Just In
- 13 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- 50 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಫೇಸ್ಲಿಫ್ಟ್ ವರ್ಷನ್
ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಕೊನಾ ಇವಿ ಕಾರು ಮಾದರಿಯ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಶೀಘ್ರದಲ್ಲೇ ಹ್ಯುಂಡೈ ಕಂಪನಿಯು ಕೊನಾ ಎಲೆಕ್ಟ್ರಿಕ್ ಕಾರಿನ ಫೇಸ್ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹ್ಯುಂಡೈ ಕಂಪನಿಯು ಈಗಾಗಲೇ 2021ರ ಆವೃತ್ತಿಯನ್ನು ಅನಾವರಣಗೊಳಿಸುವ ಮೂಲಕ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಶೀಘ್ರದಲ್ಲೇ ಭಾರತದಲ್ಲೂ ಕೂಡಾ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. 2021ರ ಆವೃತ್ತಿಯಲ್ಲಿ ಪ್ರಮುಖ ತಾಂತ್ರಿಕ ಅಂಶಗಳಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ವಿನ್ಯಾಸದ ಎಲ್ಇಡಿ ಡಿಆರ್ಎಲ್ಗಳು, ಟು ವರ್ಟಿಕಲ್ ಸ್ಲಾಟ್ ಹೊಂದಿರುವ ಬಂಪರ್, ಸಿಲ್ವರ್ ಆಕ್ಸೆಂಟ್ ಸೇರಿದಂತೆ ಪ್ರಮುಖ ಬದಲಾವಣೆಗಳು ಎಸ್ಯುವಿ ಪ್ರಿಯರನ್ನು ಆಕರ್ಷಿಸಲಿವೆ.
ಹ್ಯುಂಡೈ ಕಂಪನಿಯು ಈಗಾಗಲೇ 2021ರ ಆವೃತ್ತಿಯನ್ನು ಅನಾವರಣಗೊಳಿಸುವ ಮೂಲಕ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಶೀಘ್ರದಲ್ಲೇ ಭಾರತದಲ್ಲೂ ಕೂಡಾ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. 2021ರ ಆವೃತ್ತಿಯಲ್ಲಿ ಪ್ರಮುಖ ತಾಂತ್ರಿಕ ಅಂಶಗಳಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ವಿನ್ಯಾಸದ ಎಲ್ಇಡಿ ಡಿಆರ್ಎಲ್ಗಳು, ಟು ವರ್ಟಿಕಲ್ ಸ್ಲಾಟ್ ಹೊಂದಿರುವ ಬಂಪರ್, ಸಿಲ್ವರ್ ಆಕ್ಸೆಂಟ್ ಸೇರಿದಂತೆ ಪ್ರಮುಖ ಬದಲಾವಣೆಗಳು ಎಸ್ಯುವಿ ಪ್ರಿಯರನ್ನು ಆಕರ್ಷಿಸಲಿವೆ.

ಜೊತೆಗೆ ಹೊಸ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಪ್ರಮುಖ ಬದಲಾವಣೆಗಳಾಗಿದ್ದು, ಸ್ಪಿಟ್ ಟೈಲ್ ಲ್ಯಾಂಪ್ ಪ್ರತ್ಯೇಕಗೊಂಡಿರುವ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಸಿಗ್ನಲ್, ಆಕ್ಸಿಲರಿ ಟೈಲ್ಲ್ಯಾಂಪ್ ನೀಡಲಾಗಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಹೊಸ ವಿನ್ಯಾಸದ ಅಲಾಯ್ ವೀಲ್ಹ್, ಆಕರ್ಷಕ ವಿನ್ಯಾಸದ ರೂಫ್ ರೈಲ್ಸ್ ನೀಡಲಾಗಿದ್ದು, ಹೊಸ ಕಾರಿನ ಒಳಭಾಗದಲ್ಲಿ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ಪ್ಲೇ ಸರ್ಪೊಟ್ ಮಾಡುವ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೋಡಿಸಲಾಗಿದೆ.

ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಪ್ರಮುಖ ಸೇಫ್ಟಿ ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದ್ದು, ಹೊಸ ಕಾರಿನಲ್ಲಿ 6 ಏರ್ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ ಸೇರಿದಂತೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್ಗಳಾದ ರಿಯರ್ ಟ್ರಾಫಿಕ್ ಕೂಲಿಷನ್ ಅವಾಯ್ಡೆನ್ಸ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೂಲಿಷನ್ ಅವಾಯ್ಡೆನ್ಸ್ ಅಸಿಸ್ಟ್ನಂತಹ ಸೌಲಭ್ಯ ಹೊಂದಿದೆ.

ಇನ್ನು ಹೊಸ ಕೊನಾ ಕಾರು ಪ್ರಮುಖ ಫೀಚರ್ಸ್ಗಳ ಬದಲಾಣೆ ಹೊರತುಪಡಿಸಿ ಈ ಹಿಂದಿನಂತೆಯೇ ಎರಡು ಪ್ರಮುಖ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಎಲೆಕ್ಟ್ರಿಕ್ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 64kWh ಮತ್ತು 39.2kWh ಬ್ಯಾಟರಿ ಪ್ಯಾಕ್ ಜೋಡಿಸಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು 64kWh ಮತ್ತು 39.2kWh ಬ್ಯಾಟರಿ ಪ್ಯಾಕ್ ಮಾದರಿಯ ಕೊನಾ ಇವಿ ಮಾರಾಟ ಮಾಡುತ್ತಿದ್ದು, ಭಾರತದಲ್ಲಿ ಮಾತ್ರ ಸದ್ಯಕ್ಕೆ 39.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಪರ್ಫಾಮೆನ್ಸ್ ಕಾರುಗಳಂತೆಯೇ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಜೊತೆಗೆ ಸಾಮಾನ್ಯ ಕಾರುಗಳಿಂತ ಶೇ.80ರಷ್ಟು ಕಡಿಮೆ ರನ್ನಿಂಗ್ ಕಾಸ್ಟ್ ಹೊಂದಿರುವ ಕೊನಾ ಕಾರು ಪ್ರತಿ ಕಿ.ಮೀ ಗೆ ರೂ.1 ಕ್ಕಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

ಕೊನಾ ಕಾರು 155ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದೆ.
MOST READ: ಮುಖೇಶ್ ಅಂಬಾನಿ ಭದ್ರತೆಗಾಗಿಯೇ ಬಂತು ಮೂರು ಕೋಟಿ ಬೆಲೆಯ ಕಾರು

ಕೊನಾ ಇವಿ ಹೊಸ ಆವೃತ್ತಿಯು ಈಗಾಗಲೇ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ಭಾರತದಲ್ಲೂ ಹಲವು ಹೊಸ ಬದಲಾವಣೆಗಳೊಂದಿಗೆ ರಸ್ತೆಗಿಳಿಯುವ ಸಿದ್ದತೆಯಲ್ಲಿದೆ.