ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಇತ್ತೀಚೆಗೆ ಹಗುರವಾದ ಗುಂಡು ನಿರೋಧಕ ವಾಹನಗಳನ್ನು ಭಾರತೀಯ ವಾಯುಪಡೆಗೆ ತಲುಪಿಸಿದೆ. ವಾಯುಪಡೆಗೆ ತಲುಪಿಸಿರುವ ಎಲ್ಲಾ ವಾಹನಗಳನ್ನು ಭಾರತೀಯ ವಾಯುಪಡೆಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಹಿಂದೂಜಾ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಭಾರತದಲ್ಲಿ ಲಘು ಹಾಗೂ ಭಾರೀ ಕಮರ್ಷಿಯಲ್ ವಾಹನಗಳ ಜೊತೆಗೆ ರಕ್ಷಣಾ ಸಾಧನಗಳನ್ನು ಸಹ ಉತ್ಪಾದಿಸುತ್ತದೆ.

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಈ ಹಗುರವಾದ ಬುಲೆಟ್ ಪ್ರೂಫ್ ವಾಹನಗಳು ಲಾಕ್ಹೀಡ್ ಮಾರ್ಟಿನ್'ರವರ ಕಾಮನ್ ವೆಹಿಕಲ್ ನೆಕ್ಸ್ಟ್ ಜನರೇಷನ್ (ಸಿವಿಎನ್‌ಜಿ)ಯ ಆವೃತ್ತಿಯಾಗಿದೆ ಎಂದುಅಶೋಕ್ ಲೇಲ್ಯಾಂಡ್ ಕಂಪನಿ ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಈ ವಾಹನಗಳನ್ನು ಟೆಕ್ನಾಲಜಿ ಟ್ರಾನ್ಸ್‌ಫರ್ ಅಡಿಯಲ್ಲಿ ಲಾಕ್‌ಹೀಡ್ ಮಾರ್ಟಿನ್'ನಿಂದ ಪಡೆಯಲಾಗಿದೆ. ಈ ವಾಹನಗಳು ಸಂಪೂರ್ಣವಾಗಿ ಸ್ಥಳೀಯವಾಗಿದ್ದು, ಇವುಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಈ ಬಗ್ಗೆ ಮಾತನಾಡಿರುವ ಅಶೋಕ್ ಲೇಲ್ಯಾಂಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿಪಿನ್ ಸೋಂಧಿ, ಸಶಸ್ತ್ರ ಪಡೆಗಳಿಗೆ ವಾಹನ ಸರಬರಾಜು ಮಾಡುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಈ ಮೂಲಕ ರಾಷ್ಟ್ರ ಸೇವೆಯಲ್ಲಿ ನಮ್ಮ ವಾಹನಗಳನ್ನು ಬಳಸಿಕೊಳ್ಳಲು ನಮಗೆ ಅವಕಾಶ ದೊರೆತಂತಾಗಿದೆ. ಈ ವಾಹನಗಳು ನಮ್ಮ ಕಂಪನಿಯು ಕಷ್ಟದ ಸಂದರ್ಭಗಳಲ್ಲಿ ಅಗತ್ಯವಾದ ತಿಳುವಳಿಕೆಯ ಬಲವಾದ ಅರ್ಥದೊಂದಿಗೆ ಸಂಯೋಜಿಸಲ್ಪಟ್ಟ ಸಾಮರ್ಥ್ಯದ ಮತ್ತೊಂದು ಉದಾಹರಣೆಯಾಗಿವೆ.

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಭಾರತೀಯ ಸಶಸ್ತ್ರ ಪಡೆಗಳ ವಿಶ್ವಾಸಾರ್ಹ ಪಾಲುದಾರನಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ. ಈ ಮೂಲಕ ರಕ್ಷಣಾ ಸಾಧನಗಳು ಹಾಗೂ ವಾಹನಗಳಲ್ಲಿ ಭಾರತವನ್ನು ಹೆಚ್ಚು ಸ್ವಾವಲಂಬಿಗಳನ್ನಾಗಿ ಮಾಡಲು ಬಯಸುತ್ತೇನೆ ಎಂದು ಹೇಳಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಈ ಬುಲೆಟ್ ಪ್ರೂಫ್ ವಾಹನಗಳು ಹೆಚ್ಚಿನ ಆಫ್ ಲೋಡ್ ಸಾಮರ್ಥ್ಯವನ್ನು ಹೊಂದಿವೆ. ಈ ವಾಹನಗಳು ಮಣ್ಣು, ಮರಳು, ಬಂಡೆಗಳು, ಆಳವಿಲ್ಲದ ನೀರಿನಂತಹ ಪ್ರದೇಶಗಳಲ್ಲಿ ಸುಲಭವಾಗಿ ಸಾಗಲಿವೆ.

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಈ ವಾಹನಗಳು 6 ಜನ ಸಿಬ್ಬಂದಿಯನ್ನು ಸಾಗಿಸಬಲ್ಲವು, ಜೊತೆಗೆ ಅಗತ್ಯವಿರುವ ಸಾಗಿಸಲು ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ. ಈ ವಾಹನಗಳು ಒಳಗೆ ಕುಳಿತ ಸೈನಿಕರನ್ನು ಯಾವುದೇ ರೀತಿಯ ದಾಳಿಯಿಂದಲೂ ರಕ್ಷಿಸುತ್ತವೆ ಎಂದು ಅಶೋಕ್ ಲೇಲ್ಯಾಂಡ್ ಕಂಪನಿ ಹೇಳಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತೀಯ ವಾಯುಪಡೆಗೆ ಬುಲೆಟ್ ಪ್ರೂಫ್ ವಾಹನಗಳನ್ನು ತಲುಪಿಸಿದ ಅಶೋಕ್ ಲೇಲ್ಯಾಂಡ್

ಈ ವಾಹನವು ಬುಲೆಟ್ ಹಾಗೂ ಗ್ರೆನೇಡ್ ದಾಳಿಯನ್ನು ಸಹ ತಡೆದುಕೊಳ್ಳಬಲ್ಲದು. ಎಲ್ಲಾ ಬುಲೆಟ್ ಪ್ರೂಫ್ ವಾಹನಗಳು ಹೆಚ್ಚಿನ ಚಾಲನಾ ಸಾಮರ್ಥ್ಯವನ್ನು ಹೊಂದಿವೆ. ಇದು ಯಾವುದೇ ಪರಿಸ್ಥಿತಿಯಲ್ಲಿ ಜನರನ್ನು ರಕ್ಷಿಸುವ ವಿಶ್ವಾಸವನ್ನು ನೀಡುತ್ತದೆ.

Most Read Articles

Kannada
English summary
Indian Air force gets light bullet proof vehicles from Ashok Leyland. Read in Kannada.
Story first published: Saturday, April 17, 2021, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X