ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ದಕ್ಷಿಣ ಕೊರಿಯಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ತನ್ನ ವೆನ್ಯೂ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ 2022ರ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್(Hyundai Venue) ಸಬ್-4 ಮೀಟರ್ ಎಸ್‍ಯುವಿಯನ್ನು ಟೆಸ್ಟ್ ನಡೆಸುತ್ತಿದ್ದಾರೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಈ ಹೊಸ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಮಾದರಿಯಲ್ಲಿ ಬಾಹ್ಯ ಮತ್ತು ಒಳಾಂಗಣಕ್ಕೆ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಇದರ ಯಾಂತ್ರಿಕತೆಯಲ್ಲಿ ಯಾವುದೆ ಬದಲಾವಣೆಗಳನ್ನು ಆಗುವ ಸಾಧ್ಯತೆಗಳಿಲ್ಲ. ಹೊಸ ಹುಂಡೈ ವೆನ್ಯೂ ಮರು-ವಿನ್ಯಾಸಗೊಳಿಸಲಾದ ಮುಂಭಾಗದ ಫಾಸಿಕವನ್ನು ಪಡೆಯುವ ಸಾಧ್ಯತೆಯಿದೆ. ಇದು ಬ್ರ್ಯಾಂಡ್‌ನ ಹೊಸ ಸಿಗ್ನೇಚರ್ ಸ್ಟೈಲಿಂಗ್ ಅನ್ನು ಹೊಂದಿರುತ್ತದೆ. ಇತ್ತೀಚೆಗೆ ಟೀಸರ್ ಮಾಡಿದ ಕ್ರೆಟಾ ಫೇಸ್‌ಲಿಫ್ಟ್‌ನಂತೆಯೇ, 2022ರ ಹ್ಯುಂಡೈ ವೆನ್ಯೂ ಮಾದರಿಯು ಕೂಡ ಟ್ಯೂಸಾನ್ -ಪ್ರೇರಿತ ಮುಂಭಾಗದ ಫಾಸಿಕದೊಂದಿಗೆ ಬರುವ ಸಾಧ್ಯತೆಯಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

2022ರ ಹ್ಯುಂಡೈ ವೆನ್ಯೂ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ಹೊಸದಾಗಿ ವಿನ್ಯಾಸಗೊಳಿಸಲಾದ ಪ್ಯಾರಾಮೆಟ್ರಿಕ್ ಗ್ರಿಲ್ ಅನ್ನು ಪಡೆಯುವ ಸಾಧ್ಯತೆಯಿದೆ, ಇದನ್ನು ನಾವು ಈಗಾಗಲೇ ಹೊಸ ಟ್ಯೂಸಾನ್ ನಲ್ಲಿ ನೋಡಿದ್ದೇವೆ. ಹೊಸ ಮಾದರಿಯು ಹೊಸ ಆಯತಾಕಾರದ ಹೆಡ್‌ಲ್ಯಾಂಪ್ ಯುನಿಟ್ ಗಳನ್ನು ಹೊಂದಿರುತ್ತದೆ, ಇದನ್ನು ಬಂಪರ್‌ಗೆ ಕಡಿಮೆ ಇರಿಸಲಾಗುತ್ತದೆ

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಇನ್ನು ಎಲ್‌ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು) ಹೊಸ ಟ್ಯೂಸಾನ್‌ನಂತೆ ಕಾಣುವ ನಿರೀಕ್ಷೆಯಿದೆ ಎಲ್ಇಡಿ ಡಿಆರ್‌ಎಲ್‌ಗಳ ಗ್ರಿಲ್ನ ಭಾಗವಾಗಿ ಕಾಣುತ್ತವೆ. ಈ ಎಸ್‍ಯುವಿ ನವೀಕರಿಸಿದ ಬಂಪರ್‌ಗಳು, ಹೊಸ ಅಲಾಯ್ ವ್ಹೀಲ್ ಗಳು ಮತ್ತು ಪರಿಷ್ಕೃತ ಟೈಲ್-ಲೈಟ್‌ಗಳನ್ನು ಸ್ವೀಕರಿಸುತ್ತದೆ. ಒಟ್ಟಾರೆ ಪ್ರೊಫೈಲ್ ಮತ್ತು ಸ್ಟೈಲಿಂಗ್ ಅಸ್ತಿತ್ವದಲ್ಲಿರುವ ಮಾದರಿಗೆ ಒಂದೇ ಆಗಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

