ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳನ್ನು ತರುತ್ತಿದ್ದು, ಇತ್ತೀಚೆಗೆ ಎರಡು ಹೊಸ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡಿತ್ತು.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್‌ಗಳನ್ನು ಬಿಡುಗಡೆಯ ನಂತರ ವೆನ್ಯೂ ಕಾರಿನಲ್ಲಿ ಶೀಘ್ರದಲ್ಲೇ ಮತ್ತಷ್ಟು ಪ್ರಮುಖ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡುತ್ತಿರುವ ಬಗೆಗೆ ಮಾಹಿತಿ ಲಭ್ಯವಾಗಿದ್ದು, ಜೂನ್ ನಂತರ ಉತ್ಪಾದನೆ ಮಾಡಲಾದ ವೆನ್ಯೂ ಕಾರುಗಳಲ್ಲಿ ಹ್ಯುಂಡೈ ಕಂಪನಿಯು ಸ್ಟ್ಯಾಂಡರ್ಡ್ ಆಗಿ ವೈರ್‌ಲೆಸ್ ಅಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ನೀಡಲಾಗುತ್ತಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಜೊತೆಗೆ ಟೈರ್ ಪ್ರೆಶರ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಟಿಪಿಎಂಎಸ್) ಹಾಗೂ ಬ್ಲೂ ಲಿಂಕ್ ಸಂಪರ್ಕಿತ ಕಾರ್ ಟೆಕ್ನಾಲಜಿಯನ್ನು ನವೀಕರಿಸಿರುವ ಮಾಹಿತಿಗಳಿದ್ದು, ಶೀಘ್ರದಲ್ಲೇ ಹೊಸ ನವೀಕರಣಗಳ ಬಗೆಗೆ ಹ್ಯುಂಡೈ ಕಂಪನಿಯೇ ಮಾಹಿತಿ ಹಂಚಿಕೊಳ್ಳಲಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಹೊಸ ವೆರಿಯೆಂಟ್‌ಗಳಲ್ಲಿ ಹ್ಯುಂಡೈ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಇತ್ತೀಚೆಗೆ ಬಿಡುಗಡೆ ಮಾಡಲಾದ ಹೊಸ ಎಸ್(ಒ) ವೆರಿಯೆಂಟ್‌ನಲ್ಲಿ ಪೆಟ್ರೋಲ್ ಐಎಂಟಿ, ಪೆಟ್ರೋಲ್ 7 ಸ್ಪೀಡ್ ಡಿಸಿಟಿ ಮತ್ತು ಡೀಸೆಲ್ ಮ್ಯಾನುವಲ್ ಮತ್ತು ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ಡೀಸೆಲ್ ಮ್ಯಾನುವಲ್ ಸೇರ್ಪಡೆಗೊಳಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಹೊಸ ರೂಪಾಂತರ ಪರಿಚಯಿಸಿದ ನಂತರ ವೆನ್ಯೂ ಕಾರಿನ ಇ 1.5 ಡೀಸೆಲ್ ಮ್ಯಾನುವಲ್, ಎಸ್ 1.5 ಡೀಸೆಲ್ ಮ್ಯಾನುವಲ್, ಎಸ್ 1.0 ಲೀಟರ್ ಪೆಟ್ರೋಲ್ ಐಎಂಟಿ, ಎಸ್ 1.0 ಲೀಟರ್ ಪೆಟ್ರೋಲ್ ಡಿಸಿಟಿ ಮತ್ತು ಎಸ್ಎಕ್ಸ್ (ಒ) 1.0 ಲೀಟರ್ ಪೆಟ್ರೋಲ್ ಮ್ಯಾನುವಲ್ ರೂಪಾಂತರಗಳನ್ನು ಕೈಬಿಟ್ಟಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಎಸ್(ಒ) ಮತ್ತು ಎಸ್ಎಕ್ಸ್ (ಒ) ಎಕ್ಸಿ‌ಕ್ಲೂಟಿವ್ ಹೊಸ ರೂಪಾಂತರಗಳಲ್ಲಿ ಹಳೆಯ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ತಂತ್ರಜ್ಞಾನ ಸೌಲಭ್ಯಗಳನ್ನು ನೀಡಲಾಗಿದ್ದು, ಅಲಾಯ್ ವ್ಹೀಲ್ ಬದಲಾಗಿ ಸ್ಟೈಲಿಶ್ ಅಲಾಯ್ ಚಕ್ರಗಳನ್ನು ಮತ್ತು ಬ್ಲ್ಯೂ ಲಿಂಕ್ ಕಾರ್ ಕನೆಕ್ಟೆಡ್ ಫೀಚರ್ಸ್‌ಗಳನ್ನು ಉನ್ನತೀಕರಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

2019 ಮೇ ಅವಧಿಯಲ್ಲಿ ಬಿಡುಗಡೆಗೊಂಡಿದ್ದ ಹ್ಯುಂಡೈ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಕೆಲವೇ ಒಂದೇ ವರ್ಷದ ಅವಧಿಯಲ್ಲಿ 1 ಲಕ್ಷಕ್ಕೂ ಅಧಿಕ ಕಾರು ಮಾರಾಟ ದಾಖಲೆ ಕಂಡಿದ್ದು, ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ಟರ್ಬೋ ಎಂಜಿನ್ ಮಾದರಿಗೆ ಅತಿ ಹೆಚ್ಚು ಬೇಡಿಕೆ ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್(0) ಮತ್ತು ಎಸ್ಎಕ್ಸ್ ಪ್ಲಸ್ ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಕಾರು ಖರೀದಿಗೆ ಲಭ್ಯವಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಬಿಎಸ್-6 ಎಮಿಷನ್ ಕಡ್ಡಾಯ ನಂತರ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಜೋಡಿಸಲಾಗಿದ್ದು, ಟರ್ಬೊ ಪೆಟ್ರೋಲ್ ಮಾದರಿಯು 118-ಬಿಎಚ್‌ಪಿ, 172-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಮಾದರಿಯು 100-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ

ಈ ಮೂಲಕ ಬಿಎಸ್-6 ಹ್ಯುಂಡೈ ವೆನ್ಯೂ ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್, ಮಹಿಂದ್ರಾ ಎಕ್ಸ್​ಯುವಿ 300 ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ನೀಡುತ್ತಿದ್ದು, ಡ್ಯುಯಲ್ ಟೋನ್ ಮಾದರಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

Most Read Articles

Kannada
English summary
Hyundai Venue Will Get Wireless Android Auto Features. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X