ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಭಾರತದಲ್ಲಿ ಕಳೆದ ವಾರದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ ಪಂದ್ಯಗಳು ಶುರುವಾಗಿವೆ. ಐಪಿಎಲ್ ಹೊಡಿ ಬಡಿ ಆಟಕ್ಕೆ ಹೆಸರಾಗಿದ್ದು, ಯುವಜನತೆಯ ನೆಚ್ಚಿನ ಕ್ರೀಡೆಯಾಗಿದೆ.

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಐಪಿಎಲ್'ನಲ್ಲಿ ಬಹುತೇಕ ಯುವ ಆಟಗಾರರೇ ತುಂಬಿದ್ದಾರೆ. ಕೆಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಯಶಸ್ಸು ಕಂಡ ನಂತರ ಈ ಯುವ ಕ್ರಿಕೆಟಿಗರುಹೊಸ ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ಭಾರತದ ಯುವ ಕ್ರಿಕೆಟಿಗರು ಹಾಗೂ ಅವರ ಬಳಿಯಿರುವ ಕಾರುಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ಅಸಾಧಾರಣ ಪ್ರದರ್ಶನವನ್ನು ತೋರಿದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಅವರು ಆಸ್ಟ್ರೇಲಿಯಾದಿಂದ ಹಿಂದಿರುಗಿದ ನಂತರ ಜನವರಿಯಲ್ಲಿ ಬಿಎಂಡಬ್ಲ್ಯು 520 ಡಿ ಸೆಡಾನ್ ಕಾರು ಖರೀದಿಸಿದರು. ಇದರ ಜೊತೆಗೆ ಮೊಹಮ್ಮದ್ ಸಿರಾಜ್ ಅವರು ಮಹೀಂದ್ರಾ ಅಂಡ್ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರಿಂದ ಹೊಸ ಮಹೀಂದ್ರಾ ಥಾರ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ.

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಸೂರ್ಯ ಕುಮಾರ್ ಯಾದವ್

ಬಲಗೈ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ ಅವರು ಹಲವು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಅವರು ಅತ್ಯುತ್ತಮ ಪ್ರದರ್ಶವನ್ನೇ ತೋರುತ್ತಿದ್ದರೂ ಸಹ ಅಂತರ್ ರಾಷ್ಟ್ರೀಯ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿರಲಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಅವರು ಇತ್ತೀಚೆಗೆ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಸೂರ್ಯ ಕುಮಾರ್ ಯಾದವ್ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಕಾರ್ ಅನ್ನು ಖರೀದಿಸಿದ್ದಾರೆ.

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಯುವರಾಜ್ ಸಿಂಗ್

ಅಂತರ್ ರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿರುವ ಯುವರಾಜ್ ಸಿಂಗ್ ಹಲವು ಕಾರುಗಳನ್ನು ಹೊಂದಿದ್ದಾರೆ. ಈ ವರ್ಷದ ಜನವರಿಯಲ್ಲಿ ಯುವರಾಜ್ ಮಿನಿ ಕೂಪರ್ ಕಂಟ್ರಿಮ್ಯಾನ್ ಕಾರು ಖರೀದಿಸಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಇದನ್ನು ಅವರ ಪತ್ನಿ ಹ್ಯಾಝಲ್'ರವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರು ಜೆಸಿಡಬ್ಲ್ಯೂ-ಪ್ರೇರಿತ ಆವೃತ್ತಿಯಾಗಿದ್ದು, ಜಾನ್ ಕೂಪರ್ ವರ್ಕ್ಸ್ ಏರೋ ಡೈನಾಮಿಕ್ ಕಿಟ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ರಿಷಭ್ ಪಂತ್

ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಾಗೂ ಈಗ ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಭ್ ಪಂತ್ ಫೋರ್ಡ್ ಮುಸ್ಟಾಂಗ್ ಜಿಟಿ ಕಾರು ಖರೀದಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಈ ಕಾರು ಹಳದಿ ಬಣ್ಣದಲ್ಲಿದೆ. ಇದರ ಜೊತೆಗೆ ರಿಷಭ್ ಪಂತ್ ಐಷಾರಾಮಿ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಎಸ್‌ಯುವಿಯನ್ನು ಸಹ ಹೊಂದಿದ್ದಾರೆ.

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಇಶಾನ್ ಕಿಶನ್

ಇಶಾನ್ ಕಿಶನ್ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಈ ಬಾರಿಯ ಐಪಿಎಲ್'ನಲ್ಲಿ ಇವರು ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿದ್ದಾರೆ. ಇಶಾನ್ ಕಿಶನ್ ಇತ್ತೀಚೆಗೆ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಟಿ ನಟರಾಜನ್

ಟಿ ನಟರಾಜನ್ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚೆಗೆ ಅವರು ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಆನಂದ್ ಮಹೀಂದ್ರಾ ಅವರಿಂದ ಉಡುಗೊರೆಯಾಗಿ ಪಡೆದಿದ್ದಾರೆ.

ಭಾರತೀಯ ಕ್ರಿಕೆಟಿಗರ ಬಳಿಯಿರುವ ಹೊಸ ಕಾರುಗಳಿವು

ಶಾರ್ದೂಲ್ ಠಾಕೂರ್

ಶಾರ್ದುಲ್ ಠಾಕೂರ್ ಸಹ ಆನಂದ್ ಮಹೀಂದ್ರಾ ಅವರಿಂದ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ಕೇವಲ ಒಂದು ಟೆಸ್ಟ್‌ ಪಂದ್ಯವನ್ನು ಆಡಿದರೂ ಸಹ ತಮ್ಮದೇ ಆದ ಛಾಪನ್ನು ಮೂಡಿಸಿದರು.

Most Read Articles

Kannada
English summary
Indian Cricket players recent cars. Read in Kannada.
Story first published: Friday, April 16, 2021, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X