ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾದ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಎಲೆಕ್ಟ್ರಿಕ್ ವಾಹನಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನಗಳ ಉತ್ಪಾದನೆಯಲ್ಲಿ ಚೀನಾ ಏಕಸ್ವಾಮ್ಯ ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದಂತೆ ಇದೀಗ ಭಾರತದಲ್ಲೂ ಪ್ರಮುಖ ಕಂಪನಿಗಳು ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿವೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿದ್ದರೂ ಪರಿಸರ ಸ್ನೇಹಿ ವಾಹನಗಳಿಗೆ ಇಂಧನ ಚಾಲಿತ ವಾಹನಗಳಂತೆ ಹೆಚ್ಚಿನ ಮಟ್ಟದ ಬೇಡಿಕೆ ಇಲ್ಲದಿರುವುದಕ್ಕೆ ಕಾರಣ ಏನು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಎಲೆಕ್ಟ್ರಿಕ್ ವಾಹನಗಳು ಸಾಮಾನ್ಯ ವಾಹನಕ್ಕಿಂತಲೂ ದುಪ್ಪಟ್ಟು ಬೆಲೆ ಹೊಂದಿರುವುದು ಮತ್ತು ಚಾರ್ಜಿಂಗ್ ಸೌಲಭ್ಯದ ಕೊರತೆಯು ಪ್ರಮುಖ ಸವಾಲುಗಳಾಗಿವೆ ಎನ್ನಬಹುದು.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸಲು ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಳ ಮಾಡಲಾಗುತ್ತಿದೆಯಾದರೂ ಇವಿ ಕಾರುಗಳ ದುಬಾರಿ ಬೆಲೆಯಿಂದಾಗಿ ಆಸಕ್ತಿ ಹೊಂದಿದ್ದರೂ ಕೂಡಾ ಅನೇಕ ಹೊಸ ವಾಹನಗಳ ಖರೀದಿದಾದರು ಇಂಧನ ಚಾಲಿತ ವಾಹನಗಳತ್ತ ಒಲವು ಹೊಂದಿದ್ದಾರೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಗೆ ಹಲವಾರು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆಯಾರೂ ಇವಿ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿಗಾಗಿ ವಿದೇಶಿ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವುದೇ ಇವಿ ವಾಹನಗಳ ಬೆಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ವಾಹನಗಳ ತಯಾಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಬೇಕಿರುವ ಶೇ.90 ಬಿಡಿಭಾಗಗಳು ಸ್ಥಳೀಯ ಲಭ್ಯವಿದ್ದರೂ ಕೆಲವು ತಾಂತ್ರಿಕ ಅಂಶಗಳಿಗೆ ಚೀನಿ ಮಾರುಕಟ್ಟೆಯನ್ನೇ ಅಲಂಭಿಸಿದ ಪರಿಣಾಮ ಇಂದು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಸಾಮಾನ್ಯ ವಾಹನಗಳಂತೆ ಜನಪ್ರಿಯತೆಗೊಳಿಸಲು ಸಾಧ್ಯವಾಗುತ್ತಿಲ್ಲ. ದುಬಾರಿ ಬೆಲೆ ಪರಿಣಾಮ ಇವಿ ವಾಹನ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು ಬಜೆಟ್ ಬೆಲೆಯಲ್ಲಿ ಇವಿ ವಾಹನಗಳನ್ನು ನೀರಿಕ್ಷಿಸುತ್ತಿದ್ದಾರೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಆದರೆ ಲೀಥಿಯಂ ಅಯಾನ್ ಬ್ಯಾಟರಿಗಾಗಿ ಬೇಕಿರುವ ಶೇ.100ರಷ್ಟು ಕಚ್ಚಾವಸ್ತುಗಳನ್ನು ಸಂಗ್ರಹ ಹೊಂದಿರುವ ಭಾರತವು ಇಂದಿಗೂ ಕೂಡಾ ಬ್ಯಾಟರಿ ಸೌಲಭ್ಯಕ್ಕಾಗಿ ಶೇ.100ರಷ್ಟು ಪ್ರಮಾಣದಲ್ಲಿ ಚೀನಿ ಮತ್ತು ತೈವಾನ್ ಮಾರುಕಟ್ಟೆಗಳನ್ನು ನೆಚ್ಚಿಕೊಂಡಿದ್ದು, ಭಾರತದಿಂದಲೇ ಹೆಚ್ಚಿನ ಮಟ್ಟದ ಕಚ್ಚಾವಸ್ತುಗಳು ರಫ್ತುಗೊಳ್ಳುತ್ತಿದೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಭಾರತದಿಂದ ಹೆಚ್ಚಿನ ಮಟ್ಟದ ಲೀಥಿಯಂ ಅಯಾನ್ ಬ್ಯಾಟರಿಗಾಗಿ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವ ಚೀನಾ ಕಂಪನಿಗಳು ವಿಶ್ವದ ಶೇ.80 ರಷ್ಟು ಲೀಥಿಯಂ ಬ್ಯಾಟರಿ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾಮ್ಯತೆ ಹೊಂದಿದ್ದು, ಹೆಚ್ಚಿನ ಮಟ್ಟದ ಕಚ್ಚಾವಸ್ತುಗಳನ್ನು ಹೊಂದಿರುವ ಭಾರತದಲ್ಲಿ ಇದುವರೆಗೂ ಒಂದೇ ಒಂದು ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಕಂಪನಿಗಳನ್ನು ಹೊಂದಿಲ್ಲ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಆಟೋ ಕಂಪನಿಗಳು ಭಾರತದಲ್ಲೇ ಪೂರ್ಣ ಪ್ರಮಾಣದ ಬ್ಯಾಟರಿ ಉತ್ಪಾದನೆ ಮಾಡುವ ಗುರಿಹೊಂದಿದ್ದು, ಹೊಸ ಘಟಕ ನಿರ್ಮಾಣಕ್ಕೆ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಉತ್ಪಾದನೆಗೆ ಸಿದ್ದಗೊಳ್ಳುತ್ತಿವೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಲೀಥಿಯಂ ಅಯಾನ್ ಬ್ಯಾಟರಿಗಳಿಗೆ ಬೇಕಿರುವ ಪ್ರಮುಖ ಬಿಡಿಭಾಗಗಳನ್ನು ಒದಗಿಸಲು ಕರ್ನಾಟಕದಲ್ಲಿ ನಿರ್ಮಾಣಗೊಂಡಿರುವ ಎಪ್ಸಿಲಾನ್ ಅಡ್ವಾನ್ಸ್ ಮಟಿರಿಯಲ್ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಇದು ಬ್ಯಾಟರಿ ನಿರ್ಮಾಣಕ್ಕೆ ಬೇಕಿರುವ ಗ್ರ್ಯಾಫೈಟ್ ಆನೋಡ್ ಉತ್ಪಾದನೆಗೆ ಚಾಲನೆ ನೀಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಕಲ್ಲಿದ್ದಲು ಟಾರ್ ಅನ್ನು ಗ್ರ್ಯಾಫೈಟ್ ಆನೋಡ್ ಆಗಿ ಪರಿವರ್ತಿಸಲಿರುವ ಎಪ್ಸಿಲಾನ್ ಅಡ್ವಾನ್ಸ್ ಮಟಿರಿಯಲ್ ಕಂಪನಿಯು ಲೀಥಿಯಂ ಅಯಾನ್ ಬ್ಯಾಟರಿ ಭಾಗಗಳ ತಯಾರಕ ಕಂಪನಿಗಳಿಗೆ ಪ್ರಮುಖ ಬಿಡಿಭಾಗಗಳನ್ನು ಪೂರೈಕೆ ಮಾಡಲಿದ್ದು, ಹೊಸ ಯೋಜನೆಯು ಬ್ಯಾಟರಿ ಬಿಡಿಭಾಗಳಿಗೆ ವಿದೇಶಿ ಮಾರುಕಟ್ಟೆಗಳನ್ನು ಅಲಂಬನೆಯನ್ನು ತಪ್ಪಿಸಲಿದೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

