ಹೊಸ ಕಸ್ಟೋ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಕಸ್ಟೋ ಹೆಸರಿನ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಹ್ಯುಂಡೈ ಕಂಪನಿಯು ಹೊಸ ಕಸ್ಟೋ ಎಂಪಿವಿಯ ಹೊಸ ಟೀಸರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಕಸ್ಟೋ 7-ಸೀಟರ್ ಎಂಪಿವಿಯ ಟೀಸರ್ ಚಿತ್ರಗಳು ವಿನ್ಯಾಸ ಅಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುತ್ತದೆ. ಈ ಎಂಪಿವಿಯು 2021ರ ಏಪ್ರಿಲ್‌ನಲ್ಲಿ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಐಐಟಿ) ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಾಗ ಸಂಪೂರ್ಣವಾಗಿ ಅಂತರ್ಜಾಲದಲ್ಲಿ ಸೋರಿಕೆಯಾಯಿತು. ಟ್ಯೂಸಾನ್ ಆಧರಿಸಿರುವ ಹೊಸ ಹ್ಯುಂಡೈ ಕಸ್ಟೋ 7-ಸೀಟರ್ ಮಿನಿವ್ಯಾನ್ ಆಗಿದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಕಸ್ಟೋ ಟ್ಯೂಸಾನ್ ಎಸ್‍ಯುವಿಯಲ್ಲಿರುವಂತಹ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಮತ್ತು ಹಿಂಭಾಗದಲ್ಲಿ ಕನೆಕ್ಟಿವಿಟಿ ಲೈಟ್‌ಬಾರ್ ಅನ್ನು ಹೊಂದಿದೆ. ಆದರೆ ಹೆಡ್‌ಲೈಟ್‌ಗಳು ವಿಭಿನ್ನ ‘ಸಿ' ಆಕಾರವನ್ನು ಹೊಂದಿವೆ. ಹೊಸ ಕಸ್ಟೋ ಆಕರ್ಷಕ ಲುಕ್ ನೊಂದಿಗೆ ಬರುತ್ತದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಈ ಎಂಪಿವಿಯ ಮುಂಭಾಗ ದೊಡ್ಡ ರೇಡಿಯೇಟರ್ ಗ್ರಿಲ್ ಅನ್ನು ಕ್ರೋಮ್ ಅಂಶಗಳನ್ನು ಹೊಂದಿವೆ. ಈ ಎಂಪಿವಿಯಲ್ಲಿ ಅನನ್ಯ ವಿನ್ಯಾಸ ಅಂಶಗಳು ಮತ್ತು ಕ್ರಾಸ್ಒವರ್ ತರಹದ ಸ್ಟೈಲಿಂಗ್ ಅನ್ನು ಒಳಗೊಂಡಿದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಇನ್ನು ಡಿಸೈನ್ ಬಿಟ್‌ಗಳಾದ ಮಸ್ಕ್ಯುಲರ್ ಬಂಪರ್, ವೈಡ್ ಏರ್ ಇಂಟೆಕ್ಸ್, ಫ್ಲಾಟ್ ಹುಡ್ ಮತ್ತು ಕ್ರೋಮ್ ಲೈನಿಂಗ್ ಹೊಂದಿರುವ ಫಾಗ್ ಲ್ಯಾಂಪ್ ಅಸೆಂಬ್ಲಿ ಅದರ ಸ್ಪೋರ್ಟಿ ಫ್ರಂಟ್ ಲುಕ್ ಅನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಇದರ ಸೈಡ್ ಪ್ರೊಫೈಲ್ ನಲ್ಲಿ ವ್ಹೀಲ್ ಅರ್ಚಾರ್, ಮೌಂಟಡ್ ಹಿಂಭಾಗದ ಸ್ಪಾಯ್ಲರ್, ಸಿಲ್ವರ್ ಟ್ರಿಮ್ ಡೋರ್ ಹ್ಯಾಂಡಲ್ ಗಳು ಮತ್ತು ದಪ್ಪ ಬಾಡಿ ಲೈನ್ ಗಳನ್ನು ಹೊಂದಿದೆ. ಇನ್ನು ಈ ಎಂಪಿವಿಯ ಹಿಂಭಾಗದಲ್ಲಿ ಸ್ಪೋರ್ಟ್ಸ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ತೆಳುವಾದ ಎಲ್‌ಇಡಿ ಬಾರ್ ಮೂಲಕ ಸಂಪರ್ಕಿಸಲಾಗಿದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಇನ್ನು ಹ್ಯುಂಡೈ ಕಸ್ಟೋ ಎಂಪಿವಿಯ ಒಳಭಾಗದಲ್ಲಿ ಗೇರ್ ಸೆಲೆಕ್ಟರ್ ಬಟನ್‌ಗಳು, ಫ್ಹೋರ್-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅದರ ಕೆಲವು ವಿನ್ಯಾಸ ಬಿಟ್‌ಗಳು ಮತ್ತು ಫೀಚರ್ ಗಳನ್ನು ಹ್ಯುಂಡೈ ಸೊನಾಟಾದೊಂದಿಗೆ ಹಂಚಿಕೊಳ್ಳಬಹುದು.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಮತ್ತು ಕಾನ್ಫಿಗರ್ ಮಾಡಬಹುದಾದ ಕಲರ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ನೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಆದರೆ ಈ ಎಂಪಿವಿಯಲ್ಲಿ 2.0 ಎಲ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 237 ಬಿಹೆಚ್‍ಪಿ ಪವರ್ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಕಸ್ಟೊ 7-ಸೀಟರ್ ಎಂಪಿವಿಯ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ

ಇನ್ನು ಈ ಎಂಜಿನ್‌ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಬಹುದು. ಇದರೊಂದಿಗೆ 1.5 ಬಿಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಕೂಡ ಅಳವಡಿಸಬಹುದು. ಇನ್ನು ಈ ಹೊಸ ಹ್ಯುಂಡೈ ಕಸ್ಟೋ ಎಂಪಿವಿಯ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
Hyundai Custo 7-Seater MPV Teased. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X