ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಕಾರು ಮಾರಾಟದಲ್ಲಿ ಸದ್ಯ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಹ್ಯುಂಡೈ ಕಂಪನಿಯು ಬಜೆಟ್ ಬೆಲೆಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ನಂತರ ಎರಡನೇ ಸ್ಥಾನ ಕಾಯ್ದುಕೊಂಡಿದ್ದು, ಎಸ್‌ಯುವಿ ವಿಭಾಗದಲ್ಲಿ ಹಲವಾರು ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ದೇಶಿಯ ಮಾರುಕಟ್ಟೆಯಲ್ಲಿ ಮೈಕ್ರೊ ಎಸ್‌ಯುವಿ, ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಫುಲ್ ಸೈಜ್ ಎಸ್‌ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಹ್ಯುಂಡೈ ಕಂಪನಿಯು ಸದ್ಯ ವಿವಿಧ ಮಾದರಿಗಳೊಂದಿಗೆ ಎಸ್‌ಯುವಿ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಭಾರತದಲ್ಲಿ ಬಿಡುಗಡೆಗಾಗಿ ಮೊದಲ ಬಾರಿಗೆ ಎಎಕ್ಸ್1 ಮಾದರಿಯ ಟೀಸರ್ ಹಂಚಿಕೊಂಡಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಎಎಕ್ಸ್1 ಮೈಕ್ರೊ ಎಸ್‌ಯುವಿ ಮಾದರಿಯನ್ನು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿರುವ ಹ್ಯುಂಡೈ ಕಂಪನಿಯು ಇದೀಗ ಭಾರತದಲ್ಲೂ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಕೋವಿಡ್ ಪರಿಣಾಮ ಸದ್ಯ ಹೊಸ ಕಾರುಗಳ ಬಿಡುಗಡೆ ಪ್ರಕ್ರಿಯೆಯನ್ನು ತಡೆಹಿಡಿರುವ ಹ್ಯುಂಡೈ ಕಂಪನಿಯು ಕೋವಿಡ್ ಅಬ್ಬರ ತಗ್ಗಿದ ನಂತರ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆಯನ್ನು ಹೆಚ್ಚಿಸಲಿದ್ದು, ಹ್ಯುಂಡೈ ಕಂಪನಿಯ ಕಾರು ಬಿಡುಗಡೆಯ ಪಟ್ಟಿಯಲ್ಲಿ ಹಲವಾರು ಹೊಸ ಮಾದರಿಗಳಿವೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಹೊಸ ಕಾರುಗಳ ಪಟ್ಟಿಯಲ್ಲಿ ಮೈಕ್ರೊ ಎಸ್‌ಯುವಿ ಮಾದರಿಯಾಗಿರುವ ಎಎಕ್ಸ್1 ಮಾದರಿಯು ಸಹ ಒಂದಾಗಿದ್ದು, ಹೊಸ ಕಾರು ಹ್ಯುಂಡೈ ಕಂಪನಿಯು ಮಾರಾಟಗೊಳಿಸುತ್ತಿರುವ ಸ್ಯಾಂಟ್ರೊ ಮತ್ತು ವೆನ್ಯೂ ಮಧ್ಯಮ ಸ್ಥಾನಪಡೆದುಕೊಳ್ಳಲಿದೆ. ಹ್ಯಾಚ್‌ಬ್ಯಾಕ್ ಕಾರಿಗಿಂತಲೂ ತುಸು ಭಿನ್ನವಾಗ ವಿನ್ಯಾಸ ಪಡೆದುಕೊಳ್ಳಲಿರುವ ಹೊಸ ಕಾರು ಮಾರುತಿ ಸುಜುಕಿ ಇಗ್ನಿಸ್, ಎಸ್-ಪ್ರೆಸ್ಸೊ, ಮಹೀಂದ್ರಾ ಕೆಯುವಿ100 ಮತ್ತು ಬಿಡುಗಡೆಗೆ ಸಿದ್ದವಾಗಿರುವ ಟಾಟಾ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ ಮಾದರಿಗೆ ಪೈಪೋಟಿ ನೀಡಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಹೊಸ ಕಾರು ಗ್ರ್ಯಾಂಡ್ ಐ10 ನಿಯೋಸ್ ಮಾದರಿಯ ಕೆ1 ಪ್ಲ್ಯಾಟ್‌ಫಾರ್ಮ್ ಆಧರಿಸಿ ಬಿಡುಗಡೆಯಾಗಬಹುದೆಂದು ನೀರಿಕ್ಷಿಸಲಾಗಿದ್ದು, ಹೊಸ ಕಾರು ಕೇವಲ ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಹ್ಯುಂಡೈ ಕಂಪನಿಯು ಆರಂಭಿಕ ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ನೀಡಲಾಗುತ್ತಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ ಮಾದರಿಯು ಐದು-ಸ್ಪೀಡ್ ಮ್ಯಾನುವಲ್ ಅಥವಾ ಐದು-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 82-ಬಿಹೆಚ್‌ಪಿ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಹೊಸ ಕಾರು 3,700 ಎಂಎಂ ಉದ್ದಳತೆಯೊಂದಿಗೆ ಉತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಳ್ಳಲಿದ್ದು, ಹೊರ ಭಾಗದಲ್ಲೂ ಉತ್ತಮ ವಿನ್ಯಾಸದೊಂದಿಗೆ ಪ್ರತಿಸ್ಪರ್ಧಿ ಮಾದರಿಗಿಂತಲೂ ಉತ್ತಮ ಒಳಾಂಗಣ ಸ್ಥಳಾವಕಾಶ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತದಲ್ಲೂ ಬಿಡುಗಡೆಯಾಗಲಿದೆ ವಿನೂತನ ವಿನ್ಯಾಸದ ಹ್ಯುಂಡೈ ಮೈಕ್ರೊ ಎಸ್‌ಯುವಿ

ಟೀಸರ್ ಚಿತ್ರದಲ್ಲಿ ಕಂಪನಿಯು ಒ-ರಿಂಗ್ ಹೊಂದಿರುವ ಡೇ ಟೈಮ್ ರನ್ನಿಂಗ್ ಲೈಟ್‌ನೊಂದಿಗೆ ಸ್ಪ್ಲಿಟ್ ಹೆಡ್‌ಲ್ಯಾಂಪ್ ಕ್ಲಸ್ಟರ್ ಸೌಲಭ್ಯವುಳ್ಳ ಚಿತ್ರವನ್ನು ಹಂಚಿಕೊಂಡಿದ್ದು, ಹೊಸ ಕಾರು ಈ ವರ್ಷಾಂತ್ಯಕ್ಕೆ ಇಲ್ಲವೇ 2022ರ ಆರಂಭದಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

Most Read Articles

Kannada
English summary
Hyundai Teased AX1 Micro SUV Ahead Of Debut, Find Here New Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X