2020ರ ಅಗಸ್ಟ್‌ನಿಂದ ಕಾರ್ಯಾಚರಣೆ ನಡೆಸುತ್ತಿರುವ ಎಪ್ಸಿಲಾನ್ ಅಡ್ವಾನ್ಸ್ ಮಟಿರಿಯಲ್ ಕಂಪನಿಯನ್ನು ವಿಕ್ರಮ್ ಹಂದಾ ಅವರು ಮುನ್ನಡೆಸುತ್ತಿದ್ದು, ಕಲ್ಲಿದ್ದಲು ಟಾರ್ ಅನ್ನು ಮಾವ ಸಜ್ಜನ್ ಜಿಂದಾಲ್ ಅವರಿಗೆ ಸೇರಿದ ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯಿಂದ ಪಡೆದುಕೊಳ್ಳಲಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಜೆಎಸ್‌ಡಬ್ಲ್ಯು ಸ್ಟೀಲ್‌ ಉತ್ಪಾದನೆಯಿಂದ ಬರುವ ಕಚ್ಚಾ ವಸ್ತುಗಳಿಂದಲೇ ಗ್ರ್ಯಾಫೈಟ್ ಆನೋಡ್ ತಯಾರಿಸಲು ಎಪ್ಸಿಲಾನ್ ಕಂಪನಿಯು ಪ್ರಯತ್ನಿಸುತ್ತಿದ್ದು, ಈಗಾಗಲೇ ಹಲವಾರು ಸಂಶೋಧನೆಗಳನ್ನು ನಡೆಸಿ ಯಶಸ್ವಿಯಾಗಿರುವ ಕಂಪನಿಯ ಮತ್ತಷ್ಟು ಸುಧಾರಿತ ತಂತ್ರಜ್ಞಾನಗಳೊಂದಿಗೆ ಗ್ರ್ಯಾಫೈಟ್ ಆನೋಡ್ ಸಿದ್ದಪಡಿಸುವ ಪ್ರಯತ್ನದಲ್ಲಿದೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನಗಳ ಉದ್ಯಮಕ್ಕೆ ಪೂರಕವಾಗಿರುವ ಬ್ಯಾಟರಿ ಘಟಕಗಳಿಗೆ ಹೆಚ್ಚಿನ ಮಟ್ಟದ ಬಿಡಿಭಾಗಗಳ ಪೂರೈಕೆಯ ಗುರಿಹೊಂದಿರುವ ಎಪ್ಸಿಲಾನ್ ಕಂಪನಿಯು 2030ರ ವೇಳೆಗೆ 100,000 ಟನ್ ಸಿಂಥೆಟಿಕ್ ಗ್ರ್ಯಾಫೈಟ್ ಆನೋಡ್‌ಗಳನ್ನು ಉತ್ಪಾದಿಸಲು ಯೋಜನೆಯಲ್ಲಿದೆ.

ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ

ಹೊಸ ಯೋಜನೆಗಾಗಿ ಎಪ್ಸಿಲಾನ್ ಅಡ್ವಾನ್ಸ್ ಮಟಿರಿಯಲ್ ಕಂಪನಿಯು ಹೊಸ ಘಟಕದ ಮೇಲೆ ಸುಮಾರು ರೂ. 603 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಹೊಸ ಯೋಜನೆಯು ಬ್ಯಾಟರಿ ಉತ್ಪಾದನಾ ಕಂಪನಿಗಳಿಗೆ ಪೂರಕವಾಗುವುದರ ಜೊತೆಗೆ ಬ್ಯಾಟರಿ ಬೆಲೆ ಇಳಿಕೆ ಮಾಡಲು ಸಹಕಾರಿಯಾಗಲಿದೆ.

Most Read Articles

Kannada
English summary
India First Electric Car Battery Plant In Karnataka. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X