ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಕೆಲವು ಕಾರುಗಳ ರೂಫ್ ಮೇಲೆ ಜೋಡಿಸಲಾದ ರೇಲ್ ಗಳನ್ನು ಗಮನಿಸಬಹುದು. ಈ ರೇಲ್ ಗಳನ್ನು ರೂಫ್'ನ ಎರಡೂ ಬದಿಗಳಲ್ಲಿ ಜೋಡಿಸಲಾಗಿರುತ್ತದೆ. ಈ ರೇಲ್ ಗಳನ್ನು ಹೆಚ್ಚಾಗಿ ಕ್ರಾಸ್ಒವರ್ ಹಾಗೂ ಎಸ್‌ಯು‌ವಿ ಮಾದರಿಗಳ ರೂಫ್ ಮೇಲೆ ಕಾಣಬಹುದು. ಇವುಗಳನ್ನು ರೂಫ್ ರೇಲ್ಸ್ ಎಂದು ಕರೆಯಲಾಗುತ್ತದೆ. ಕಾರಿನ ರೂಫ್ ಮೇಲೆ ಸಾಮಗ್ರಿಗಳನ್ನು ಸಾಗಿಸಲು ರೂಫ್ ರೇಲ್ ಗಳನ್ನು ಬಳಸಲಾಗುತ್ತದೆ.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಇತ್ತೀಚಿಗೆ ಭಾರತದಲ್ಲಿ ಮಾರಾಟವಾಗುತ್ತಿರುವ ಕಾರುಗಳ ಮೇಲೆ ರೂಫ್ ರೇಲ್ ಗಳ ಟ್ರೆಂಡ್ ಹೆಚ್ಚುತ್ತಿದೆ. ಕಾರುಗಳ ಮೇಲಿರುವ ರೂಫ್ ರೇಲ್ ಗಳಿಂದಾಗುವಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಕಾರಿನಲ್ಲಿ ಆಗಾಗ್ಗೆ ಪ್ರಯಾಣಿಸುವವರಿಗೆ ರೂಫ್ ರೇಲ್ ಗಳಿಂದ ತುಂಬಾ ಉಪಯೋಗವಾಗುತ್ತದೆ. ಕಾರುಗಳ ಹಿಂಭಾಗದ ಬೂಟ್ ಪ್ರದೇಶದಲ್ಲಿ ಇರಿಸಲಾಗದ ಸಾಮಗ್ರಿಗಳನ್ನು ರೂಫ್ ರೇಲ್ ಸಹಾಯದಿಂದ ಕಾರುಗಳ ರೂಫ್ ಮೇಲೆ ಇಡಬಹುದು.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಕೆಲವು ಕಾರುಗಳಲ್ಲಿ ಸೀಟುಗಳನ್ನು ಮಡಚುವ ಸೌಲಭ್ಯವಿರುತ್ತದೆ. ಈ ಸೀಟುಗಳನ್ನು ಮಡಚಿದರೆ. ಕಾರಿನ ಬೂಟ್ ಸ್ಪೇಸ್ ಹೆಚ್ಚಾಗುತ್ತದೆ. ಅಂದರೆ ಕಾರಿನಲ್ಲಿ ಲಗೇಜ್ ಹಾಕಲು ಜಾಗ ಹೆಚ್ಚಾಗುತ್ತದೆ. ಆದರೆ ಎಲ್ಲಾ ಸೀಟುಗಳಲ್ಲೂ ಪ್ರಯಾಣಿಕರು ಕುಳಿತುಕೊಂಡರೆ ಬೂಟ್ ಸ್ಪೇಸ್ ತುಂಬಾ ಚಿಕ್ಕದಾಗುತ್ತದೆ. ಅಂತಹ ಸಂದರ್ಭಗಳಲ್ಲಿ ರೂಫ್ ರೇಲ್ ಗಳನ್ನು ಬಳಸಿ, ಕಾರಿನ ರೂಫ್ ಮೇಲೆ ಲಗೇಜ್ ಇಟ್ಟುಕೊಂಡು ಪ್ರಯಾಣಿಸ ಬಹುದು.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಆಗಾಗ ಅಡ್ವೆಂಚರ್ ಟೂರ್ ಬೆಳೆಸುವ ಪ್ರಯಾಣಿಕರಿಗೆ ರೂಫ್ ರೇಲ್ ಗಳು ತುಂಬಾ ಉಪಯುಕ್ತವಾಗಿವೆ. ಆಫ್ ರೋಡ್ ಬಯಸುವ ಪ್ರಯಾಣಿಕರು ಸಾಮಾನ್ಯವಾಗಿ ಕ್ಯಾಂಪ್'ಗಳಲ್ಲಿ ಉಳಿದುಕೊಳ್ಳುತ್ತಾರೆ. ಕ್ಯಾಂಪ್ ಗಳಲ್ಲಿ ಉಳಿದುಕೊಳ್ಳಲು ಹೆಚ್ಚು ಲಗೇಜ್ ಅಗತ್ಯವಿರುತ್ತದೆ. ಈ ಲಗೇಜ್ ಗಳನ್ನು ಕಾರುಗಳ ಮೇಲಿರುವ ರೂಫ್ ರೇಲ್ ಮೂಲಕ ಸಾಗಿಸಬಹುದು. ಭಾರತದಲ್ಲಿ ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳು ರೂಫ್ ರೇಲ್ ಹೊಂದಿವೆ.