ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಹ್ಯುಂಡೈ ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಗಳನ್ನು ಗಳಿಸಿದೆ. ಬಿಎಂಡಬ್ಲ್ಯು ಎಂ, ಸ್ಕೋಡಾದ ಆರ್‌ಎಸ್ ಮಾದರಿಗಳ ಹಾಗೇ ಹ್ಯುಂಡೈ ಕಂಪನಿಯ ಎನ್ ಸರಣಿಯ ಕಾರುಗಳು ಪರ್ಫಾಮೆನ್ಸ್ ಮಾದರಿಗಳಾಗಿವೆ.

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಇತ್ತೀಚಿನ ವರದಿಯ ಪ್ರಕಾರ, ಹ್ಯುಂಡೈ ಕಂಪನಿಯು ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಈ ವರ್ಷದ ಮಧ್ಯಾಂತರ ಅವಧಿಯಲ್ಲಿ ಹ್ಯುಂಡೈ ಎನ್ ಪರ್ಫಾಮೆನ್ಸ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಹ್ಯುಂಡೈ ಪರ್ಫಾಮೆನ್ಸ್ ಸರಣಿಯು ಎನ್ ಮತ್ತು ಎನ್ ಲೈನ್ ಕಾರುಗಳನ್ನು ಒಳಗೊಂಡಿದೆ. ಈ ಪರ್ಫಾಮೆನ್ಸ್ ಕಾರುಗಳು ಸ್ಟ್ಯಾಂಡರ್ಡ್ ಮಾದರಿಗಳಿಗಿಂತ ಹೆಚ್ಚು ಪವರ್ ಫುಲ್ ಎಂಜಿನ್‌ಗಳನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಜೊತೆಗೆ ಏರೋ ಬಾಡಿ ಕಿಟ್‌ಗಳು ಮತ್ತು ಚಾಸಿಸ್, ಸಸ್ಪೆಂಕ್ಷನ್, ಬ್ರೇಕ್‌ಗಳು ಇತ್ಯಾದಿಗಳಿಗೆ ನವೀಕರಣಗಳನ್ನು ಕೂಡ ಹೊಂದಿರುತ್ತದೆ. ಇನ್ನು ಪರ್ಫಾಮೆನ್ಸ್ ಕಾರುಗಳ ಹೊರಭಾಗದಲ್ಲಿ ಸ್ಪೋರ್ಟಿ ವಿನ್ಯಾಸವನ್ನು ಪಡೆದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಭಾರತೀಯ ಮಾರುಕಟ್ಟೆಯಲ್ಲಿ ಮೊದಲಿಗೆ ಎನ್ ಲೈನ್ ಮಾದರಿಗಳನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ನಂತರದಲ್ಲಿ ಹ್ಯುಂಡೈ ಕಂಪನಿಯು ಎನ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಹ್ಯುಂಡೈ ಕಂಪನಿಯು ಈ ವರ್ಷದ ಮಧ್ಯಾಂತರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಐ20 ಎನ್ ಲೈನ್ ಕಾರನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹ್ಯುಂಡೈ ಐ20 ಎನ್ ಲೈನ್ ಕಾರಿನ ಬೆಲೆಯು ಸುಮಾರು ರೂ.12 ಲಕ್ಷಗಳಾಗಿರಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಹ್ಯುಂಡೈ ಐ20 ಎನ್ ಲೈನ್ ಕಾರಿನಲ್ಲಿ ಅದೇ 1.0 ಎಲ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸ್ವಲ್ಪ ಗಟ್ಟಿಯಾದ ಸಸ್ಪೆಂಕ್ಷನ್ ಮತ್ತು ಉತ್ತಮ ಬ್ರೇಕ್‌ಗಳ ಜೊತೆಗೆ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿರುತ್ತದೆ.

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಇನ್ನು ಹ್ಯುಂಡೈ ಐ20 ಎನ್ ಲೈನ್ ಕಾರು ಸ್ಪೋರ್ಟಿ ಬಾಡಿ ಕಿಟ್ ಅನ್ನು ಸಹ ಪಡೆಯುತ್ತದೆ. ಇದರೊಂದಿಗೆ 1.6 ಲೀಟರ್ ಟರ್ಬೊ-ಪೆಟ್ರೋಲ್ ಮೋಟರ್ ಅನ್ನು ಹೊಂದಿರುವ ಐ20 ಎನ್ ಕಾರನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಹ್ಯುಂಡೈ ಚಿಂತಿಸುತ್ತಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಇದನ್ನು ವಾರ್ಷಿಕವಾಗಿ ಬಿಬಿಯು ಆಗಿ 2,500 ಯೂನಿಟ್‌ಗಳಿಗಿಂತ ಕಡಿಮೆ ಆಮದು ಮಾಡಿಕೊಳ್ಳುಬಹುದು.ಹ್ಯುಂಡೈ ಐ20 ಎನ್ ಬೆಲೆಯು ಸುಮಾರು ರೂ. 25 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಯಾವಾಗಲೂ ಪರ್ಫಾಮೆನ್ಸ್ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದಕ್ಕೆ ಉದಾಹರಣೆ ಫಿಯೆಟ್ ಅಬರ್ಥ್ ಪುಂಟೊ, ಮಾರುತಿ ಬಲೆನೊ ಆರ್‌ಎಸ್, ಮತ್ತು ಟಾಟಾ ಟಿಯಾಗೊ ಜೆಟಿಪಿ/ಟಿಗೋರ್ ಜೆಟಿಪಿ ಮುಂತಾದ ಕಾರುಗಳು ಈಗಾಗಲೇ ಪ್ರಯತ್ನಿಸಿ ವಿಫಲವಾಗಿವೆ. ಆದರೆ ಇದೀಗ ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಕಾರುಗಳನ್ನು ಬಿಡುಗದೆಗೊಳಿಸಿ ಪರೀಕ್ಷಿಸಲು ಮುಂದಾಗಿದೆ.

Most Read Articles

Kannada
English summary
Hyundai To Bring ‘N’ Performance Brand. Read In Kannada.
Story first published: Monday, January 25, 2021, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X