ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ದೇಶದ ಅತಿ ದೊಡ್ಡ ತೈಲ ಕಂಪನಿಗಳಲ್ಲಿ ಒಂದಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಸುಧಾರಿತ ಡೀಸೆಲ್ ಉತ್ಪನ್ನವನ್ನು ಪರಿಚಯಿಸಿದ್ದು, ವಾಹನಗಳ ದಕ್ಷತೆಯನ್ನು ಹೆಚ್ಚಿಸುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ದೇಶಾದ್ಯಂತ 10,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದ್ದು, ಇದರ ಜೊತೆಗೆ ಕಂಪನಿಯು ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಎಂಬ ಹೊಸ ಉತ್ಪನ್ನವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ದೇಶದ ಕೆಲವು ಭಾಗಗಳಲ್ಲಿ ಮಾತ್ರ ಮಾರಾಟವಾಗಲಿದ್ದು, 63 ಪ್ರಮುಖ ನಗರಗಳ 126 ಪೆಟ್ರೋಲ್ ಬಂಕ್ ಗಳಲ್ಲಿ ಮಾತ್ರ ಈ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಖರೀದಿಗೆ ಲಭ್ಯವಿರಲಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಪರೀಕ್ಷಾರ್ಥವಾಗಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಮಾರಾಟಕ್ಕೆ ಇಡಲಾಗಿದ್ದು, ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಶೀಘ್ರದಲ್ಲೇ ದೇಶದ ಇತರ ಭಾಗಗಳಲ್ಲಿಯೂ ಲಭ್ಯವಿರಲಿದೆ ಎಂದು ವರದಿಯಾಗಿದೆ. ಡೀಸೆಲ್ ಅನ್ನು ಡೀಸೆಲ್ ಮಲ್ಟಿ ಫಂಕ್ಷನಲ್ ಸಂಯೋಜಕವಾಗಿ, ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಆಗಿ ಪರಿವರ್ತಿಸಲಾಗಿದೆ. ಈ ಡೀಸೆಲ್ ಇಂಧನ ಮಿತವ್ಯಯವಾಗಿದ್ದು, ಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗಲಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಉತ್ಪನ್ನವು ಸಾಮಾನ್ಯ ಡೀಸೆಲ್‌ಗಿಂತಲೂ 5% ನಿಂದ 6% ನಷ್ಟು ಹೆಚ್ಚು ಸುಧಾರಿತ ಇಂಧನ ಆರ್ಥಿಕತೆಯನ್ನು ಹೊಂದಿದ್ದು, ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಪ್ರತಿ ಲೀಟರ್‌ಗೆ ಕೇವಲ 130 ಗ್ರಾಂ ನಷ್ಟು ಕಾರ್ಬನ್-ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ. ಕಾರ್ಬನ್ ಮಾನಾಕ್ಸೈಡ್ ಹೊರ ಸೂಸುವಿಕೆ ಪ್ರಮಾಣವು 5.29% ಆದರೆ, ಎನ್‌ಒಎಕ್ಸ್ ಹೊರ ಸೂಸುವಿಕೆ ಪ್ರಮಾಣವು 4.99% ನಷ್ಟಾಗಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇಂಡಿಯನ್ ಆಯಿಲ್ ಕಂಪನಿಯ ಪ್ರಕಾರ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಉತ್ಪನ್ನವು ಎಂಜಿನ್ ಶಬ್ದವನ್ನು ಕಡಿಮೆ ಮಾಡಲು ನೆರವಾಗುವುದಲ್ಲದೆ ಈ ಡೀಸೆಲ್ ಎನ್‌ಎ‌ಸಿಇ ಪ್ರಮಾಣೀಕೃತವಾಗಿದೆ. ಇದರಿಂದ ಹೊಸ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಎಲ್ಲಾ ರೀತಿಯಲ್ಲೂ ವಿಶೇಷವಾದ ಡೀಸೆಲ್ ಆಗಿ ಕಾಣುತ್ತದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಜೊತೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ One4U ಎಂಬ ಇಂಧನ ಉಡುಗೊರೆ ಕಾರ್ಡ್ ಅನ್ನು ಸಹ ಪರಿಚಯಿಸಿದ್ದು, ಉತ್ತಮ ಇಂಧನ ದಕ್ಷತೆ ಹೊಂದಿರುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಶೀಘ್ರದಲ್ಲೇ ದೇಶಾದ್ಯಂತ ಮಾರಾಟಗೊಳ್ಳಲಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೊಸ ವಾಹನಗಳ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಎಂಜಿನ್ ಕಾರ್ಯಕ್ಷಮತೆಗಾಗಿ ಗುಣಮಟ್ಟದ ಇಂಧನ ಬಳಕೆಗೆ ಗ್ರಾಹಕರು ಆದ್ಯತೆ ನೀಡುತ್ತಿರುವುದು ಹೊಸ ವಾಹನಗಳ ಪರ್ಫಾಮೆನ್ಸ್‌ಗೆ ಪೂರಕವಾದ ಇಂಧನ ಉತ್ಪನ್ನಗಳು ಅವಶ್ಯಕವಾಗಿವೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಯ ಸಮರದಿಂದಾಗಿ ದುಬಾರಿಯಾಗುತ್ತಿರುವ ಇಂಧನ ಬೆಲೆಯನ್ನು ನಿಯಂತ್ರಿಸಲು ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹೆಚ್ಚಿಸುತ್ತಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

2023ರ ವೇಳೆಗೆ ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ. 20ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕಲು ಎಥೆನಾಲ್ ಮಿಶ್ರಣ ಪ್ರಮಾಣವನ್ನು ನಿಗದಿತ ಅವಧಿಯೊಳಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಪ್ರಸಕ್ತ ವರ್ಷದ ಎಥೆನಾಲ್ ಪೂರೈಕೆಯಲ್ಲಿ ಭಾರತ ಸರ್ಕಾರವು ಶೇಕಡಾ 10ರಷ್ಟು ಸಂಯೋಜಿತ ಎಥೆನಾಲ್ ಪೆಟ್ರೋಲ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಸಂಯೋಜಿತ ಇಂಧನಕ್ಕಾಗಿ ಕನಿಷ್ಠ 4 ಬಿಲಿಯನ್ ಲೀಟರ್ ಎಥೆನಾಲ್ ಅಗತ್ಯವಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಸಾಮಾನ್ಯವಾಗಿ ಎಥೆನಾಲ್‌ ತೈಲಕ್ಕೆ ಬೃಹತ್‌ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗಿ ನಷ್ಟವಾಗುವ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್‌ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಕರ್ನಾಟಕ ರಾಜ್ಯದಲ್ಲಿಯೇ ಸುಮಾರು 50 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್‌ನ್ನು ಉತ್ಪಾದಿಸಿ 400 ಮಿಲಿಯನ್‌ ಲೀಟರ್‌ ಎಥೆನಾಲ್‌ ಸಂಗ್ರಹಿಸುವ ಸಿದ್ದತೆ ನಡೆದಿದೆ.

ಹೆಚ್ಚು ಮೈಲೇಜ್ ನೀಡುವ ಎಕ್ಸ್‌ಟ್ರಾ ಗ್ರೀನ್ ಡೀಸೆಲ್ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಶರ್ಕರಾಂಶವಿರುವ ಸಸ್ಯಗಳು, ಕೃಷಿ ತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್‌ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

Most Read Articles

Kannada
English summary
Ioc launched new age high performance xtragreen diesel details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X