ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹೊಸ ಆಯ್ಕೆಗಳನ್ನು ನೀಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಗ್ರಾಹಕರ ಬಳಕೆಯನ್ನು ಹೆಚ್ಚಿಸಲು ಮತ್ತಷ್ಟು ಸರಳ ವೈಶಿಷ್ಟ್ಯತೆಗಳನ್ನು ಅಳವಡಿಸಿಕೊಂಡಿದೆ.

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಕರೋನಾ ವೈರಸ್ ಮಾಹಾಮಾರಿಯಿಂದಾಗಿ ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಹೊಸ ಸವಾಲಾಗಿ ಪರಿಣಮಿಸಿದ್ದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಗ್ರಾಹಕರು ಕೂಡಾ ಕರೋನಾ ವೈರಸ್ ಪರಿಣಾಮ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಹ್ಯುಂಡೈ ಕಂಪನಿಯ ಕ್ಲಿಕ್ ಬೈ ಪ್ಲ್ಯಾಟ್‌ಫಾರ್ಮ್ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಕರೋನಾ ವೈರಸ್ ಹೆಚ್ಚಳದ ನಂತರ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ.

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಕಾರು ಮಾರಾಟದಲ್ಲಿ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಕೂಡಾ ಇದೀಗ ಇದೀಗ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿದ್ದು, ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ಭಾರೀ ಪ್ರಮಾಣದ ಕಾರು ಮಾರಾಟವನ್ನು ದಾಖಲಿಸಿದೆ.

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಜೊತೆಗೆ ಹೊಸ ಕಾರುಗಳ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರು ಹೊಸ ಕಾರು ಮಾರಾಟ ಪ್ಲ್ಯಾಟ್‌ಫಾರ್ಮ್‌ಗೆ ಭೇಟಿ ನೀಡಿದ್ದು, ಇದು ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಸ್ಪಷ್ಟಪಡಿಸುತ್ತದೆ. ಇದೇ ಕಾರಣಕ್ಕೆ ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್ ಕೆಲವು ಹೊಸ ವೈಶಿಷ್ಟ್ಯತೆಗಳನ್ನು ತೆರೆದಿರುವ ಹ್ಯುಂಡೈ ಕಂಪನಿಯು ಆನ್ ಲೈನ್ ಕಾನ್ಫಿಗರೇಷನ್ ಮತ್ತು ಪೆಮೆಂಟ್ ಆಯ್ಕೆಗಳನ್ನು ಸರಳಗೊಳಿಸಿದೆ.

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಮನೆಯಲ್ಲಿಯೇ ಕುಳಿತು ಹೊಸ ಕಾರುಗಳ ಕುರಿತಾಗಿ ಇಂಚಿಂಚು ಮಾಹಿತಿಯನ್ನು ಶೋರೂಂ ಭೇಟಿಗಿಂತಲೂ ಆರಾಮದಾಯಕವಾಗಿ ವಿಕ್ಷಣೆ ಮಾಡಬಹುದಾಗಿದ್ದು, ಸರಳ ವಿಧಾನಗಳ ಮೂಲಕ ಕಾರು ಖರೀದಿ ಪ್ರಕ್ರಿಯೆಯನ್ನು ಮುಂದುವರಿಸಬಹುದು.

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಇನ್ನು ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇಂದು ಸಾಕಷ್ಟು ಪ್ರಯೋಜಕಾರಿಯಾಗಿದೆ.

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕ್ಲಿಕ್ ಟು ಬೈ ಪ್ಲ್ಯಾಟ್‌ಫಾರ್ಮ್‌ ಉನ್ನತೀಕರಿಸಿದ ಹ್ಯುಂಡೈ

ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಸಾಮಾಜಿಕ ಅಂತರ ಯಾವಾಗ ಅಗತ್ಯವಾಯಿತೋ ಆಗಿನಿಂದ ವಾಹನ ಮಾರಾಟಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಗುತ್ತಿದೆ.

Most Read Articles

Kannada
English summary
Hyundai Enhances Click To Buy User Experience. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X