್ತದೆ ಎಂಬುದು ಗಮನಾರ್ಹ. ಈ ಕಾರು ಎಲೆಕ್ಟ್ರಿಕ್ ವಾಹನಗಳಂತೆಯೇ ಪರಿಸರ ಸ್ನೇಹಿ ವಾಹನವಾಗಿದೆ.

ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ಈ ಕಾರು ಸ್ಟೀಮ್ ಅನ್ನು ಮಾತ್ರ ಹೊರಸೂಸುತ್ತದೆ. ಈ ಹಿಂದೆ ಹ್ಯುಂಡೈ ನೆಕ್ಸೊ ಕಾರು 778 ಕಿ.ಮೀಗಳವರೆಗೆ ಸಾಗಿ ಹೊಸ ವಿಶ್ವ ದಾಖಲೆ ಬರೆದಿತ್ತು. ಈ ಬಾರಿ ಹ್ಯುಂಡೈ ನೆಕ್ಸೊ ಕಾರು 887.5 ಕಿ.ಮೀ ಸಾಗಿ ಹಳೆ ದಾಖಲೆಯನ್ನು ಮುರಿದಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ಆಸ್ಟ್ರೇಲಿಯಾದ ಮೆಲ್ಬೋರ್ನ್ ಹಾಗೂ ಬ್ರೋಕನ್ ಹಿಲ್'ನಲ್ಲಿ ಈ ಹೊಸ ದಾಖಲೆಯನ್ನು ಸ್ಥಾಪಿಸಲಾಗಿದೆ. ಈ ಹಿಂದಿನ ದಾಖಲೆಯನ್ನು ಫ್ರಾನ್ಸ್‌ನ ಬರ್ಟ್ರಾಂಡ್ ಪಿಕಾರ್ಡ್ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು ಎಂಬುದು ಗಮನಾರ್ಹ.

ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ನೆಕ್ಸೊ ಹೈಡ್ರೋಜನ್ ಸಾಮರ್ಥ್ಯದ ಕಾರು ಆಗಿದ್ದರೂ, ಇದು ಎಲೆಕ್ಟ್ರಿಕ್ ಪವರ್ಡ್ ವೆಹಿಕಲ್ ಎಂಬುದನ್ನು ಗಮನಿಸಬೇಕು. ವಾಯುಮಂಡಲದ ಹೈಡ್ರೋಜನ್ ಕರಗಿ ಎಲೆಕ್ಟ್ರಿಕ್ ಪವರ್ ಆಗಿ ಪರಿವರ್ತನೆಗೊಳ್ಳುತ್ತದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ನೆಕ್ಸೊ ಇದರ ಆಧಾರದ ಮೇಲೆ ಚಲಿಸುತ್ತದೆ. ಹೈಡ್ರೋಜನ್ ಅನ್ನು ಪೂರ್ತಿಯಾಗಿ ತುಂಬಲು ಕೆಲವು ನಿಮಿಷಗಳು ಸಾಕಾಗುತ್ತವೆ. ಅಂದರೆ ಕೇವಲ 3ರಿಂದ 5 ನಿಮಿಷಗಳಲ್ಲಿ ಹೈಡ್ರೋಜನ್ ಅನ್ನು ಪೂರ್ತಿಯಾಗಿ ತುಂಬ ಬಹುದು.

ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ಹೈಡ್ರೋಜನ್ ವಾಹನಗಳು, ಎಲೆಕ್ಟ್ರಿಕ್ ವಾಹನದಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಪೂರ್ತಿ ಟ್ಯಾಂಕ್ ತುಂಬಿದ ನಂತರ 660 ಕಿ.ಮೀಗಳವರೆಗೆ ಪ್ರಯಾಣಿಸಬಹುದು ಎಂದು ಹ್ಯುಂಡೈ ಕಂಪನಿ ತಿಳಿಸಿತ್ತು.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಇತ್ತೀಚಿಗೆ ನಡೆಸಲಾದ ಅಧ್ಯಯನದ ಪ್ರಕಾರ ಹ್ಯುಂಡೈ ನೆಕ್ಸೊ ಸುಮಾರು 900 ಕಿ.ಮೀಗಳವರೆಗೆ ಚಲಿಸ ಬಹುದು ಎಂದು ಹೇಳಲಾಗಿದೆ. ಹ್ಯುಂಡೈ ನೆಕ್ಸೊ 900 ಕಿ.ಮೀ ದೂರವನ್ನು 13 ಗಂಟೆ 6 ನಿಮಿಷಗಳಲ್ಲಿ ಕ್ರಮಿಸಿದೆ.

ಹೊಸ ವಿಶ್ವ ದಾಖಲೆ ಬರೆದ ಹ್ಯುಂಡೈ ನೆಕ್ಸೊ ಹೈಡ್ರೋಜನ್ ಕಾರು

ಈ ಅಧ್ಯಯನದ ಪ್ರಕಾರ ಹ್ಯುಂಡೈ ನೆಕ್ಸೊ ಪ್ರತಿ ಗಂಟೆಗೆ 66.9 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಎಲ್ಲಾ ಅಂಕಿ ಅಂಶಗಳು ವಾಹನ ಉತ್ಸಾಹಿಗಳನ್ನು ಹ್ಯುಂಡೈ ನೆಕ್ಸೊ ಕಾರಿನತ್ತ ಆಕರ್ಷಿಸುವುದು ಖಚಿತ.

Most Read Articles

Kannada
English summary
Hyundai Nexo Hydrogen fuel car creates new world record. Read in Kannada.
Story first published: Saturday, May 15, 2021, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X