2022ರ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯ ಇಂಟಿರಿಯರ್ ಬದಲಾವಣೆಗಳ ಬಗ್ಗೆ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಇದು ಹೊಸ ಬಣ್ಣದ ಯೋಜನೆ ಮತ್ತು ಸಜ್ಜುಗೊಳಿಸುವಿಕೆಯ ರೂಪದಲ್ಲಿ ಸಣ್ಣ ಬದಲಾವಣೆಗಳನ್ನು ಪಡೆಯುವ ನಿರೀಕ್ಷೆಯಿದೆ. ಹುಂಡೈ ಪ್ರಸ್ತುತ ಮಾದರಿಯಲ್ಲಿ ಕಾಣೆಯಾಗಿರುವ ಹೊಸ ವೈಶಿಷ್ಟ್ಯಗಳನ್ನು ಕೂಡ ಸೇರಿಸಬಹುದು.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಈ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೋ-ಡೀಸೆಲ್ ಅನ್ನು ಒಳಗೊಂಡಿರುವ ಅಸ್ತಿತ್ವದಲ್ಲಿರುವ ಎಂಜಿನ್ ಸೆಟ್-ಅಪ್ ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 83b ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಇನ್ನು 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, ಟರ್ಬೊ-ಡೀಸೆಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ 1.2 ಲೀಟರ್ ಪೆಟ್ರೋಲ್‌ನೊಂದಿಗೆ 5-ಸ್ಪೀಡ್ ಎಂಟಿ, 6-ಸ್ಪೀಡ್ ಎಂಟಿ ಸ್ಟ್ಯಾಂಡರ್ಡ್, ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಜೊತೆಗೆ 1.0 ಲೀಟರ್ಟರ್ಬೊ-ಯೂನಿಟ್ ಸೇರಿವೆ. ಸೋನೆಟ್‌ನಂತೆಯೇ, ವೆನ್ಯೂ ಡೀಸೆಲ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ಪಡೆಯಬಹುದು.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಈ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್ ಮತ್ತು ಎರ್ಮಜೆನ್ಸಿ ಅಸಿಸ್ಟ್ ಸೇರಿದಂತೆ ಹಲವಾರು ಫೀಚರ್‍ಗಳನ್ನು ಒಳಗೊಂಡಿವೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಇದರೊಂದಿಗೆ ಹ್ಯುಂಡೈ ಕಂಪನಿಯು ಟಾಪ್ ಸೆಲ್ಲಿಂಗ್ ಮಾಡೆಲ್ ಕ್ರೆಟಾವನ್ನು ಮಿಡ್-ಲೈಫ್ ಅಪ್‌ಡೇಟ್ ಮಾಡಲು ಸಜ್ಜಾಗಿದೆ. ಇದೀಗ ಹ್ಯುಂಡೈ ಕಂಪನಿಯು ಈ ಹೊಸ ಕ್ರೆಟಾ ಎಸ್‍ಯುವಿಯ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. 2022ರ ಹುಂಡೈ ಕ್ರೆಟಾ ಫೇಸ್ ಲಿಫ್ಟ್ ಅನ್ನು ಮೊದಲು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು, ನಂತರ ಭಾರತದಲ್ಲಿ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ನವೀಕರಿಸಿದ ಮಾದರಿಯನ್ನು ಮರೆಮಾಚಿದ ಅವತಾರದಲ್ಲಿ ಕಾಣಿಸಿಕೊಂಡಿದೆ. ಇದನ್ನು ಕೊರಿಯಾ ಮತ್ತು ಇಂಡೋನೇಷ್ಯಾದಲ್ಲಿ ಹಲವು ಬಾರಿ ಟೆಸ್ಟ್'ಗೆ ಒಳಪಡಿಸಲಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಇನ್ನು ಬಿಡುಗಡೆಯಾದ ಹೊಸ ಟೀಸರ್‌ಗಳು 2022ರ ಹುಂಡೈ ಕ್ರೆಟಾ ಹೊಸ ಟ್ಯೂಸಾನ್ ಎಸ್‍ಯುವಿ ಮಾದರಿ ಪ್ರೇರಿತ ಮುಂಭಾಗದ ಫಾಸಿಕವನ್ನು ಹೊಂದಿರುತ್ತದೆ ಎಂದು ಖಚಿತವಾಗಿದೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಪರಿಷ್ಕೃತ ಬಂಪರ್‌ಗಳು, ಹೊಸ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಫಾಗ್ ಲ್ಯಾಂಪ್ ಜೋಡಣೆ, ಹೊಸದಾಗಿ ವಿನ್ಯಾಸಗೊಳಿಸಿದ ಅಲಾಯ್ ವ್ಹೀಲ್ ಗಳು ಮತ್ತು ಸ್ಪ್ಲಿಟ್ ಟೈಲ್‌ಲ್ಯಾಂಪ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. 2022ರ ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್‌ನ ಆಂತರಿಕ ವಿನ್ಯಾಸವು ಬದಲಾಗದೆ ಉಳಿಯುತ್ತದೆ. ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮಿಡ್-ಲೈಫ್ ಅಪ್‌ಡೇಟ್ ನೊಂದಿಗೆ ಪರಿಚಯಿಸಲಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Venue ಫೇಸ್‌ಲಿಫ್ಟ್

ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಅನಾವರಣವಾಗಲಿದೆ. ಇನ್ನು ಮುಂದಿನ ವರ್ಷದ ಮಧ್ಯಂತರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹೊಸ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ XUV300, ಮಾರುತಿ ವಿಟಾರಾ ಬ್ರೆಝಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hyundai working on venue facelift major highlights to expect details
Story first published: Tuesday, October 26, 2021, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X