ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ(Hyundai) ತನ್ನ ಹೊಸ ಕ್ಯಾಸ್ಪರ್(Casper) ಮೈಕ್ರೋ ಎಸ್‍ಯುವಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಮುಂದಿನ ಕೆಲವು ವಾರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹ್ಯುಂಡೈ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿಯ ಮೊದಲ ಅಧಿಕೃತ ಚಿತ್ರಗಳನ್ನು ಈ ತಿಂಗಳ ಆರಂಭದಲ್ಲಿ ಬಹಿರಂಗಪಡಿಸಲಾಯಿತು.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗಳಿಗೆ ಮೈಕ್ರೊ ಎಸ್‌ಯುವಿ ಕ್ಯಾಸ್ಪರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದೀಗ ಹ್ಯುಂಡೈ ಕಂಪನಿಯು ಕ್ಯಾಸ್ಪರ್ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹೊಸ ಹ್ಯುಂಡೈ ಕ್ಯಾಸ್ಪರ್ ಸಣ್ಣ ಎಸ್‍ಯುವಿಯು ಈ ವರ್ಷದ ಅಂತ್ಯದಲ್ಲಿ ದಕ್ಷಿಣ ಕೊರಿಯಾದಲ್ಲಿ ಮಾರಾಟವಾಗಲಿದೆ, ಹ್ಯುಂಡೈ ಕೊರಿಯಾದಲ್ಲಿ ಕ್ಯಾಸ್ಪರ್ ನೇಮ್‌ಪ್ಲೇಟ್ ಅನ್ನು ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಿದೆ. ಹ್ಯುಂಡೈ ಕ್ಯಾಸ್ಪರ್ ಇತರ ಮಾರುಕಟ್ಟೆಗಳಲ್ಲಿ ವಿಭಿನ್ನ ಹೆಸರಿನೊಂದಿಗೆ ಬರಬಹುದು.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಇದು ಹ್ಯುಂಡೈಯ ಚಿಕ್ಕ ಎಸ್‍ಯುವಿಯಾಗಿದ್ದು, ಸಬ್-ಮೀಟರ್ ಎಸ್‍ಯುವಿಗಿಂತ ಕೆಳಗಿರುತ್ತದೆ. ಕ್ಯಾಸ್ಪರ್ ಹ್ಯುಂಡೈನ ಕೆ1 ಕಾಂಪ್ಯಾಕ್ಟ್ ಕಾರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಪ್ರಸ್ತುತ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಸ್ಯಾಂಟ್ರೊಗೆ ಆಧಾರವಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಇನ್ನು ಈ ಹ್ಯುಂಡೈ ಕ್ಯಾಸ್ಪರ್ 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿರಲಿದೆ ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತ ಚಿಕ್ಕದಾಗಿದೆ. Casper ಮಾದರಿಯು ಮಾರುತಿ ಸುಜುಕಿ ಇಗ್ನಿಸ್, ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಎಚ್‌ಬಿಎಕ್ಸ್ ಕಾನ್ಸೆಪ್ಟ್ ಆಧಾರಿತ ಮೈಕ್ರೊ ಎಸ್‌ಯುವಿಗಿಂತ ಚಿಕ್ಕದಾಗಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಹೊಸ ಹ್ಯುಂಡೈ ಎಎಕ್ಸ್1 ಮಿನಿ ಎಸ್‌ಯುವಿ ಜಿಜಿಎಂ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು.ಕಾರಿನ ಪ್ರಾಯೋಗಿಕ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಸಾಮೂಹಿಕ ಉತ್ಪಾದನೆಯು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಹ್ಯುಂಡೈ ಆರಂಭದಲ್ಲಿ ಸಣ್ಣ ಎಸ್‌ಯುವಿಯ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಲಿದ್ದು, ಅದರ ನಂತರ 2023ರಲ್ಲಿ ಎಲೆಕ್ಟ್ರಿಕ್ ಮಾದರಿಯಾಗಿ ಪರಿಚಯಿಸಬಹುದು. ಈ ಮೈಕ್ರೊ ಎಸ್‍ಯುವಿಯು ಬೋರ್ಗ್‌ವರ್ನರ್ ಇಂಟಿಗ್ರೇಟೆಡ್ ಡ್ರೈವ್ ಮಾಡ್ಯೂಲ್ (ಐಡಿಎಂ) ಅನ್ನು ಪಡೆಯುತ್ತದೆ, ಇದು ಮಾಡ್ಯುಲರ್ ಘಟಕದಲ್ಲಿ ಎಲೆಕ್ಟ್ರಿಕ್ ಮೋಟರ್, ಗೇರ್‌ಬಾಕ್ಸ್ ಮತ್ತು ಪವರ್ ಎಲೆಕ್ಟ್ರಾನಿಕ್ ಅನ್ನು ಒಳಗೊಂಡಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ವರದಿಗಳ ಪ್ರಕಾರ, ಹೊಸ ಹ್ಯುಂಡೈ ಕ್ಯಾಸ್ಪರ್ ಸಣ್ಣ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, -1.0-ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಹೊಸ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 76 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಇದರೊಂದಿಗೆ ಯೋಸ್ ಟರ್ಬೊ ಮತ್ತು ಔರಾ ಟರ್ಬೊ ಮಾದರಿಯಲ್ಲಿರುವ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಟರ್ಬೋ ಎಂಜಿನ್ 100 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯನ್ನು ಬಿಡುಗಡೆಗೊಳಿಸುವುದಾದರೆ, ಸ್ಯಾಂಟ್ರೊದ 1.1ಎಲ್ 4-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 69 ಬಿಹೆಚ್‍ಪಿ ಪವರ್ ಮತ್ತು 99 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‌ಯುವಿಯನ್ನು ಹೈಬ್ರಿಡ್ ಅಥವಾ ಪೂರ್ಣ ಎಲೆಕ್ಟ್ರಿಕ್ ಎಂಜಿನ್ ಆಯ್ಕೆಯೊಂದಿಗೆ ನೀಡುವ ಸಾಧ್ಯತೆಯಿದೆ. ಆದರೆ ಈ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯ ಒಳಭಾಗದಲ್ಲಿ, ವಿಶಾಲವಾದ ಕ್ಯಾಬಿನ್ ಪಡೆಯುತ್ತದೆ. ಇದು ಬೂದು ಬಣ್ಣದ ಒಳಾಂಗಣ ಥೀಮ್ ಅನ್ನು ಪಡೆಯುತ್ತದೆ, ಕ್ಯಾಸ್ಪರ್‌ನಲ್ಲಿನ ಸ್ಟೀರಿಂಗ್ ವೀಲ್ ಸಮತಟ್ಟಾದ ತಳದಲ್ಲಿದೆ ಮತ್ತು ಮೌಂಟಡ್ ಕಂಟ್ರೋಲ್ ಗಳೊಂದಿಗೆ ಬರುತ್ತದೆ. ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿರುವ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಿಂತ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತದೆ. ಆಪಲ್ ಕಾರ್‌ಪ್ಲೇ, ಕನೆಕ್ಟಿವಿಟಿ ಕಾರ್ ಟೆಕ್, ಕೀಲೆಸ್ ಎಂಟ್ರಿ, ಇಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಕ್ಯಾಮೆರಾ ಇತ್ಯಾದಿಗಳನ್ನು ಹೊಂದಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಈ 2022ರ ಹುಂಡೈ ಪ್ರಾಜೆಕ್ಟ್ AX1 ನ ಉತ್ಪಾದನೆಯ ಆವೃತ್ತಿಯಾದ ಹ್ಯುಂಡೈ ಕ್ಯಾಸ್ಪರ್ ಸಿಟಿ ಮೂಲದ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಹ್ಯುಂಡೈ ಐ10 ಗಾಗಿ ಬಳಸಿದ ಪ್ಲಾಟ್‌ಫಾರ್ಮ್ ಅನ್ನು ಕಾರು ಹಂಚಿಕೊಂಡಿದೆ, ಅಂದರೆ ಕೋನಾ ಅಥವಾ ವೆನ್ಯೂ ಎಸ್‌ಯುವಿಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ Hyundai Casper ಮೈಕ್ರೊ ಎಸ್‍ಯುವಿ

ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯು ಆಕರ್ಷಕ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಈ ಮಕ್ರೋ ಎಸ್‍ಯುವಿಯು ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿಸಿ, ದೊಡ್ಡ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳ ತೆಳುವಾದ ಸ್ಟ್ರಿಪ್ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಟೈಲ್ ಲ್ಯಾಂಪ್ಸ್, ರೂಫ್ ಮೇಲೆ ಜೋಡಿಸಲಾದ ಸ್ಪಾಯ್ಲರ್ ಜೊತೆಗೆ ಟೈಲ್ ಗೇಟ್ ಅನ್ನು ಹೊಂದಿದೆ.

Most Read Articles

Kannada
English summary
Hyundai shared more images of casper micro suv ahead of launch details
Story first published: Wednesday, September 15, 2021, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X