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ರೂಫ್ ರೇಲ್ ಇಲ್ಲದ ಕಾರುಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಆದರೆ ಅಗತ್ಯವಿದ್ದರೆ ಕಾರುಗಳಲ್ಲಿ ರೂಫ್ ರೇಲ್ ಅಳವಡಿಸಿಕೊಳ್ಳಬಹುದು. ಆದರೆ ಸನ್ ರೂಫ್ ಹೊಂದಿರುವ ಕಾರುಗಳಿಗೆ ರೂಫ್ ರೇಲ್ ಗಳು ಸೂಕ್ತವಲ್ಲ. ಕೆಲವು ದುಬಾರಿ ಕಾರುಗಳಲ್ಲಿ ಸನ್‌ರೂಫ್ ನೀಡದಿರಲು ಇದು ಸಹ ಪ್ರಮುಖ ಕಾರಣವಾಗಿದೆ. ಈ ಕಾರುಗಳಲ್ಲಿ ರೂಫ್ ರೇಲ್ ಗಳು ಅಗತ್ಯವಿರುವ ಕಾರಣಕ್ಕೆ ಸನ್ ರೂಫ್ ಗಳನ್ನು ನೀಡುತ್ತಿಲ್ಲ.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಕಾರಿನ ಆಕರ್ಷಣೆಯನ್ನು ಹೆಚ್ಚಿಸಲು ಬಯಸುವವರು ರೂಫ್ ರೇಲ್ ಅಳವಡಿಸಿ ಕೊಳ್ಳಬಹುದು. ಕಾರುಗಳಲ್ಲಿ ಹೆಚ್ಚು ಲಗೇಜ್ ಸಾಗಿಸಲು ಬಯಸುವವರಿಗೆ ರೂಫ್ ರೇಲ್ ಗಳು ನಿಜಕ್ಕೂ ವರದಾನವಾಗುತ್ತವೆ. ರೂಫ್ ರೇಲ್ ಗಳ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ಅವು ಕಾರಿನ ತೂಕವನ್ನು ಸಮತೋಲನಗೊಳಿಸಲು ಚಾಲಕನಿಗೆ ನೆರವಾಗುತ್ತವೆ.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಕಾರಿನ ರೂಫ್ ಮೇಲೆ ನಿರ್ದಿಷ್ಟ ತೂಕವನ್ನು ಇರಿಸಲು ಸಹಾಯ ಮಾಡುವ ಮೂಲಕ ಚಾಲಕನು ಕಾರಿನ ತೂಕವನ್ನು ಸರಿಯಾಗಿ ಸಮತೋಲನಗೊಳಿಸಲು ಸಹಾಯ ಮಾಡುವಲ್ಲಿ ರೂಫ್ ರೇಲ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುವ ಸಾಕಷ್ಟು ರೂಫ್ ರೇಲ್ ಗಳಿವೆ. ಆದರೆ ಹೆಚ್ಚು ತೂಕವನ್ನು ಹೊತ್ತೊಯ್ಯುವವರು ಬೆಲೆಯ ಬಗ್ಗೆ ಚಿಂತಿಸದೇ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಕಡಿಮೆ ಗುಣ ಮಟ್ಟದ ರೂಫ್ ರೇಲ್ ಗಳು ಕಡಿಮೆ ಬೆಲೆಗೆ ದೊರೆಯುವುದರಿಂದ ನಾನಾ ಸಮಸ್ಯೆಗಳು ಎದುರಾಗಬಹುದು.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಕಾರು ಖರೀದಿಸ ಬಯಸುವ 85% ನಷ್ಟು ಗ್ರಾಹಕರು ಇತರ ಸಂಗತಿಗಳಂತೆ ಬಣ್ಣಗಳಿಗೂ ಆದ್ಯತೆ ನೀಡುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಅನೇಕ ಜನರು ಕಾರುಗಳನ್ನು ಕಾರನ್ನು ಕೇವಲ ಸಾರಿಗೆ ಸಾಧನವಾಗಿ ಮಾತ್ರ ನೋಡುವುದಿಲ್ಲ ಬದಲಿಗೆ ತಮ್ಮ ವ್ಯಕ್ತಿತ್ವದ ಪ್ರತಿಬಿಂಬವೆಂದು ಪರಿಗಣಿಸುತ್ತಾರೆ. ಈ ಕಾರಣಕ್ಕೆ ಅವರು ಕಾರಿನ ಬಣ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಕಾರಿನ ಬಣ್ಣದಿಂದ ಕಾರು ಮಾಲೀಕರ ಗುಣ ಲಕ್ಷಣಗಳನ್ನು ನಿರ್ಧರಿಸಬಹುದು ಎಂದು ಹೇಳಲಾಗಿದೆ. ಹಲವು ಕಾರು ಮಾಲೀಕರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶವು ಕಂಡು ಬಂದಿದೆ. ಯಾವ ಯಾವ ಬಣ್ಣಗಳು ಕಾರು ಮಾಲೀಕರ ಗುಣ ಲಕ್ಷಣಗಳನ್ನು ತಿಳಿಸುತ್ತವೆ ಎಂಬುದನ್ನು ನೋಡುವುದಾದರೆ, ಕಪ್ಪು ಬಣ್ಣವು ಐಷಾರಾಮಿಗೆ ಸಂಬಂಧಿಸಿದೆ. ಕಪ್ಪು ಬಣ್ಣವನ್ನು ಶಕ್ತಿಯೊಂದಿಗೂ ಹೋಲಿಸಬಹುದು. ಕಪ್ಪು ಬಣ್ಣದ ಕಾರು ಮಾಲೀಕರು ಹೆಚ್ಚು ಆತ್ಮ ವಿಶ್ವಾಸ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಕಪ್ಪು ಬಣ್ಣದ ಕಾರು ಮಾಲೀಕರನ್ನು ಶಕ್ತಿ ಶಾಲಿಗಳು ಹಾಗೂ ಯಶಸ್ವಿಗಳು ಎಂದು ಪರಿಗಣಿಸಲಾಗುತ್ತದೆ. ಕಪ್ಪು ಬಣ್ಣದ ಕಾರು ಮಾಲೀಕರ ಚಾಲನಾ ಶೈಲಿ ವಿಭಿನ್ನವಾಗಿರುತ್ತದೆ. ಅವರು ರಸ್ತೆಯಲ್ಲಿ ಸೊಕ್ಕಿನ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಕಪ್ಪು ಬಣ್ಣದ ಕಾರು ಮಾಲೀಕರು ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಬಿಳಿ ಬಣ್ಣವು ಪ್ರಪಂಚದಾದ್ಯಂತ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಹೆಚ್ಚು ಜನರ ನೆಚ್ಚಿನ ಕಾರಿನ ಬಣ್ಣವಾಗಿದೆ. ಬಿಳಿ ಬಣ್ಣವು ಶುದ್ಧತೆ ಹಾಗೂ ಸೊಬಗಿನೊಂದಿಗೆ ಸಂಬಂಧ ಹೊಂದಿರುವುದು ಇದಕ್ಕೆ ಪ್ರಮುಖ ಕಾರಣ. ಬಿಳಿ ಬಣ್ಣದ ಕಾರು ಮಾಲೀಕರು ನೇರ ನಡೆ ನುಡಿಯ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಗಳಂತಹ ಸಾಧನಗಳಲ್ಲಿಯೂ ಬಿಳಿ ಬಣ್ಣವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಕಾರುಗಳ ರೂಫ್ ಮೇಲಿರುವ ರೂಫ್ ರೇಲ್'ಗಳಿಂದಾಗುವ ಪ್ರಯೋಜನಗಳಿವು

ಬಿಳಿ ಬಣ್ಣದ ಕಾರು ಮಾಲೀಕರು ತಮ್ಮನ್ನು ಯುವಕರು ಹಾಗೂ ಆಧುನಿಕರು ಎಂದು ಇತರರಿಗೆ ತೋರಿಸಲು ಬಯಸುತ್ತಾರೆ ಎಂದು ಹೇಳಲಾಗಿದೆ. ಬಿಳಿ ಬಣ್ಣದ ಕಾರು ಮಾಲೀಕರ ಚಾಲನಾ ಶೈಲಿಯು ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತದೆ ಎಂದು ಹೇಳಲಾಗಿದೆ. ಬಿಳಿ ಬಣ್ಣದ ಕಾರುಗಳ ಮಾಲೀಕರು ಸಂಚಾರ ನಿಯಮಗಳನ್ನು ಅನುಸರಿಸಲು ಬಯಸುತ್ತಾರೆ. ಸಂಚಾರಿ ನಿಯಮಗಳನ್ನು ಅನುಸರಿಸದ ವಾಹನ ಸವಾರರಿಂದ ಬಿಳಿ ಬಣ್ಣದ ಕಾರು ಮಾಲೀಕರು ಕಿರಿ ಕಿರಿಗೊಳ್ಳುತ್ತಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

Most Read Articles

Kannada
English summary
Important benefits of roof rails details
Story first published: Sunday, October 24, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X