ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಸೋಲಾರ್ ಕಾರ್ ಪಾರ್ಕ್‌

ಭವಿಷ್ಯದಲ್ಲಿ ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳು ಹೊಸ ಬದಲಾವಣೆಗೆ ಕಾರಣವಾಗಲಿದ್ದು, ಹೊಸ ಯೋಜನೆಗೆ ಪೂರಕವಾಗಿ ವಾಹನ ಉತ್ಪಾದನಾ ಕಂಪನಿಗಳು ಬೃಹತ್ ಯೋಜನೆಗಳಿಗೆ ಚಾಲನೆ ನೀಡುತ್ತಿವೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ಸಹ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಸೋಲಾರ್ ಕಾರ್ ಪಾರ್ಕ್ ಆರಂಭಿಸಿದ್ದು, ಸೋಲಾರ್ ಕಾರ್ ಪಾರ್ಕ್‌ನಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣಗಳಿಗೆ ಪೂರೈಕೆ ಮಾಡುವ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ಪುಣೆ ಹೊರವಲಯದಲ್ಲಿರುವ ಟಾಟಾ ಕಾರು ಉತ್ಪಾದನಾ ಘಟಕದಲ್ಲಿ ಸೋಲಾರ್ ಕಾರ್ ಪಾರ್ಕ್ ನಿರ್ಮಾಣಗೊಂಡಿದ್ದು, 30 ಸಾವಿರ ಸ್ಕ್ವೇರ್ ಫಿಟ್‌ನಲ್ಲಿ ತಲೆ ಎತ್ತಿರುವ ಸೋಲಾರ್ ಪಾರ್ಕ್‌ನಲ್ಲಿ ವಾರ್ಷಿಕವಾಗಿ 86 ಲಕ್ಷ ಕಿ.ಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಹೋದರ ಸಂಸ್ಥೆಯಾದ ಟಾಟಾ ಪವರ್ ಜೊತೆಗೂಡಿ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯಿಂದ ಲಭ್ಯವಾಗುವ ವಿದ್ಯುತ್ ಅನ್ನು ಟಾಟಾ ಪವರ್ ಚಾರ್ಜಿಂಗ್ ನಿಲ್ದಾಣಗಳಿಗೆ ಬಳಕೆ ಮಾಡಿಕೊಳ್ಳಲಿದೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ಟಾಟಾ ಸೋಲಾರ್ ಕಾರ್ ಪಾರ್ಕ್‌ನಲ್ಲಿ ಉತ್ಪಾದನೆಗೊಳ್ಳುವ ವಿದ್ಯುತ್ ಅನ್ನು ಖರೀದಿಸಲು ಈಗಾಗಲೇ ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ ಕಂಪನಿಗಳ ನಡುವೆ ಹೊಸ ಒಪ್ಪಂದ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದ್ದು, ಸೋಲಾರ್ ಕಾರ್ ಪಾರ್ಕ್‌ನಲ್ಲಿ ವಿದ್ಯುತ್ ಉತ್ಪಾದನೆಯ ಜೊತೆಗೆ ಸ್ಟಾಕ್ ಯಾರ್ಡ್‌ನಲ್ಲಿ ಕಾರುಗಳಿಗೆ ಉತ್ತಮ ರಕ್ಷಣೆ ಖಾತ್ರಿಯಾಗುತ್ತದೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ಈ ಮೊದಲು ಸ್ಟಾಕ್‌ ಯಾರ್ಡ್‌ನಲ್ಲಿ ಶೆಡ್ ಸೌಲಭ್ಯವಿದ್ದರೂ ಕೂಡಾ ಕೆಲವು ಬಾರಿ ನೈಸರ್ಗಿಕ ವಿಕೋಪಗಳಿಂದಾಗುವ ಹಾನಿಯು ಕಂಪನಿಗೆ ಕೆಲವು ನಷ್ಟ ಉಂಟು ಮಾಡುತ್ತಿತ್ತು. ಇದೀಗ 6.2 ಎಂವಿವಿ ಗುಣಮಟ್ಟದ ಸೋಲಾರ್ ಪ್ಯಾನೆಲ್‌ಗಳಿಂದಾಗಿ ಸ್ಟಾಕ್ ಮಾಡಲಾಗುವ ವಾಹನಗಳಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ದೊರೆಯುತ್ತಿದೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ ಕಂಪನಿಗಳು ಹೊಸ ಯೋಜನೆಯ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಕೇವಲ 10 ತಿಂಗಳ ಅವಧಿಯಲ್ಲಿ ಈ ಸೋಲಾರ್ ಕಾರ್ ಪಾರ್ಕ್ ಯಾರ್ಡ್ ನಿರ್ಮಾಣ ಮಾಡಲಾಗಿದೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ಹೊಸ ಸೋಲಾರ್ ಕಾರ್ ಪಾರ್ಕಿಂಗ್ ಪ್ರದೇಶದಿಂದ ಟಾಟಾ ಪವರ್ ಕಂಪನಿಯು ವಾರ್ಷಿಕವಾಗಿ 86 ಲಕ್ಷ ಕಿ.ಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುವುದರ ಜೊತೆಗೆ ಪರೋಕ್ಷವಾಗಿ 7 ಸಾವಿರ ಟನ್(ವಾರ್ಷಿಕವಾಗಿ) ಕಾರ್ಬನ್ ತಗ್ಗಿಸಬಹುದೆಂದು ಅಂದಾಜಿಸಲಾಗಿದೆ.

ಹಲವು ಹೊಸ ದಾಖಲೆಗಳಿಗೆ ಕಾರಣವಾಗಲಿದೆ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌

ಒಂದು ಅಂದಾಜಿನ ಪ್ರಕಾರ ಟಾಟಾ ಕಂಪನಿಯ ಹೊಸ ಸೋಲಾರ್ ಕಾರ್ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ಪ್ಯಾನೆಲ್ ನಿಗದಿತ ಅವಧಿಯ ಬಳಕೆಯ ಅವಧಿಯೊಳಗೆ ವಿದ್ಯುತ್ ಬಳಕೆಯೊಂದಿಗೆ ಇವಿ ವಾಹನಗಳ ಮೂಲಕ ಒಟ್ಟು 1.6 ಲಕ್ಷ ಟನ್ ಕಾರ್ಬನ್ ಕಡಿತಗೊಳಿಸಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
India’s Largest Solar Car Park In Pune Setup By Tata Motors. Read in Kannada.
Story first published: Friday, June 18, 2021, 22:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X