ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಬಿಎಸ್-6 ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯ ಬಿಡುಗಡೆಯನ್ನು ಕಾರಣಾಂತರಗಳಿಂದ ಮುಂದೂಡಿಕೆ ಮಾಡುತ್ತಾ ಬಂದಿದ್ದ ಇಸುಝು ಕಂಪನಿಯು ಹೊಸ ಕಾರನ್ನು ಇದೇ ತಿಂಗಳು 10ರಂದು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ.

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಹೊಸ ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸದ್ಯ ಸ್ಟ್ಯಾಂಡರ್ಡ್, ಹೈ ಜೆಡ್, ಜೆಡ್ ಪ್ರೆಸ್ಟಿಸ್ ಮಾದರಿಗಳನ್ನು ಹೊಂದಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಹೊಸ ಕಾರು ಹೈ-ಲ್ಯಾಂಡರ್ ವೆರಿಯೆಂಟ್ ಪಡೆದುಕೊಳ್ಳಲಿದೆ.

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಹೊಸ ಪಿಕ್‌ಅಪ್ ವಾಹನದಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಟೈಲ್‌ಗೆಟ್ ವಿಭಾಗವನ್ನು ಬದಲಾವಣೆಯಾಗಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಪಿಕ್ಅಪ್ ಎಸ್‌ಯುವಿಯ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಬದಲಾವಣೆ ಮಾಡಲಾಗಿದೆ.

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಡೀಲರ್ಸ್ ಯಾರ್ಡ್ ‌ನಲ್ಲಿ ಕಂಡುಬಂದ ಬೆಸ್ ವೆರಿಯೆಂಟ್‌ನಲ್ಲೇ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಹೈ ಎಂಡ್ ಮಾದರಿಯಲ್ಲಿ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಬಿಎಸ್-6 ವಿ-ಕ್ರಾಸ್ ಮಾದರಿಯು 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಅನ್ನು ಹೊಂದಿರಲಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 161 ಬಿಹೆಚ್‌ಪಿ ಮತ್ತು 360 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯಲ್ಲಿ ಕಂಪನಿಯು 2 ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ಆಲ್ ವೀಲ್ಹ್ ಡ್ರೈವ್ ಆಯ್ಕೆ ನೀಡಿದ್ದು, ಆಲ್ ವೀಲ್ಹ್ ಡ್ರೈವ್‌ನೊಂದಿಗೆ ಟಾರ್ಕ್ ಮೋಡ್ ಮೂಲಕ ಶಿಫ್ಟ್-ಆನ್-ದಿ-ಫ್ಲೈ ಸಿಸ್ಟಂ ಅನ್ನು ಪಡೆಯುತ್ತದೆ.

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಹೊಸ ಡಿ-ಮ್ಯಾಕ್ಸ್ ಟ್ರಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಮತ್ತು ಆಂಟಿ-ರೋಲ್ ಬಾರ್ ಮತ್ತು ಸಾಫ್ಟ್ ರೈಡ್, ಹಿಂಭಾಗದಲ್ಲಿ ಲೀಫ್ ಸ್ಪಿರ್ಗ್ ಡಬಲ್ ವಿಷ್ಬೋನ್ ಅನ್ನು ಒಳಗೊಂಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಹೊಸ ಕಾರಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಇದರಲ್ಲಿ ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್ ಬ್ರೇಕ್, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿರಲಿದ್ದು, 3,095 ಎಂಎಂ ಉದ್ದದ ವ್ಹೀಲ್‌ಬೇಸ್‌‌ನೊಂದಿಗೆ 5,295 ಎಂಎಂ ಉದ್ದ, 1,860 ಎಂಎಂ ಅಗಲ ಮತ್ತು 1,840 ಎಂಎಂ ಎತ್ತರ ಹೊಂದಿದೆ.

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಸ್ಪೈನೆಲ್ ರೆಡ್, ಟೈಟಾನಿಯಂ ಸಿಲ್ವರ್, ಕಾಸ್ಮಿಕ್ ಬ್ಲ್ಯಾಕ್, ಗಲೆನಾ ಗ್ರೇ, ಸಿಲ್ಕಿ ವೈಟ್ ಪರ್ಲ್, ಸರ್ಪೈರ್ ಬ್ಲೂ ಮತ್ತು ಸ್ಪ್ಲಾಷ್ ವೈಟ್ ಎಂಬ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಇದೇ ತಿಂಗಳು 10ರಂದು ಬಿಡುಗಡೆಯಾಗಲಿದೆ 2021ರ ಇಸುಝು ಡಿ-ಮ್ಯಾಕ್ಸ್ ಹೈಲ್ಯಾಂಡರ್ ಪಿಕ್ಅಪ್

ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಎಸ್), ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ), ಸೈಡ್ ಏರ್‌ಬ್ಯಾಗ್, ರೂಫ್ ಕರ್ಟನ್ ಮತ್ತು ಟ್ರಾಸ್‌ಫರ್‌ಕೇಸ್ ಪ್ರೊಟೆಕ್ಟರ್ ಫೀಚರ್ ಗಳನ್ನು ಒಳಗೊಂಡಿರಲಿದ್ದು, ಹೊಸ ಪಿಕ್ಅಪ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ. 21 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

Most Read Articles

Kannada
Read more on ಇಸುಝು isuzu
English summary
Isuzu D-Max Hi-Lander to be launched in India on 10 May, 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X